ನಿಡ್ಪಳ್ಳಿ; ಪುತ್ತೂರು ಶಾಸಕ ಸಂಜೀವ ಮಠಂದೂರುರವರು ತನ್ನ ವಿಶೇಷ ಅನುದಾನದಲ್ಲಿ ಪಾಣಾಜೆ ಗ್ರಾಮದ ಸೂರಂಬೈಲು ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ ಪೀಠೋಪಕರಣಗಳನ್ನು ಸೆ.11 ರಂದು ಹಸ್ತಾಂತರ ಮಾಡಿದರು.
ಅಲ್ಲದೆ ಸ್ಕಂದಶ್ರೀ ಯುವಕ ಮಂಡಲ ತೂಂಬಡ್ಕ ಇವರು ಅಕ್ಷರ ದಾಸೋಹಕ್ಕೆ ಕೊಡುಗೆಯಾಗಿ ನೀಡಿದ ಕೈ ತೊಳೆಯುವ ಶೆಡ್ಡನ್ನು ಶಾಸಕರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಶಾಲೆಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸುವ ಶೌಚಾಲಯಕ್ಕೆ ಹೆಚ್ಚುವರಿ ಖರ್ಚುಗಳಿಗಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸ್ಮಾರ್ಟ್ ಕ್ಲಾಸಿಗೆ ಬೇಕಾಗುವ ಪ್ರೊಜೆಕ್ಟರ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲಾಗುವುದು ಎಂದು ಹೇಳಿದರು. ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶೌಚಾಲಯಕ್ಕೆ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಶಂಕುಸ್ಥಾಪನೆ ನೆರವೇರಿಸಿದರು.
ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಷ್ ರೈ ಚಂಬರಕಟ್ಟ, ಮೋಹನ ನಾಯ್ಕ ತೂಂಬಡ್ಕ, ಪಾಣಾಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ ತೂಂಬಡ್ಕ, ಉಪಾಧ್ಯಕ್ಷೆ ಲಲಿತ, ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸ್ಕಂದಶ್ರೀ ಯುವಕ ಮಂಡಲ, ಓಂ -ಂಡ್ಸ್ ಭರಣ್ಯ,ತುಳುನಾಡ್ -ಂಡ್ಸ್ ತೂಂಬಡ್ಕ ಇದರ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಸಹಶಿಕ್ಷಕ ನಾಗೇಶ್ ಪಾಟಾಳಿ ಸ್ವಾಗತಿಸಿ, ಮುಖ್ಯ ಗುರು ಊರ್ಮಿಳಾ. ಕೆ ವಂದಿಸಿದರು. ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಶಾಸಕರನ್ನು ಗೌರವಿಸಿದರು.