ಮುಂಡೂರು ಪಂಜಳದಲ್ಲಿ ಯಶ್ವಿ ಬ್ಯೂಟಿಪಾರ್ಲರ್ ಶುಭಾರಂಭ

0

ಪುತ್ತೂರು: ಮುಂಡೂರು ಗ್ರಾಮದ ಪಂಜಳ ಮುಲಾರು ಕಾಂಪ್ಲೆಕ್ಸ್‌ನಲ್ಲಿ ಯಶ್ವಿ ಬ್ಯೂಟಿಪಾರ್ಲರ್ ಸೆ.05 ರಂದು ಬೆಳಿಗ್ಗೆ ಶುಭಾರಂಭಗೊಂಡಿತು. ವಸಂತ ಪೂಜಾರಿ ಬೇಬಿ ನಾಡಾಜೆಯವರು ದೀಪ ಬೆಳಗಿಸಿ ಬ್ಯೂಟಿಪಾರ್ಲರ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸದಾಶಿವ ಶೆಟ್ಟಿ ಪಟ್ಟೆ, ವಿಶ್ವ ಜನರಲ್ ಸ್ಟೋರ್ ಪಂಜಳ ಇದರ ರಾಜ್‌ಕುಮಾರ್ ಶೆಟ್ಟಿ,ಸುರೇಶ್ ಪೂಜಾರಿ , ವಸಂತ ಪೂಜಾರಿ, ಗಂಗಾಧರ ಪೂಜಾರಿ, ವಾರಿಜ ಮುಲಾರು, ಸುಧಾಕರ ಪೂಜಾರಿ, ಯಶೋಧ ಮುಲಾರು, ಗಣೇಶ್ ಪೂಜಾರಿ, ಸುಭಾಷಿಣಿ ಮಾಪಾಲು, ಸುಬಿನ್ ನಂಬಿನಿ ಮಾಪಾಲು, ನಾರಾಯಣ ಆರತಿ ನಾಡಾಜೆ, ಸತೀಶ್ ಪೂಜಾರಿ ಪಯಸ್ವಿನಿ ನೇರೋಳ್ತಡ್ಕ, ಶ್ರೀ ಗೌರಿ, ಕಿರಣ್ ಮುಲಾರು, ಚೇತನ್ ಮುಲಾರ್, ಚಿತ್ರರಂಜಿನಿ ಮುಲಾರು, ಜನಾರ್ದನ್ ಹಂಡ್ಯನಕುಕ್ಕು, ಝಖರಿಯಾ ಮುಲಾರು ಕಾಂಪ್ಲೆಕ್ಸ್ ಪಂಜಳ, ಜನಾರ್ದನ ಹೊಟೇಲ್ ಪಂಜಳ, ದಾಮೋದರ ಕರ್ಕೇರ ನಾಡಾಜೆ ಮತ್ತಿತರರು ಉಪಸ್ಥಿತರಿದ್ದರು. ಮಾಲಕರಾದ ಯಶಸ್ವಿನಿ ಚೇತನ್ ಕುಮಾರ್ ನಾಡಾಜೆಯವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.

ಸೌಲಭ್ಯಗಳು
ಯಶ್ವಿ ಬ್ಯೂಟಿಪಾರ್ಲರ್‌ನಲ್ಲಿ ಐಬ್ರೋಸ್, ಹೇರ್‌ಸ್ಟೈಲ್, ಬ್ಲೀಚ್ ಮತ್ತು ಫೇಶಿಯಲ್, ಹೇರ್ ಸ್ಟ್ರೈಟಿಂಗ್,ಮೆಹಂದಿ, ವ್ಯಾಕ್ಸಿಂಗ್, ಹೇರ್‌ಕಟ್ಟಿಂಗ್, ಪೆಡಿಕ್ಯೂರ್ ಮತ್ತು ಮೆನಿಕ್ಯೂರ್, ಹೇರ್ ಕಲರಿಂಗ್, ಹೇರ್‌ಸ್ಪಾ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ. ಇದಲ್ಲದೆ ಮದುಮಗಳ ಅಲಂಕಾರಿಕ ಆಭರಣಗಳು ಬಾಡಿಗೆಗೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9353136473 ಗೆ ಕರೆ ಮಾಡಬಹುದು ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here