ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರಗತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರಿನಲ್ಲಿ 2021-22ನೇ ಸಾಲಿನಲ್ಲಿ ವಿಶೇಷವಾಗಿ ಸಾಧನೆಗೈದ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.

 10ನೇ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಾದ ಅಶ್ವಿಜ ಕೆ (586), ರುಕಿಯತ್ ಅನುಶ್ (571), ತನ್ವಿತ(571), ಕತಿಜತ್ ಅಜ್ಮಿಯ (571), ಅಮೀರ್ ಸುಹೈಲ್(561), ಯದುವಂಶಿಕ್ ಕೆ. ಆರ್ (554), ಮೊಹಮ್ಮದ್ ಅನೀಸ್ (536), ಮೊಹಮ್ಮದ್ ಆಫ್ಸಾಲ್ (545) ಇವರನ್ನು ಪೋಷಕರೊಂದಿಗೆ ಗೌರವಿಸಲಾಯಿತು.

ಸಂಸ್ಥೆಯ ಸಂಚಾಲಕ ಗೋಕುಲನಾಥ್ ಪಿ.ವಿ ಹಾಗೂ ಕೆ. ಹೇಮಲತಾ ಗೋಕುಲನಾಥ್ ರವರು ಮಾತನಾಡಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಪರೀಕ್ಷೆಗೆ ತಯಾರುಗೊಳಿಸಿ, ವಿದ್ಯಾರ್ಥಿಗಳಿಂದ ಇಂತಹ ಅದ್ಭುತವಾದ ಫಲಿತಾಂಶ ಬಂದಿರುವುದು ಪ್ರಗತಿಗೆ ಸಂದ ಗೌರವ. ಈ ಫಲಿತಾಂಶಕ್ಕೆ ಕಾರಣೀಭೂತರಾದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕ ವೃಂದದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಸ್ಥೆಯ ಉಪನ್ಯಾಸಕವೃಂದ ಉಪಸ್ಥಿತರಿದ್ದರು. ಸುಹೈದ ಕಾರ್ಯಕ್ರಮ ನಿರೂಪಿಸಿದರು. ಅಪರ್ಣ ಎ. ಸ್ವಾಗತಿಸಿ ಹಾನಿಯ ವಂದಿಸಿದರು.

LEAVE A REPLY

Please enter your comment!
Please enter your name here