ಪುತ್ತೂರು: ದಕ್ಷಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ಮಾರಾಟ ಮಾಡಿರುವ ಏಜೆನ್ಸಿಯಲ್ಲಿ ಕುಂಬ್ರ ಮೆಲ್ವಿನ್ ಮೊಂತೆರೋರವರು ತಾಲೂಕು ಮಟ್ಟದ ಉತ್ತಮ ಡೀಲರ್ ಆಗಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆ.09 ರಂದು ಪುತ್ತೂರಿನಲ್ಲಿ ನಡೆದ ನಂದಿನಿ ಡೀಲರ್ಗಳ ಸಮಾಲೋಚನಾ ಸಭೆಯಲ್ಲಿ ಮೆಲ್ವಿನ್ ಮೊಂತೆರೋರವರಿಗೆ ಪ್ರಶಸ್ತಿ ಪತ್ರ ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈಯವರು ಪ್ರಶಸ್ತಿ ಪತ್ರ, ಪುರಸ್ಕಾರ ನೀಡಿ ಅಭಿನಂದಿಸಿದರು. ಕಳೆದ ವರ್ಷ ಮೆಲ್ವಿನ್ರವರು ತೃತೀಯ ಸ್ಥಾನ ಪಡೆದುಕೊಂಡಿದ್ದರು. ಇವರು ಕಳೆದ ಹಲವು ವರ್ಷಗಳಿಂದ ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್ನಲ್ಲಿ ಮೊಂತೆರೋ ಸ್ವೀಟ್ಸ್ ಶಾಪ್ ನಡೆಸುತ್ತಿದ್ದಾರೆ.