ಕಲ್ಲಾರೆ ಶ್ರೀ ಮಾತಾ ಸೌಹಾರ್ದ ಸಹಕಾರಿಯ ಆರನೇ ಮಹಾಸಭೆ

0

₹46 ಕೋಟಿ ವ್ಯವಹಾರ ,₹11 ಲಕ್ಷ ಲಾಭ , 12% ಡಿವಿಡೆಂಟ್ ಘೋಷಣೆ

ಪುತ್ತೂರು : ಕಲ್ಲಾರೆ ಮಹಾಲಕ್ಷ್ಮೀ ಸಂಕೀರ್ಣ ಇದರ ಮೊದಲ ಮಹಡಿಯಲ್ಲಿ ಕಳೆದ ಐದು ವರುಷಗಳಿಂದ ವ್ಯವಹರಿಸುತ್ತಿರುವ , ಶ್ರೀ ಮಾತಾ ಸೌಹಾರ್ದ ಸಹಕಾರಿ ನಿಯಮಿತ ಇದರ 2021- 22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 11ರಂದು ಸಹಕಾರಿಯ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾದ ದಾಮೋದರ್ ಕುಲಾಲ್ ಮಾತನಾಡಿ, ಸಹಕಾರಿಯು ಪ್ರಸಕ್ತ ಸಾಲಿನಲ್ಲಿ ಸುಮಾರು 46 ಕೋಟಿ ರೂಪಾಯಿಗಳಷ್ಟು ವ್ಯವಹಾರ ವಹಿವಾಟು ನಡೆಸಿದ್ದು, ರೂ.10.50 ಕೋಟಿ ಮೊತ್ತದ ಠೇವಣಿ ಹೊಂದಿದೆ. ಅಲ್ಲದೇ ಸುಮಾರು ರೂ.9 ಕೋಟಿಯಷ್ಟು ಸಾಲವನ್ನೂ ಕೂಡ ನೀಡಿದ್ದು, ಇದರಿಂದ ಸಹಕಾರಿಯು ರೂ. 11ಲಕ್ಷ ಲಾಭವನ್ನು ಗಳಿಸಿದೆ. ಸಹಕಾರಿಯ ಸದಸ್ಯರಿಗೆ ಶೇಕಡ 12 ಡಿವಿಡೆಂಟ್ ನೀಡುವುದಾಗಿ ಅವರು ಮಹಾಸಭೆಯಲ್ಲಿ ಘೋಷಣೆ ಮಾಡಿದರು.ಸಹಕಾರಿಯು ವರ್ಷಾಂತ್ಯಕ್ಕೆ 3054 ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದ ಅವರು, ಮುಂದೆಯೂ ಅತ್ಯುತ್ತಮ ರೀತಿಯಲ್ಲಿ ಎಲ್ಲಾ ಸದಸ್ಯರೂ ಸಹಕಾರ ನೀಡಿ, ಸಂಘದ ಏಳಿಗೆಗೆ ಶ್ರಮಿಸುವಂತೆ ಕೋರಿ ಅಭಿನಂದಿಸಿದರು. ಉಪಾಧ್ಯಕ್ಷ ಅರುಣ್ ಕುಮಾರ್ ಆಳ್ವ ಮಾತಾನಾಡಿ, ಆರನೇ ಮಹಾಸಭೆಯ ಈ ಶುಭ ವೇಳೆಯಲ್ಲಿ ಸಹಕಾರಿಯ ಚೊಚ್ಚಲ ಶಾಖೆಯನ್ನು ಕಡಬ ತಾಲೂಕಿನಲ್ಲಿ ಆರಂಭಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿ, ಎಲ್ಲರೂ ಸಹಕಾರಿಸುವಂತೆ ಕೇಳಿ ಬೆಂಬಲ ಯಾಚಿಸಿದರು.

ನಿರ್ದೇಶಕರುಗಳಾದ ಭಾಸ್ಕರ್ ಎಂ.ಪೆರುವಾಯಿ, ವಸಂತ್ ಮೂಲ್ಯ, ಶೇಷಪ್ಪ ನಾಯ್ಕ, ಹುಸೇನ್, ಶಂಕರನಾರಾಯಣ ಭಟ್, ತುಂಗಮ್ಮ, ಶಶಿಕಲಾ, ಹೇಮಾವತಿ ಹಾಗೂ ವಿದ್ಯಾ ಸಹಿತ ಸದಸ್ಯರೂ ಮತ್ತು ಸಿಬ್ಬಂದಿಗಳು ಹಾಜರಿದ್ದರು. ಸ್ವಸ್ತಿಕಾ ಪ್ರಾರ್ಥನೆ ನೆರವೇರಿಸಿ, ಮಾನಸ ಅತಿಥಿಗಳನ್ನು ಸ್ವಾಗತಿಸಿದರು. ಶರತ್ ಕುಮಾರ್ ವಂದಿಸಿದರು.

ಕಡಬ ತಾಲೂಕಿನಲ್ಲಿ ಚೊಚ್ಚಲ ಶಾಖೆ…!

ಸುಲಭ,ಸರಳ ರೀತಿಯಲ್ಲಿ ಹಾಗೂ ತ್ರಾಸ ರಹಿತ ಉತ್ಕೃಷ್ಟ ಸೇವೆ ಒದಗಿಸೋ ಸಲುವಾಗಿ ಸಹಕಾರಿ ಇದರ ಚೊಚ್ಚಲ ಶಾಖೆಯು ಕಡಬದಲ್ಲಿ ಶೀಘ್ರ ಪ್ರಾರಂಭ..

ಅರುಣ್ ಕುಮಾರ್‌ ಆಳ್ವ
ಉಪಾಧ್ಯಕ್ಷರು, ಶ್ರೀ ಮಾತಾ ಸೌಹಾರ್ದ…

LEAVE A REPLY

Please enter your comment!
Please enter your name here