ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೊಳಿಸುವ ಯೋಜನೆ (ಪಿಎಂಎಫ್ಎಂಇ)

0

ಪುತ್ತೂರು: ದೇಶದ ಬೆನ್ನೆಲುಬು ಕೃಷಿ. ಆದರೆ ಈ ಕೃಷಿಯನ್ನೇ ನೆಚ್ಚಿಕೊಂಡಿರುವ ರೈತಾಪಿ ವರ್ಗಕ್ಕೆ ಮಾರುಕಟ್ಟೆಯದ್ದೇ ದೊಡ್ಡ ಸವಾಲು. ಇದನ್ನು ಸರಿದೂಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೊಳಿಸುವ ಯೋಜನೆ ಜಾರಿಯಲ್ಲಿದೆ.

ಕೇಂದ್ರ ಸರಕಾರದ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದ ನೇತೃತ್ವದಲ್ಲಿ ದೇಶಾದ್ಯಂತ ವಿನೂತನ ಹಾಗೂ ಮಹತ್ತರವಾದ ಕ್ರಿಯಾಶೀಲ ಯೋಜನೆ ಇದಾಗಿದೆ. ಅಸಂಘಟಿತ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸಂಘಟಿತ ವಲಯಕ್ಕೆ ತರುವ ಮಹತ್ತರವಾದ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತಂದಿದ್ದು, ಕಿರು ಆಹಾರ ಉತ್ಪನ್ನ ಘಟಕಗಳ ವಿಸ್ತರಣೆಗೆ ಅವಶ್ಯಕತೆಯ ಯಂತ್ರೋಪಕರಣಗಳಿಗೆ ಹಾಗೂ ಘಟಕದ ಇನ್ನಿತರ ಸಂಬಂಽತ ಪರಿಕರಣಗಳಿಗೆ ಶೇ. 50ರಷ್ಟು ಸಹಾಯಧನವನ್ನು ಇದರಡಿ ನೀಡಲಾಗುತ್ತಿದೆ.

ಉತ್ಪನ್ನ ಘಟಕಗಳಿಗೆ ಸೂಕ್ತ ಮಾರುಕಟ್ಟೆ ನಿರ್ಮಾಣ ಹಾಗೂ ಬ್ರಾಂಡಿಂಗ್ ಸ್ಥಾಪನೆಗೆ ಮತ್ತು ಜಾಹೀರಾತು – ಪ್ರಚಾರಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಆಹಾರ ಉತ್ಪನ್ನ ಕ್ಷೇತ್ರದಲ್ಲಿ ಸಂಶೋಧನೆ, ಸ್ವಚ್ಛತೆ ಮತ್ತು ಗುಣಮಟ್ಟ ಹೆಚ್ಚಳ, ನೂತನ ತಂತ್ರಜ್ಞಾನ ಜೋಡಣೆ ಹಾಗೂ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಪದ್ದತಿ – ನಿಯಮಗಳನ್ನು ಅಳವಡಿಸಿಕೊಂಡು, ಘಟಕ ತಯಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ.

ಹಣಕಾಸಿನ ನೆರವು: ಆಹಾರ ಉತ್ಪನ್ನ ಘಟಕಗಳಿಗೆ ಹಣಕಾಸಿನ ತೊಂದರೆಯಾಗದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಹಾಗೂ ಇಲಾಖೆಗಳ ಮುಖಾಂತರ ಸೌಲಭ್ಯ ವೇದಿಕೆ ನಿರ್ಮಿಸುವಲ್ಲಿಯೂ ಈ ಯೋಜನೆ ಸಹಕಾರಿಯಾಗಿದೆ. ರಾಜ್ಯದ ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಜಂಟಿ ಸಹಾಯದೊಂದಿಗೆ ಕಿರು ಆಹಾರ ಉತ್ಪನ್ನ ಘಟಕಗಳಿಗೆ ಧನ ಸಹಾಯ ಹಾಗೂ ಶೇ. 50ರ ಸಹಾಯಧನ ಸಿಗಲಿದೆ.

