ಕೊಳ್ತಿಗೆ : ಘನತ್ಯಾಜ್ಯ ವಿಲೇವರಿ ಘಟಕ ಉದ್ಘಾಟನೆ

0
  • ಚಿಗುರು ಸಂಜೀವಿನಿ ಒಕ್ಕೂಟಕ್ಕೆ ಶಾಸಕರು ಕೀ ಹಸ್ತಾಂತರಿಸಿದರು


ಪುತ್ತೂರು; ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಗ್ರಾಪಂನ ಘನ ತ್ಯಾಜ್ಯ ಘಟಕದ ಉದ್ಘಾಟನಾ ಕಾರ್ಯಕ್ರಮ ಎ.29 ರಂದು ಉದ್ಘಾಟನೆಗೊಂಡಿತು.ನೂತನ ಘನ ತ್ಯಾಜ್ಯ ಘಟಕವನ್ನು ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಂ ಸುಂದರ್ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮದಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆ ಮಾಡಿರುವುದು ಗ್ರಾಮದ ಸ್ವಚ್ಚತೆಯ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಪ್ರತೀಯೊಬ್ಬರು ಗ್ರಾಮ ಸ್ವಚ್ಚವಾಗಿಡುವಲ್ಲಿ ಸಹಕಾರ ನೀಡಬೇಕಿದೆ. ಇಂದು ಉದ್ಘಾಟನೆಯಾಗಿರುವ ಘಟಕದಿಂದ ಗ್ರಾಮ ಸ್ವಚ್ಚವಾಗಿರುವಲ್ಲಿ ಸಹಕಾರಿಯಾಗಲಿ ಎಂದು ಹೇಳಿದರು.

ಪುತ್ತೂರು ಶಾಸಕರಾದ ಸಂಜಿವ ಮಠಂದೂರುವರು ವಾಹನ ಕೀಯನ್ನು ಚಿಗುರು ಸಂಜೀವಿನಿನ ಒಕ್ಕೂಟಕ್ಕೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಸ್ವಚ್ಚ ಊರು ನಮ್ಮಿಂದ ಸಾಧ್ಯವಾದರೆ ಸ್ವಚ್ಚ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಕೊಳ್ತಿಗೆ ಗ್ರಾಮದಲ್ಲಿ ಪ್ರಾಂರಭಗೊಂಡ ಘನತ್ಯಾಜ್ಯ ಘಟಕದಿಂದ ಗ್ರಾಮದ ಕಸಕ್ಕೆ ಮುಕ್ತಿ ದೊರೆಯಲಿದೆ. ಗ್ರಾಮಸ್ಥರ ಸಹಕಾರದಿಂದ ಇದೆಲ್ಲವೂ ಸಾದ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಗಿರಿಜಾದನಂಜಯ ಪೂಜಾರಿ, ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರುಗಳಾದ ವಸಂತ ರೈ, ಯತೀಂದ್ರ, ಲತಾಕುಮಾರಿ, ಗ್ರಾಮಸ್ಥರಾದ ಭಾಸ್ಕರ ರೈ ಕಂಟ್ರಮಜಲು, ತೀರ್ಥಾನಂದ ದುಗ್ಗಳ, ಸತೀಶ್ ಪಾಂಬಾರು, ಸ್ವಚ್ಚತಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ದಿ ಅಧಿಕಾರಿ ಸುನಿಲ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ವಂದಿಸಿದರು. ಗ್ರಾಪಂ ಸಿಬ್ಬಂದಿಗಳಾದ ಶಶಿಕಲಾ, ಜಯ, ನಾಗೆಶ್, ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here