ಆರ್ಯಾಪು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.196.81 ಕೋಟಿ ವ್ಯವಹಾರ | ರೂ.86 ಲಕ್ಷ ಲಾಭ | ಶೇ.12 ಡಿವಿಡೆಂಡ್

ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ರೂ.196.81 ಕೋಟಿ ವ್ಯವಹಾರ ಮಾಡಿ ರೂ.86 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.98.31 ಸಾಲ ಮರುಪಾವತಿಯಾಗಿದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆಯಲಾಗಿದೆ. ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿರವರು ಘೋಷಿಸಿದರು.

ಚಿತ್ರ:ವಿಷ್ಣು ಬೊಳ್ವಾರು

ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.11 ರಂದು ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾ ಭವನದಲ್ಲಿ ನಡೆದಿದ್ದು, ಈ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಹಕಾರಿ ಸಂಘದಲ್ಲಿ ಪ್ರಸಕ್ತ ವರ್ಷಾಂತ್ಯಕ್ಕೆ ರೂ.22.50 ಕೋಟಿ ಠೇವಣಿ ಸಂಗ್ರಹವಿರುತ್ತದೆ. ಸರಕಾರದ ರಿಯಾಯಿತಿ ದರದ ಸಾಲಗಳಲ್ಲಿ 697 ಸದಸ್ಯರಿಗೆ ಬೆಳೆ ಸಾಲ, 198 ಸದಸ್ಯರಿಗೆ ದೀರ್ಘಾವಧಿ ಸಾಲ ನೀಡಲಾಗಿರುತ್ತದೆ. 229 ಸದಸ್ಯರಿಗೆ ಕೃಷಿಯೇತರ ಸಾಲ ಹಾಗೂ ವಿವಿಧ ಸಾಲಗಳು ಸೇರಿ ಒಟ್ಟು 1201 ಸದಸ್ಯರಿಗೆ ಸಾಲ ನೀಡಲಾಗಿದೆ. ಕಳೆದ ಮಹಾಸಭೆಯಲ್ಲಿ ಘೋಷಣೆ ಮಾಡಿದಂತೆ ಮೃತಪಟ್ಟ ಸಹಕಾರಿ ಸಂಘದ ಸದಸ್ಯರ ವಾರೀಸುದಾರರಿಗೆ ಒಟ್ಟು 11 ಮಂದಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ ಎಂದು ಅಧ್ಯಕ್ಷ ಮಹಮ್ಮದ್ ಆಲಿಯರು ಹೇಳಿದರು.

ಸಂಘಕ್ಕೆ ಸತತ 4 ವರ್ಷ ಪ್ರಶಸ್ತಿ:

ಮುಂದುವರೆದು ಮಾತನಾಡಿದ ಅಧ್ಯಕ್ಷ ಮಹಮದ್ ಆಲಿರವರು, ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ 2013-14ನೇ ಸಾಲಿನಲ್ಲಿ ಕೇವಲ ರೂ.13 ಲಕ್ಷ ಲಾಭ ಪಡೆದಿದ್ದ ಈ ಸಹಕಾರಿ ಸಂಘವನ್ನು 2014ರಲ್ಲಿ ನನ್ನ ಅಧ್ಯಕ್ಷತೆಯ ಆಡಳಿತ ಮಂಡಳಿಯ ಅಧಿಕಾರ ಬಂದ ಬಳಿಕ ಹಂತ ಹಂತವಾಗಿ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದು ಅತೀ ಹೆಚ್ಚು ಲಾಭಗಳಿಸುವಲ್ಲಿ ಯಶಸ್ವಿಯಾಗಿದೆ. ಅದರೊಂದಿಗೆ ಸಹಕಾರಿ ಸಂಘದ ಸದಸ್ಯರಿಗೆ ಅತೀ ಹೆಚ್ಚು ಡಿವಿಡೆಂಡು ಕೊಡುವಲ್ಲಿ ನಾವು ಸಫಲತೆಯನ್ನು ಕಂಡಿದ್ದೇವೆ ಎಂದರು. ಉತ್ತಮ ಸಾಧನೆಗಾಗಿ ನಮ್ಮ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 4 ವರ್ಷಗಳಿಂದ ಪ್ರಶಸ್ತಿ ಲಭಿಸಿದೆ. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮ, ಆಡಳಿತ ಮಂಡಳಿಯ ನಿರ್ದೇಶಕರುಗಳು ನೀಡಿರುವ ಬೆಂಬಲ, ಸಹಕಾರಿ ಸಂಘದ ಸದಸ್ಯರ ಸಹಕಾರದಿಂದಾಗಿ ಸಹಕಾರಿ ಸಂಘವು ಅಭಿವೃದ್ದಿ ಹೊಂದಲು ಕಾರಣವಾಗಿದ್ದು ಇದರಿಂದಾಗಿ ನಮಗೆ ಪ್ರಶಸ್ತಿ ಸಿಗಲು ಕಾರಣವಾಗಿರುತ್ತದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಙತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಕಿಸಾನ್ ಸಮ್ಮಾನ್ ನೋಂದಾವಣೆ ನವೀಕರಿಸಿ:

ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಪ್ರತಿವರ್ಷ ನೋಂದಾವಣೆಯನ್ನು ನವೀಕರಿಸಬೇಕು. ತಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಈ ಕುರಿತು ನವೀಕರಿಸಬೇಕೆಂದು ಅಧ್ಯಕ್ಷರು ಸಭೆಯಲ್ಲಿ ಸದಸ್ಯರಿಗೆ ಸೂಚಿದರು. ಯಶಸ್ವಿನಿ ಯೋಜನೆಯನ್ನು ಸಹಕಾರ ಸಂಘದಲ್ಲಿ ಮರು ಅನುಷ್ಟಾನಗೊಳಿಸಲು ಸರಕಾರವನ್ನು ಕೇಳಿಕೊಳ್ಳಲಾಗುವುದು ಎಂದು ಅಧ್ಯಕ್ಷ ಮಹಮದ್ ಆಲಿರವರು ಹೇಳಿದರು.

