ಪುತ್ತೂರು ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸಭೆ

0
  • ಬಂಟರ ಚಾವಡಿ ನಿರ್ಮಾಣಕ್ಕೆ 2.70 ಎಕ್ರೆ ಜಾಗ ಖರೀದಿ- ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು: ತಾಲೂಕು ಬಂಟರ ಸಂಘದ ವತಿಯಿಂದ ನಿರ್ಮಾಣವಾಗಲಿರುವ ಬಂಟರ ಚಾವಡಿ ಹಾಗೂ ವಿನೂತನ ಶೈಲಿಯ ಬಯಲು ರಂಗ ಮಂದಿರಕ್ಕೆ ಪುತ್ತೂರು ಬೈಪಾಸ್ ಬಳಿ 2.70 ಎಕ್ರೆ ಸ್ಥಳವನ್ನು ಖರೀದಿ ಮಾಡಲಾಗಿದ್ದು, ಇದರ ಎಲ್ಲಾ ಕೆಲಸ ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಅವರು ಜು. 27 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಪುತ್ತೂರು ತಾಲೂಕು ಬಂಟರ ಸಂಘದ ಕರ‍್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ತಾಲೂಕು ಬಂಟರ ಸಂಘದ ವತಿಯಿಂದ ನಿರ್ಮಾಣವಾಗಲಿರುವ ಬಂಟರ ಚಾವಡಿಗೆ ಸಮಾಜ ಭಾಂದವರು ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಸಂತೋಷ ತಂದಿದೆ- ಹೇಮನಾಥ ಶೆಟ್ಟಿ :

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬಂಟರ ಚಾವಡಿ ನಿರ್ಮಾಣಕ್ಕೆ ಜಾಗ ಖರೀದಿ ಆಗಿರುವುದು ತುಂಬಾ ಸಂತೋಷ ತಂದಿದೆ ಎಂದರು.

ಬಹುದೊಡ್ಡ ಕೊಡುಗೆ- ಸೀತಾರಾಮ ರೈ:

ಬಂಟರ ಸಂಘದ ಮಾಜಿ ಅಧ್ಯಕ್ಷ `ಸಹಕಾರಿ ರತ್ನ’ ಸವಣೂರು ಸೀತಾರಾಮ ರೈಯವರು ಮಾತನಾಡಿ ಬಂಟರ ಸಂಘದ ವತಿಯಿಂದ ನಿರ್ಮಾಣವಾಗಲಿರುವ ಬಂಟರ ಚಾವಡಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು, ಇದರ ಎಲ್ಲಾ ಕರ‍್ಯಗಳಿಗೆ ಪೂರ್ಣರೀತಿಯ ಸಹಕಾರ ನೀಡುವಂತೆ ವಿನಂತಿಸಿದರು.

ಹೆಸರು ಪಡೆಯಲಿ-ದಯಾನಂದ ರೈ:

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಬಂಟರ ಚಾವಡಿ ನಿರ್ಮಾಣದ ಮೂಲಕ ಬಂಟ ಸಮಾಜದ ಕೀರ್ತಿ ಮತ್ತಷ್ಟು ಹೆಸರನ್ನು ಪಡೆಯಲಿ ಎಂದರು.


ಪುತ್ತೂರು ತಾಲೂಕು ಬಂಟರ ಸಂಘದ ಪ್ರದಾನ ಕರ‍್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು.

