ಬೆಟ್ಟಂಪಾಡಿ ದೇವಾಲಯದಲ್ಲಿ ನಾಮಫಲಕ ಅನಾವರಣ

0
ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ನೂತನ ನಾಮಫಲಕ‌ವನ್ನು ಕ್ಷೇತ್ರದ ತಂತ್ರಿಗಳಾದ‌ ಕೆಮ್ಮಿಂಜೆ‌ ನಾಗೇಶ ತಂತ್ರಿಗಳು ಸೆ. 3ರಂದು ಕ್ಷೇತ್ರದ ಲ್ಲಿ ಅನಾವರಣಗೊಳಿಸಿದರು.
ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ಟೀಲಿನ ನಾಮಫಲಕವನ್ನು ಕೊಡುಗೆಯಾಗಿ ಅರ್ಪಿಸಿದ ಕಾರ್ಕಳದ ಸಮೃದ್ದಿ ಅಲ್ಯುಮಿನಿಯಂನ ಮ್ಹಾಲಕ ಧನಂಜಯ ರೆಂಜ, ರೆಂಜ ವಿಘ್ನೇಶ್ವರ ಟ್ರೇಡರ್ಸ್ ನ ಮ್ಹಾಲಕ ಸತೀಶ್ ಗೌಡ ಪಾರ ಹಾಗೂ ಶಿವಂ ಫ್ಲೋರಿಂಗ್ ವರ್ಕ್ಸ್ ನ ಮ್ಹಾಲಕ ಜಗದೀಶ್ ಸುವರ್ಣ ಬೆಟ್ಟಂಪಾಡಿಯವರು ಉಪಸ್ಥಿತರಿದ್ದು ದೇವಳದ ವತಿಯಿಂದ ಅವರನ್ನು ಪ್ರಸಾದ ನೀಡಿ ಗೌರವಿಸಲಾಯಿತು. 
ದೇವಳದ ಅನುವಂಶಿಕ ಆಡಳಿತ‌ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್‌ ರೈ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ವೇ. ಮೂ. ಮಂಜುಳಗಿರಿ ವೆಂಕಟರಮಣ ಭಟ್ಟ, ವೇ.‌ಮೂ. ವೆಂಕಟರಮಣ ಭಟ್ ಬೆಟ್ಟಂಪಾಡಿ, ದೇವಳದ ಅರ್ಚಕ ದಿವಾಕರ ಭಟ್ ಸೇರಿದಂತೆ ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here