ಈ ಕೆಳಗೆ ವಿವರಿಸಿದಂತಹ ವಿವಿಧ ಆಹಾರ ಉತ್ಪನ್ನ ಘಟಕಗಳಿಗೆ ಅನ್ವಯ :

  • ಸಾವಯವ ದವಸಧಾನ್ಯ, ಸಿರಿಧಾನ್ಯ, ನವಣೆ ಇತ್ಯಾದಿಗಳ ಕೃಷಿ ಉತ್ಪನ್ನ ಘಟಕ ಸ್ಥಾಪನೆ ಅಥವಾ ವಿಸ್ತರಣೆ
  • ಮಾವಿನ ಹಣ್ಣು, ಅನಾನಸು, ಕಿತ್ತಳೆ ಹಣ್ಣುಗಳ ಸಂಸ್ಕರಣೆ, ಪಾನೀಯ ಸ್ಮಾಶ್ ಹಾಗೂ ವಿವಿಧ ಹಣ್ಣು ಹಂಪಲುಗಳ ಜಾಮ್ ತಯಾರಿ ಘಟಕ.
  • ಟೊಮೆಟೋ ಹಣ್ಣಿನ ಸಂಸ್ಕರಣೆ ಹಾಗೂ ಸಾಸ್/ಕೆಚಪ್ ತಯಾರಿ, ಬಾಟ್ಲಿಂಗ್ ಹಾಗೂ ಮಾರುಕಟ್ಟೆ ನಿರ್ಮಾಣ ಘಟಕ,
  • ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನ ಘಟಕ ಸ್ಥಾಪನೆ, ತೆಂಗಿನ ಎಣ್ಣೆ ಉತ್ಪನ್ನ ಘಟಕ,
  • ವಿವಿಧ ರೀತಿ ಉಪ್ಪಿನಕಾಯಿ ಅಥವಾ ಮೊರಬ್ಬಾ ತಯಾರಿ ಹಾಗೂ ಪ್ಯಾಕೇಜಿಂಗ್ ಘಟಕ ಸ್ಥಾಪನೆ.
  • ಸೌರ ವಿದ್ಯುಚ್ಛಕ್ತಿಯಿಂದ ಪೌಷ್ಠಿಕ ಹಾಗೂ ಆರೋಗ್ಯಕರ ಒಣ ಮೀನು ತಯಾರಿ, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆ ಘಟಕ ಸ್ಥಾಪನೆ.
  • ಹಸಿ ಸಿಗಡಿ ಮೀನಿನ ಸ್ವಾದಿಷ್ಟ ಹಾಗೂ ಪೌಷ್ಟಿಕ ಉಪ್ಪಿನಕಾಯಿ ಹಾಗೂ ಶುದ್ಧ ಒಣಸಿಗಡಿಯಿಂದ ಚಟ್ಟೆ ಉತ್ಪನ್ನ ಘಟಕ.
  • ಹಸಿ ಮೀನುಗಳ ಮೌಲ್ಯವಽತ ಆಹಾರ ಉತ್ಪನ್ನ, ಪ್ಯಾಕಿಂಗ್ ಹಾಗೂ ಮಾರುಕಟ್ಟೆ ಘಟಕ (ಉದಾ : ಮೀನಿನ ಕಟ್ಲೆಟ್, ಮೀನಿನ ಕಬಾಬ್, ಮೀನಿನ ಫಿಂಗರ್, ಮೀನಿನ ವೇಫರ್ (ಟಿಪ್ಸ್), ಮೀನಿನ ಮಿಕ್ಷ್, ಮೀನಿನ ಖಾರಕಡ್ಡಿ ಇತ್ಯಾದಿ ಪೌಷ್ಟಿಕ ಹಾಗೂ ರುಚಿಕರ ಆಹಾರ ತಯಾರಿ ಘಟಕ ಸ್ಥಾಪನೆ, (ಆಸಕ್ತರಿಗೆ ಉತ್ಪನ್ನ ತಯಾರಿಸುವ ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು)
  • ಕೋಳಿ ಆಹಾರ ತಯಾರಿ ಘಟಕ, ಪಶು ಆಹಾರ ತಯಾರಿ ಘಟಕ, ಆಡುಗಳ ಆಹಾರ ತಯಾರಿ ಘಟಕ ಸ್ಥಾಪನೆ ಹಾಗೂ ಮಾರುಕಟ್ಟೆ ನಿರ್ಮಾಣ.
  • ಗಿಡಮೂಲಿಕಾ ಹಾಗೂ ಸಂಬಾರ ಪದಾರ್ಥಗಳ ಉತ್ಪನ್ನ ಹಾಗೂ ಮಾರುಕಟ್ಟೆ ನಿರ್ಮಾಣ (ಉದಾ : ಅರಿಶಿನ, ಕರಿಮೆಣಸು, ನೆಲ್ಲಿಕಾಯಿ, ಜೀರಿಗೆ ಹಾಗೂ ಇತರ ಔಷಽಯ ವನಸ್ಪತಿ ಉತ್ಪನ್ನ ಹಾಗೂ ಮಾರುಕಟ್ಟೆ ಘಟಕಗಳ ಸ್ಥಾಪನೆ).
  • ರಾಜ್ಯದ ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಜಂಟಿ ಸಹಾಯದೊಂದಿಗೆ ಕಿರು ಆಹಾರ ಉತ್ಪನ್ನ ಘಟಕಗಳಿಗೆ ಧನ ಸಹಾಯ ಹಾಗೂ ಶೇ50 ರ ಸಹಾಯ ಧನ ನೀಡಲಿರುವರು.
  • ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಹಾಗೂ ಜಿಲ್ಲಾದ್ಯಂತ ಇವುಗಳ ಸ್ಥಾಪನೆಗೆ ಹಾಗೂ ಪ್ರಾರಂಭಿಸಲು ಬೇಕಾಗುವ ಧನಸಹಾಯ ಇತ್ಯಾದಿ ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿರಿ ಅಥವಾ ನೇರವಾಗಿ ಸಂದರ್ಶಿಸಬಹುದು.

