ಪುತ್ತೂರು : ವಿದ್ಯಾಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ, ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ, ಆಗಸ್ಟ್ 26ರಂದು ನಡೆದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಏರ್ಪಡಿಸಲಾದ ವಿಜ್ಞಾನ ಮಾದರಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ನೆಹರೂ ನಗರದ ವಿವೇಕಾನಂದ ಆಂಗ್ಲ ಮಾಧ್ಯಮ (CBSE) ಶಾಲೆಯ ಬಿ . ಧ್ಯಾನ್ ಶೆಟ್ಟಿ ( ಉಮೇಶ್ ಬಿ. ಶೆಟ್ಟಿ ಮತ್ತು ಶಾಂತಿ ಶೆಟ್ಟಿ ದಂಪತಿ ಪುತ್ರ ) ಕಿಶೋರವರ್ಗ ಮಟ್ಟದಲ್ಲಿ “ಮಾಡೆಲ್ ಬೇಸ್ಡ್ ಆನ್ ಸೌಂಡ್” ಎಂಬ ವಿಷಯದ ಕುರಿತು ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಲೇಖನ ವಾಚನ ಸ್ಪರ್ಧೆಯಲ್ಲಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಎಚ್. ಪಿ ( ಪ್ರಕಾಶ್ ಎಚ್. ಕೆ ಮತ್ತು ಮಾಲಿನಿ ಕೆ.ಎನ್ ದಂಪತಿ ಪುತ್ರಿ ) ಬಾಲವರ್ಗ ಮಟ್ಟದ ವಿಜ್ಞಾನ ಲೇಖನ ವಾಚನ ಸ್ಪರ್ಧೆಯಲ್ಲಿ ” ಹೆಲ್ತ್ ಅಂಡ್ ಹೈಜೀನ್ ” ಎಂಬ ವಿಷಯದ ಕುರಿತು ವಿಜ್ಞಾನ ಲೇಖನವನ್ನು ವಾಚಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಶುವರ್ಗ ಮಟ್ಟದ ಸ್ಪರ್ಧೆಯಲ್ಲಿ 5ನೇ ತರಗತಿಯ ಶ್ರಿಯಾ ಪಿ. ನಾಯಕ್ ಗಣಿತ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಯೋಗಾತ್ಮಕ ವಿಜ್ಞಾನ ಸ್ಪರ್ಧೆಯಲ್ಲಿ ಐದನೇ ತರಗತಿಯ ಲಕ್ಷಿತ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಐದನೇ ತರಗತಿಯ ಧನ್ವಿ ಎಸ್. ಶರ್ಮ ದ್ವಿತೀಯ ಸ್ಥಾನ ಹಾಗೂ ನಾಲ್ಕನೇ ತರಗತಿಯ ಸ್ವಿನಲ್ ಡಿಸಿಲ್ವ ಇವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೇದಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಐದನೇ ತರಗತಿಯ ಮನ್ವಿತ್ ಎ. ಎನ್, ನಾಲ್ಕನೇ ತರಗತಿಯ ವಿರಾಟ್ ವಿ. ಪ್ರಭು ಹಾಗೂ ಅಭಿಜ್ಞಾರವರನ್ನು ಒಳಗೊಂಡ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಬಾಲವರ್ಗ ಮಟ್ಟದ ಪ್ರಯೋಗಾತ್ಮಕ ವಿಜ್ಞಾನ ಸ್ಪರ್ಧೆಯಲ್ಲಿ ಏಳನೇ ತರಗತಿಯ ನಿಹಾಲ್ ಸಿ. ರೈ ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಿಶೋರವರ್ಗ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ 9ನೇ ತರಗತಿಯ ಚಿರಾಗ್ ಡಿ. ಹಾಗೂ ಪ್ರಾಪ್ತ ಎಸ್. ರೈ ಇವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.