ಅಗಳಿ ಕುಟುಂಬದ ಸೂತಕ ಆಚರಣೆ ಕಡಿತ- ವಿವಿಧ ಪೂಜಾ ಕಾರ್ಯಕ್ರಮ

0

 

ಕಾಣಿಯೂರು: ಅಗಳಿ ಕುಟುಂಬದ ಸೂತಕ ಆಚರಣೆಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅಗಳಿ ತರವಾಡು ಮನೆಯಲ್ಲಿ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಯವರ ಆದೇಶದ ಪ್ರಕಾರ ಗಣೇಶ್ ಭಟ್ ಮಾಡಾವು ಇವರ ನೇತೃತ್ವದಲ್ಲಿ ಜೂ 2 ಮತ್ತು 3ರಂದು ನಡೆಯಿತು. ಜೂ 2ರಂದು ರಾತ್ರಿ ಸುದರ್ಶನ ಹೋಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜೂ 3ರಂದು ಬೆಳಗ್ಗೆ ಗಣಪತಿ ಹವನ, ಸುಕೃತ ಹೋಮ(ತಿಲ ಹೋಮ) ಬ್ರಾಹ್ಮಣ ಆರಾಧನೆ, ಮುಡಿಪು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಇನ್ನು ಮುಂದೆ ಅಗಳಿ ಕುಟುಂಬದಲ್ಲಿ 8 ಕವಲುಗಳಾಗಿ ವಿಂಗಡಿಸಿ ಮೂರು ತಲೆಮಾರಿನವರೆಗೆ ಸೂತಕ ಆಚರಣೆ ಮಾಡುವುದು. ಕುಟುಂಬದ ಎಲ್ಲಾ ಮನೆಯವರಿಗೆ ಒಂದು ದಿನದ ಸೂತಕ ಆಚರಣೆ ಮಾಡುವುದು (ಸಪಿಂಡ ಸಂಬಂಧ) ಎಂದು ಕುಟುಂಬಸ್ಥರೆಲ್ಲರು ಸೇರಿ ನಿರ್ಣಯಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ನಾರಾಯಣ ಗೌಡ ಬೈತಡ್ಕ, ಬಾಲಕೃಷ್ಣ ಗೌಡ ಅಗಳಿ ಕಾಯರ್‌ಪುಳಿ, ಸುಂದರ ಅಜಿಲ ಅಜಿರಂಗಳ ಉಪಸ್ಥಿತರಿದ್ದರೆಂದು ತರವಾಡು ಮನೆಯ ಯಜಮಾನರಾದ ಉದಯ ಕುಮಾರ್ ಅಗಳಿ, ಶಿವರಾಮ ಗೌಡ ಅಗಳೀ ಹಾಗೂ ಅಗಳಿ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here