ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ’ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು. ಬಿ.ಕಾಂ ಪದವಿ ಓದುತ್ತಿರುವ ವಿದ್ಯಾರ್ಥಿಗಳನ್ನು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಉತ್ಪಾದನಾ ಘಟಕಕ್ಕೆ ಕರೆದೊಯ್ದು ಮಾಹಿತಿ ನೀಡಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ. ವಿದ್ಯಾರ್ಥಿಗಳನ್ನು ಕ್ಯಾಂಪ್ಕೋ ಘಟಕಕ್ಕೆ ಕರೆದೊಯ್ದು ಪ್ರಾತ್ಯಕ್ಷಿಕೆ ದೊರಕುವಲ್ಲಿ ಸಹಕರಿಸಿದರು.
ವಿದ್ಯಾರ್ಥಿಗಳಾದ ಅನ್ಮಯ್ ಭಟ್, ಶಶಾಂಕ್ ಭಟ್, ಲೇಖಾ, ಚೈತನ್ಯ ಸಿ, ರಾಹುಲ್ ವಿ.ಎಂ, ಅನನ್ಯಲಕ್ಷ್ಮೀ, ಮಹಿಮಾ ಮಂಜುನಾಥ ಹೆಗಡೆ, ಮೇಘನಾ ಕೆ.ಸಿ, ಶ್ರೀ ಹರ್ಷಾ, ಶ್ರೀಜಾ ಎ, ಶ್ರೀರಾಮ ಎಂ, ಸಿಂಚನಾ ಎಂ, ಸ್ವರ್ಣಾ ಶೆಣೈ ವೈ, ಸ್ವಾತಿ ಉಪಾಧ್ಯ ವಿ ಹಾಗೂ ತೇಜಸ್ವಿನಿ ಭಾಗಿಯಾದರು.