ಮಹಾಸಭೆಯಲ್ಲಿ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಗೋಪಾಲ ಭಟ್ ಅಂದಾಜು ಮುಂಗಡ ಪತ್ರದ ಮೇಲೆ ಚರ್ಚಿಸಿದರು. ಹಿರಿಯ ಸಹಕಾರಿಗಳಾದ ಮೂಲಚಂದ್ರ, ಸದಸ್ಯರುಗಳಾದ ಚಂದ್ರಹಾಸ ರೈ ಡಿಂಬ್ರಿ, ಜಯಪ್ರಕಾಶ್ ರೈ ಬಳ್ಳಮಜಲು ಮಹಾಸಭೆಯ ಕಾರ್ಯ ಕಲಾಪಗಳ ಬಗ್ಗೆ ಸಭೆಯ ಗಮನ ಸಳೆದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್‌ರವರು ಸಂಘದ ಮಹಾಸಭೆಯ ಆಮಂತ್ರಣ ಪತ್ರ ಮತ್ತು ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ಮಂಡಿಸಿದರು. ಸಂಘದ ವ್ಯವಸ್ಥಾಕರಾದ ಅಜಿತ್ ಕುಮಾರ್ ರೈರವರು 2021-22ನೇ ಸಾಲಿನ ವಾರ್ಷಿ ವರದಿ, ಆಯವ್ಯಯ ಪಟ್ಟಿ, ಅಂದಾಜು ಬಜೆಟ್, ಮೊದಾಲಾದವುಗಳನ್ನು ಮಂಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ನಿರ್ದೇಶಕರಾದ ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲ ಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು, ತಿಮ್ಮಪ್ಪ ಜಂಗಮುಗೇರು, ಮೀನಾಕ್ಷಿ ಗೌಡ ನೀರ್ಕಜೆ, ಸಂಶುದ್ದೀನ್ ನೀರ್ಕಜೆ, ಹಾರಿಸ್ ಸಂಟ್ಯಾರು ಉಪಸ್ಥಿತರಿದ್ದರು. ಕುಮಾರಿ ಮಾನ್ಯ ಬಾರಿಕೆ ಪ್ರಾರ್ಥಿಸಿದರು, ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ವಂದಿಸಿದರು. ಸಂಘದ ಸಿಬ್ಬಂದಿ ಉಮೇಶ್ ಯಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಸುಭಾಷಿನಿ ವಿ.ರೈ, ವಿನಯ್ ಕುಮಾರ್ ರೈ, ರಾಜೇಶ್ ಕುಮಾರ್ ಬಿ. ಸಹಕರಿಸಿದರು.

ಅಧ್ಯಕ್ಷರಿಂದ ಹೊಸ ಯೋಜನೆಗಳ ಘೋಷಣೆ..

* ಎಂ.ಕೆ.ಸಿ.ಸಿ ಸಾಲ ಪಡಕೊಂಡವರಿಗೆ ರಿಜಿಸ್ಟ್ರೇಶನ್ ಇಲ್ಲದೆ 1 ಲಕ್ಷದವರೆಗೆ NAP ಸಾಲ ನೀಡುವ ಯೋಜನೆ
* ಒಂದು ಲಕ್ಷದವರೆಗೆ ಸಾಮಾನ್ಯ ಬಡ್ಡಿದರಲ್ಲಿ ರಿಜಿಸ್ಟ್ರೇಶನ್ ಇಲ್ಲದೆ ಜಾಮೀನು ಸಾಲ
* ಕೃಷಿ ಭೂಮಿ ಹಾಗೂ ಕೃಷಿಯೇತರ ಜಮೀನು ಖರೀದಿಸಲು ಖರೀದಿ ಸಾಲ

ಸನ್ಮಾನ..

2022ನೇ ಶೈಕ್ಷಣಿಕ ವರ್ಷದಲ್ಲಿ ಕೊಡಲ್ಪಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಸಹಕಾರಿ ಸಂಘದ ಸದಸ್ಯೆ, ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಕೆಮ್ಮಿಂಜೆ ಗ್ರಾಮದ ಶ್ರೀಮತಿ ತೆರೇಜ್ ಎಂ.ಸಿಕ್ವೇರಾರವರನ್ನು ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಮಹಾಸಭೆಯ ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ಮಾಹಿತಿ ಕಾರ್ಯಾಗಾರ…

ಮಹಾಸಭೆಯ ಬಳಿಕ ಭಾರತ ಸರಕಾರದ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಮತ್ತು ಸುದ್ದಿ ಕೃಷಿ ಸೇವಾ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ ನೋಡಲ್ ಅಧಿಕಾರಿಗಳು ಕೃಷಿ ಕಚ್ಚಾ ಸಾಮಾಗ್ರಿಗಳನ್ನು ಆಹಾರ ಉತ್ಪನ್ನಗಳಾಗಿ ಮೌಲ್ಯವರ್ಧನೆಗೊಳಿಸಿ ಮಾರುಕಟ್ಟೆ ಮಾಡುವ ಮತ್ತು ಕೇಂದ್ರ ಸರಕಾರದಿಂದ ಪ್ರೋತ್ಸಾಹಧನ ಪಡೆಯುವ ಬಗ್ಗೆ ಸಂಘದ ಕಾರ್ಯವ್ಯಾಪ್ತಿಯ ರೈತರಿಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here