ಕಡಬ: ಕೊಂಬಾರು ಗ್ರಾ.ಪಂ.ನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ರಾಜಿನಾಮೆ ಅಂಗೀಕಾರಗೊಂಡಿದೆ. ಗ್ರಾ.ಪಂ. ಅಧ್ಯಕ್ಷೆಯಾಗಿದ್ದ ಸುಶೀಲ ಶಿವಪ್ರಸಾದ್, ಹಾಗೂ ಉಪಾಧ್ಯಕ್ಷೆ ಸರಿತಾ ಅವರು ರಂದು ರಾಜಿನಾಮೆ ನೀಡಿದ್ದು, 10 ದಿನಗಳವರೆಗೆ ರಾಜಿನಾಮೆಯನ್ನು ಹಿಂದೆಗೆದುಕೊಳ್ಳದೆ ಇರುವುದರಿಂದ ಜು.20ರಂದು ಪುತ್ತೂರು ಸಹಾಯಕ ಕಮೀಷನರ್ ರಾಜಿನಾಮೆ ಅಂಗೀಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೊಂಬಾರು ಗ್ರಾ.ಪಂ.ನಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆ ಖಾಲಿಯಾಗಿದೆ. ಮುಂದಿನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಈ ಸ್ಥಾನಕ್ಕಾಗಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ. ಕೊಂಬಾರು ಗ್ರಾ.ಪಂ.ನಲ್ಲಿ 9 ಸ್ಥಾನಗಳಿದ್ದು ಇಲ್ಲಿ 9 ಜನ ಸದಸ್ಯರೂ ಬಿಜೆಪಿ ಪಕ್ಷ ಬೆಂಬಲಿತ ಸದಸ್ಯರಾಗಿದ್ದಾರೆ. ಮುಂದಿನ ಅಧ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಪಕ್ಷದ ವತಿಯಿಂದ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.