ಪುರುಷರಕಟ್ಟೆಯಲ್ಲಿ ವಿಜ್ರಂಭಿಸಿದ 22ನೇ ವರ್ಷದ ಗಣೇಶೋತ್ಸವ ಶೋಭಾಯಾತ್ರೆ

0

ಪುತ್ತೂರು: ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಮೂರು ದಿನಗಳ ಕಾಲ ನಡೆದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವು ಸೆ.2ರಂದು ಗಣೇಶನ ವಿಗ್ರಹದ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.

ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪಾಹ್ನ ಪುರುಷರಕಟ್ಟೆ ಇಂದಿರಾನಗರ ಶ್ರೀವನದುರ್ಗಾ ಭಜನಾ ಮಂಡಲಿಯವರಿಂದ ಭಜನೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಗಣೇಶ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಪುರುಷರಕಟ್ಟೆಯಿಂದ ಹೊರಟು ಇಂದಿರಾನಗರ, ಕೂಡುರಸ್ತೆ ಮಾರ್ಗವಾಗಿ ಸಂಚರಿಸಿ ಕಲ್ಕಾರ್‌ನಲ್ಲಿ ಜಲಸ್ತಂಭಗೊಳ್ಳುವ ಮೂಲಕ ಸಂಪನ್ನಗೊಂಡಿತು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here