ಪ್ರಿಯದರ್ಶಿನಿಯಲ್ಲಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ

0
  • ಬಗೆ ಬಗೆಯ ವೇಷಭೂಷಣಗಳಿಂದ ಕಂಗೊಳಿಸಿದ ಮಕ್ಕಳು
  • 75 ಕ್ಕೆ 75 ಹಣ್ಣಿನ ಗಿಡಗಳು

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವವು ಮೆರವಣಿಗೆಯ ಸಂಭ್ರಮ, ಸಡಗರ ಮತ್ತು ಅರ್ಥಪೂರ್ಣವಾಗಿ ನಡೆಯಿತು.

75 ಕ್ಕೆ 75 ಹಣ್ಣಿನ ಗಿಡಗಳು
75 ವರುಷಗಳ ಸವಿನೆನಪಿಗೆ ಶಾಲಾ ಹಣ್ಣಿನ ತೋಟದಲ್ಲಿ 75 ವಿವಿಧ ಬಗೆಯ ಹಣ್ಣಿನ ಗಿಡಗಳ ನೆಡುವಿಕೆಗೆ ಉದ್ಯಮಿ ಸತೀಶ್ ರೈ ಕಟ್ಟಾವು ಚಾಲನೆ ನೀಡಿದರು.
ಬಳಿಕ ಇರ್ದೆ ಮಾತೃಶ್ರೀ ಸಂಕೀರ್ಣದ ಬಳಿಯಿಂದ ವೈಭವದ ಮೆರವಣಿಗೆ ಶಾಲೆಯವರೆಗೆ ಸಾಗಿ ಬಂತು. ಮೆರವಣಿಗೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಚಾಲನೆ ನೀಡಿದರು.

ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷಭೂಷಣಗಳನ್ನು, ಯಕ್ಷಾಗನದ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಗೆ ಮೆರುಗು ನೀಡಿದರು. ಭಾರತ ಮಾತೆಯ ಬೃಹತ್ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಸಾಗಿಸಲಾಯಿತು. ಧ್ವಜಗಳನ್ನು ಹಿಡಿದ ಪುಟಾಣಿಗಳು, ಪೋಷಕರು ಮೆರವಣಿಗೆಗೆ ಸಾಥ್ ನೀಡಿದರು. ಮಕ್ಕಳು, ಶಿಕ್ಷಕರು, ಹಾಗೂ ಪೋಷಕರು ಪೇಟದ ಧಿರಿಸಿನಲ್ಲಿ ಕಂಡು ಬಂದುದು ಆಕರ್ಷಣೀಯವಾಗಿತ್ತು. ಮೆರವಣಿಗೆಯುದ್ದಕ್ಕೂ ಭಾರತ ಮಾತೆಗೆ ಜೈಕಾರ ಮುಗಿಲುಮುಟ್ಟಿತ್ತು. ಶಾಲಾ ಮುಖ್ಯಗುರು ರಾಜೇಶ್ ಎನ್. ರವರ ಮಾರ್ಗದರ್ಶನದಲ್ಲಿ ಶಿಕ್ಷಕರು ಮೆರವಣಿಗೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here