ಸಮಾರಂಭದಲ್ಲಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲುಕು ಸಮಿತಿ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಮಾತೃ ಸಂಘದ ನಿರ್ದೇಶಕರುಗಳಾದ ಚಂದ್ರಹಾಸ್ ಶೆಟ್ಟಿ ಎನ್, ನಿರಂಜನ್ ರೈ ಮಠಂತಬೆಟ್ಟು, ಬಂಟರ ಸಂಘದ ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ರೋಶನ್ ರೈ ಬನ್ನೂರು, ಬಂಟರ ಸಂಘದ ಪದಾಧಿಕಾರಿಗಳಾದ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ರವೀಂದ್ರನಾಥ ರೈ ನುಳಿಯಾಲು, ದಯಾನಂದ ರೈ ಕೊರ್ಮಂಡ, ಮನೋಹರ್ ರೈ ಕಡಬ, ಎಂ. ಆರ್.ಜಯಕುಮಾರ್ ರೈ ಮಿತ್ರಂಪಾಡಿ, ರಾಮಯ್ಯ ರೈ ತಿಂಗಳಾಡಿ, ಎ.ಕೆ ಜಯರಾಮ ರೈ ಕೆಯ್ಯೂರು, ಗೀತಾ ಶೆಟ್ಟಿ, ಹರಿಣಾಕ್ಷಿ ಜೆ.ಶೆಟ್ಟಿ, ಸ್ವರ್ಣಲತಾ ಜೆ.ರೈ, ಮಾಧವಿ ರೈ ಉಪ್ಪಿನಂಗಡಿ, ಜಗಮೋಹನ್ ರೈ ಸೂರಂಬೈಲು, ಅಮ್ಮಣ್ಣ ರೈ ಪಾಪೆಮಜಲು, ಶ್ರೀಧರ್ ರೈ ಎಚ್, ಅನಂದ ರೈ ಸೂರಂಬೈಲು, ಪ್ರಕಾಶ್ ರೈ ಸಾರಕರೆ, ನಾರಾಯಣ ರೈ ಬಾರಿಕೆ ಪರ್ಪುಂಜ, ವಿಕ್ರಮ್ ಶೆಟ್ಟಿ ಅಂತರ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪಿ.ಡಿ. ಕೃಷ್ಣ ಕುಮಾರ್ ರೈ ದೇವಸ್ಯ, ಸದಾಶಿವ ರೈ ಸೂರಂಬೈಲು, ದಿವ್ಯನಾಥ ಶೆಟ್ಟಿ ಕಾವು, ಸಂತೋಷ್ ಕುಮಾರ್ ರೈ ಇಳಂತಾಜೆ, ಗಣೇಶ್ ರೈ ಮಿತ್ರಂಪಾಡಿ, ತಿಲಕ್ ರೈ ಕುತ್ಯಾಡಿ, ಸೀತಾರಾಮ ರೈ ಕೆದಂಬಾಡಿಗುತ್ತು, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಸಂಕಪ್ಪ ರೈ ಪುತ್ತೂರು, ರಾಧಾಕೃಷ್ಣ ರೈ ಪರಾರಿಗುತ್ತು, ಸುಭಾಶ್ ಶೆಟ್ಟಿ ಅರುವಾರ, ಉಮಾಪ್ರಸಾದ್ ರೈ ನಡುಬೈಲು, ಭಾಸ್ಕರ್ ರೈ ಎಂ, ರವಿಚಂದ್ರ ರೈರವರುಗಳು ಉಪಸ್ಥಿತರಿದ್ದರು.

ಸಮಾಜ ಬಾಂಧವರ ಪೂರ್ಣ ಸಹಕಾರ ಬೇಕು

ಬಂಟರ ಸಂಘದ ಬಹುದೊಡ್ಡ ನಿರೀಕ್ಷೆಯಾಗಿದ್ದ ಬಂಟರ ಚಾವಡಿ ನಿರ್ಮಾಣಕ್ಕೆ ಪುತ್ತೂರು ಬೈಪಾಸ್ ಬಳಿ 2.70 ಎಕ್ರೆ ಜಾಗ ಖರೀದಿಯಾಗಿದ್ದು, ಮುಂದೆ ಈ ಜಾಗದಲ್ಲಿ ನಿರ್ಮಾಣವಾಗಲಿರುವ ಬಂಟರ ಚಾವಡಿ ಹಾಗೂ ಬಯಲು ರಂಗಮAದಿರ ನಿರ್ಮಾಣಕ್ಕೆ ಸಮಾಜ ಬಾಂಧವರು ಪೂರ್ಣರೀತಿ ಸಹಕಾರವನ್ನು ನೀಡಬೇಕು

ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷರು- ಬಂಟರ ಸಂಘ, ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here