ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ವತಿಯಿಂದ ಬದ್ರ್ ದಿನಾಚರಣೆ, ಇಫ್ತಾರ್ ಕೂಟ ಸಮಾರಂಭ

0

ಉಪ್ಪಿನಂಗಡಿ: ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಗಂಡಿಬಾಗಿಲು ಇದರ ವತಿಯಿಂದ ಬದ್ರ್ ದಿನಾಚರಣೆ ಮತ್ತು ಇದರ ಸಲುವಾಗಿ ರಮಳಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟ ಸಮಾರಂಭ ಎ. 19ರಂದು ಜರಗಿತು.

ಬದ್ರ್ ದಿನಾಚರಣೆ ಸಲುವಾಗಿ ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಮಾತನಾಡಿದ ಬದ್ರ್ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.

ಸಮಾರಂಭದಲ್ಲಿ ಕುತುಬಿಯ್ಯಾ ಜುಮಾ ಮಸೀದಿಯ ಮುಅದ್ದಿಂ ಶರೀಫ್ ಅರ್ಶದಿ, ಸದರ್ ಮುಅಲ್ಲಿಂ ಉಮೈರ್ ಮಿಸ್ಬಾಯಿ, ಅಧ್ಯಕ್ಷ ಬಿ. ಆದಂ ಹಾಜಿ, ಕಾರ‍್ಯದರ್ಶಿ ಎಸ್. ಆದಂ ಹಾಜಿ, ಕೋಶಾಧಿಕಾರಿ ಹಸೈನಾರ್ ಹಾಜಿ, ಪದಾಧಿಕಾರಿಗಳಾದ ಜಿ. ಮಹಮ್ಮದ್ ರಫೀಕ್, ಅಬ್ದುಲ್ ರಜಾಕ್ ಮರ‍್ವೇಲ್, ಎಸ್. ಅಬ್ದುಲ್ ರಹಿಮಾನ್, ಜಿ. ಅಬ್ದುಲ್ ರಜಾಕ್, ಅಬ್ದುಲ್ ರಜಾಕ್ ಮುಸ್ಲಿಯಾರ್, ನೂಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಲತೀಫ್, ಕಾರ‍್ಯದರ್ಶಿ ಝಿಯಾದ್, ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಆಶಿಫ್, ಝಕರಿಯಾ, ಸ್ಥಳೀಯ ಪ್ರಮುಖರಾದ ಆದಂ ಮದನಿ, ಯಾಕೂಬ್ ಕುಂಟಲ್ತಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here