ಸೆ.17: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ, ಅಮೃತ ರಶ್ಮಿ ಪುಸ್ತಕ ಬಿಡುಗಡೆ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ಉದ್ಘಾಟನೆ ಮತ್ತು ಸವಣೂರು ಸೀತಾರಾಮ ರೈಯವರ ಜನ್ಮದಿನದ ಅಮೃತಮಹೋತ್ಸವದ ನೆನಪಿಗಾಗಿ ರಚಿಸಲ್ಪಟ್ಟ ಸಂಸ್ಮರಣ ಗ್ರಂಥ “ಅಮೃತ ರಶ್ಮಿ”ಯ ಬಿಡುಗಡೆ ಸಮಾರಂಭ ಸೆ.17 ರಂದು ಬೆಳಿಗ್ಗೆ 9.30 ರಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರಗಲಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಸೆ.13ರಂದು ಸುದ್ದಿ ಮೀಡಿಯಾದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿವ ಎಸ್. ಅಂಗಾರರವರು ಅಟಲ್ ಟಿಂಕರಿಂಗ್ ಲ್ಯಾಬ್‌ನ ಉದ್ಘಾಟನೆ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್‌ರವರು ಅಧ್ಯಕ್ಷತೆ ವಹಿಸಿ, ಅಮೃತ ರಶ್ಮಿ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಅಮೃತ ರಶ್ಮಿ ಸಂಸ್ಮರಣ ಗ್ರಂಥದ ಸಂಪಾದಕ ಮತ್ತು ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ, ದ.ಕ.ಜಿಲ್ಲಾ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ನೋಡಲ್ ಅಧಿಕಾರಿ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿರವರುಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸೀತಾರಾಮ ರೈಯವರು ತಿಳಿಸಿದರು.

ಅಮೃತ ರಶ್ಮಿ ಬಿಡುಗಡೆ
ಪತ್ರಕರ್ತ ಪಿ.ಬಿ.ಹರೀಶ್ ರೈರವರು ಸಂಪಾದಕತ್ವದಲ್ಲಿ ಮೂಡಿಬಂದಿರುವ ಸವಣೂರು ಸೀತಾರಾಮ ರೈಯವರ ಬದುಕಿನ ಚರಿತ್ರೆಯ” ಅಮೃತ ರಶ್ಮಿ” ಪುಸ್ತಕ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಸುದ್ದಿಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿ ಎನ್.ಸುಂದರ ರೈ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿರವರುಗಳು ಉಪಸ್ಥಿತರಿದ್ದರು.

20 ಲಕ್ಷ ರೂಪಾಯಿ ವೆಚ್ಚದ ಅಟಲ್ ಟಿಂಕರಿಂಗ್ ಲ್ಯಾಬ್
ಸುಮಾರು 20 ಲಕ್ಷ ರೂಪಾಯಿಗಳಿಗೂ ಮಿಕ್ಕಿದ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ತಯಾರಾಗಿರುವ ವಿದ್ಯಾರಶ್ಮಿ ಅಟಲ್ ಟಿಂಕರಿಂಗ್ ಲ್ಯಾಬ್ ಸವಣೂರಿನ ಆಸುಪಾಸಿನಲ್ಲೇ ಮಾದರಿ ಲ್ಯಾಬ್ ಆಗಲಿದೆ. ಅತ್ಯುನ್ನತ ದರ್ಜೆಯ ಡ್ರೋನ್, ರೋಬೋಟ್ ಮತ್ತು ಇತರ ಆಧುನಿಕ ಪರಿಕರಗಳು ಲ್ಯಾಬ್‌ನಲ್ಲಿದ್ದು, ಮುಂದಿನ ದಿನಗಳಲ್ಲಿ ಆಸುಪಾಸಿನ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಆಸಕ್ತ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರುತ್ತದೆ – ಸವಣೂರು ಕೆ. ಸೀತಾರಾಮ ರೈ ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

ವಿದ್ಯಾರಶ್ಮಿಯಲ್ಲಿ ಬಿ.ಸಿ.ಎ ಪದವಿ ಆರಂಭ
ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬಿ.ಸಿ.ಎ ಪದವಿ ಆರಂಭವಾಗಿದೆ. ಈಗಾಗಲೇ ಮಂಗಳೂರು ವಿ.ವಿ ಮತ್ತು ಕರ್ನಾಟಕ ಸರಕಾರದಿಂದ ಮಾನ್ಯತೆ ದೊರೆತಿದ್ದು, ತರಗತಿಗಳು ಆರಂಭವಾಗಿವೆ. ಇದು ಸೀತಾರಾಮ ರೈ ಸವಣೂರುರವರ ಜನ್ಮದಿನದ ಅಮೃತಮಹೋತ್ಸವ ಆಚರಣೆಯ ಸಂದರ್ಭದ ವಿಶೇಷ ಯೋಜನೆಯಾಗಿದೆ.

LEAVE A REPLY

Please enter your comment!
Please enter your name here