ಸಿ.ಎ ಫೌಂಡೇಶನ್ ಪರೀಕ್ಷೆ: ಫಿಲೋಮಿನಾ ಪಿಯು ಕಾಲೇಜಿನ ಕಾರ್ತಿಕ್ ಶೆಣೈ, ನೀರಜ್ ಹೆಗ್ಡೆ ಉತ್ತೀರ್ಣ

0

ಪುತ್ತೂರು:2022 ಜೂನ್ ತಿಂಗಳಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟೆಂಟ್ಸ್ ಆಫ್ ಇಂಡಿಯಾ(ಐ.ಸಿ.ಎ.ಐ) ನಡೆಸಿದ ಪ್ರತಿಷ್ಠಿತ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2020-21ನೇ ಸಾಲಿನ ವಿದ್ಯಾರ್ಥಿಗಳಾದ ನೀರಜ್ ಆರ್.ಹೆಗ್ಡೆ ಹಾಗೂ ಕಾರ್ತಿಕ್ ಶೆಣೈಯವರು ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನೀರಜ್ ಆರ್.ಹೆಗ್ಡೆರವರು 400ರಲ್ಲಿ 201 ಮತ್ತು ಕಾರ್ತಿಕ್ ಶೆಣೈಯವರು 400ರಲ್ಲಿ 273 ಅಂಕಗಳನ್ನು ಗಳಿಸಿ ಸಾಧನೆ ಮಾಡಿರುತ್ತಾರೆ. ಇವರೀರ್ವರು ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ ಕೋಚಿಂಗ್ ಪಡೆದಿದ್ದರು. ನೀರಜ್ ಹೆಗ್ಡೆರವರು ಕೆಮ್ಮಾಯಿ ನಿವಾಸಿ ಪಿ.ರಾಧಾಕೃಷ್ಣ ಹೆಗ್ಡೆ ಹಾಗೂ ಆಶಾ ಆರ್.ಹೆಗ್ಡೆರವರ ಪುತ್ರ. ಕಾರ್ತಿಕ್ ಶೆಣೈಯವರು ನರಿಮೊಗರು ನೆಕ್ಕಿಲು ನಿವಾಸಿ ಬಾಲಕೃಷ್ಣ ಶೆಣೈ ಹಾಗೂ ಜ್ಯೋತಿ ಶೆಣೈಯವರ ಪುತ್ರ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here