ಆಲಂಕಾರು ಜ್ಞಾನ ಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ

0

 

ಆಲಂಕಾರು: ಆಲಂಕಾರು ಜ್ಞಾನ ಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ HI – TECH ಕಂಪ್ಯೂಟರ್ ತರಬೇತಿ ಕೇಂದ್ರದ ವಿಭಾಗವನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ದಂಪತಿಗಳು ದೀಪಾ ಬೆಳಗಿಸಿ ಉದ್ಘಾಟಿಸಿ ಅಧುನಿಕ ಯುಗದಲ್ಲಿ ವಿದ್ಯೆಯೊಂದಿಗೆ ಕಂಪ್ಯೂಟರ್ ಜ್ಞಾನ ಅತೀ ಅಗತ್ಯ ಈ ದಿಸೆಯಲ್ಲಿ ಕಂಪ್ಯೂಟರ್ ವಿಭಾಗ ಉದ್ಘಾಟನೆ ಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದು ಇನ್ನೂ ಮುಂದೆ ಜ್ಞಾನ ಸುಧಾ ವಿದ್ಯಾಬೋದನಾ ಕೇಂದ್ರದ ಶಾಖೆಗಳು ಇನ್ನಷ್ಡು ಕಡೆ ವಿಸ್ತಾರಗೊಳ್ಳಲಿ ಎಂದು ಹೇಳಿ ಶುಭಹಾರೈಸಿದರು.

 

ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತುರವರು ರಿಬ್ಬನ್ ಕತ್ತರಿಸಿ ಅಧಿಕೃತ ಚಾಲನೆ ನೀಡಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಆಲಂಕಾರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ಶ್ರೀ ದುರ್ಗಾ ಟವರ್ ್ಸ ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಆಲಂಕಾರು ದುರ್ಗಾಂಬಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ನವೀನ್ ರೈ, ಮುಖ್ಯಗುರುಗಳಾದ ಶ್ರೀಪತಿರಾವ್, ನಿವೃತ್ತ ಮುಖ್ಯಗುರುಗಳಾದ ಸತ್ಯನಾರಾಯಣ ಭಟ್ಟ್, ಕೋಟಿ ಚೆನ್ನಯ ಮಿತ್ರವೃಂದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಗೌರವ ಸಲಹೆಗಾರರಾದ ರವಿ ಮಾಯಿಲ್ಗ, ವಿಜಯ ಕೆದಿಲ, ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್, ಆಲಂಕಾರು ಸಿ.ಎ ಬ್ಯಾಂಕ್ ಉಪಾದ್ಯಕ್ಷ ಪ್ರದೀಪ್ ರೈ ಮನವಳಿಕೆ,ಶರವೂರು ದುರ್ಗಾಪರಮೇಶ್ವರೀ ಅರ್ಚಕ ರಾಘವೇಂದ್ರ ಪ್ರಸಾದ್ , ನಿವೃತ್ತ ಮುಖ್ಯಗುರುಗಳಾದ ರಮಾನಾಥ ರೈ ಮನವಳಿಕೆ, ರಾಧಾಕೃಷ್ಣ ರೈ ಮನವಳಿಕೆ, ಸದಾನಂದ ಮಡ್ಯೋಟ್ಟು, ಮುಖ್ಯಗುರುಗಳಾದ ನಿಂಗರಾಜು ಹಾಗು ಆಲಂಕಾರು ಜೆ.ಸಿ.ಐ ಘಟಕದ ಪದಾದಿಕಾರಿಗಳು,ಸದಸ್ಯರು, ಸೇರಿದಂತೆ ಹಲವು ಮಂದಿ ಅಗಮಿಸಿ ಶುಭಾಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಜನಾರ್ಧನ ಬಿ.ಎಲ್ ರವರು ಪ್ರಾಸ್ತವಿಕ ವಾಗಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಎಲ್.ಕೆ.ಜಿ ಯಿಂದ ಪಿ.ಯು.ಸಿತನಕ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವುದರೊಂದಿಗೆ ಇದೀಗ 3 ತಿಂಗಳ,6 ತಿಂಗಳು ಹಾಗು ಒಂದು ವರ್ಷದ ಡಿಪ್ಲೋಮೋ ಕೋರ್ಸುಗಳು ಹಾಗು ಪಿ.ಯು.ಸಿ ಆದವರಿಗೆ ಕಂಪ್ಯೂಟರ್ ಟೀಚರ್‍ಸ್ ತರಬೇತಿ ಕೋರ್ಸು, ಪರಿಶಿಷ್ಟಜಾತಿ,ಪಂಗಡದವರಿಗೆ ಹಾಗು ಬಿ.ಪಿ.ಎಲ್ ಕಾಡ್೯ದಾರರಿಗೆ ಉಚಿತ ಕೋರ್ಸು ನೀಡಲಾಗುವುದು ಅತೀ ಶೀಘ್ರದಲ್ಲಿ ರಾಮಕುಂಜದಲ್ಲಿ ನಮ್ಮ ಸಂಸ್ಥೆಯ ಶಾಖೆಯನ್ನು ತೆರೆಯುವುದಾಗಿ ತಿಳಿಸಿದರು. ಅಸಕ್ತರು 9481229381,9741427339 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ  ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತ್ತಾಯ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here