ಬೇಕಾದ ದಾಖಲಾತಿ : ತಮ್ಮ ಖಾತೆಯಿಂದ ರಾಷ್ಟ್ರೀಕೃತ ಬ್ಯಾಂಕ್ ವ್ಯವಸ್ಥಾಪಕರ ಒಪ್ಪಿಗೆ, ಆಧಾರ್, ಪಾನ್ ಕಾರ್ಡ್ ನಂ, ವಿದ್ಯಾರ್ಹತೆ ಪ್ರಮಾಣಪತ್ರ ಸೂಕ್ತ ಯೋಜನಾ ವರದಿ ಇತ್ಯಾದಿ


ದೇಶದ 729 ಜಿಲ್ಲೆಗಳಲ್ಲಿ ಪಿಎಂಎಫ್ಎಂಇ ಯೋಜನೆ ಜಾರಿಯಲ್ಲಿದ್ದು, ದಕ್ಷಿಣ ಕನ್ನಡದಲ್ಲಿ ಈ ಯೋಜನೆಗೆ ಜಂಟಿ ಕೃಷಿ ನಿರ್ದೇಶಕರು ನೋಡಲ್ ಅಽಕಾರಿಯಾಗಿದ್ದಾರೆ. ಕೃಷಿ ಉತ್ಪನ್ನವನ್ನು ಕಚ್ಚಾ ಪದಾರ್ಥವಾಗಿ ಮಾರಾಟ ಮಾಡುವುದಕ್ಕಿಂತ, ಬ್ರಾಂಡೆಂಡ್ ಉತ್ಪನ್ನವಾಗಿ ಮಾರಾಟ ಮಾಡುವುದು ಆದಾಯದ ದೃಷ್ಟಿಯಿಂದ ಉತ್ತಮ. ಈ ಹಿನ್ನೆಲೆಯಲ್ಲಿ ಪಿಎಂಎಫ್ಎಂಇ ಯೋಜನೆಯನ್ನು ಜಾರಿಗೆ ತರಲಾಗಿದೆ. ಆಸಕ್ತರಿಗೆ ಉತ್ಪನ್ನ ತಯಾರಿಸುವ ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು.

– ಡಾ. ಫಝಲ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಪಿಎಂಎಫ್ಎಂಇ

LEAVE A REPLY

Please enter your comment!
Please enter your name here