ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬನ್ನೂರು ವಲಯದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ, ನೂತನ ಒಕ್ಕೂಟಗಳ ಉದ್ಘಾಟನೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಸೆ.12ರಂದು ಕೊಟೇಚಾ ಹಾಲ್ ನಲ್ಲಿ ನಡೆಯಿತು. ನೂತನ ಒಕ್ಕೂಟ ಮತ್ತು ಸ್ವಸಹಾಯ ಸಂಘವನ್ನು ನಗರಸಭಾಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಿದರು. ಇ-ಶ್ರಮ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ಗಳನ್ನು ಸಾಂಕೇತಿಕವಾಗಿ ಪದ್ಮನಾಭ ಶೆಟ್ಟಿ ಮತ್ತು ಹರಿಣಾಕ್ಷಿ ಜೆ.ಶೆಟ್ಟಿ ವಿತರಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ಶುಭ ಹಾರೈಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕರಾವಳಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿ ಮಹಿಳಾ ಸಂಘಟನೆಯ ಮಹತ್ವದ ಮಾಹಿತಿ ನೀಡಿದರು. ವಲಯ ಅಧ್ಯಕ್ಷ ಸತೀಶ್ ಕೆ. ಮಾತನಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಡೆನ್ನಿಸ್ ಮಸ್ಕರೇನಸ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ರಾಮಣ್ಣ ಗುಂಡೋಲೆ ಮಾತನಾಡಿ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಪ್ರಾರಂಭಗೊಂಡ ಯೋಜನೆಯ ಸಂದರ್ಭವನ್ನು ನೆನಪಿಸಿದರು. ಮುಂದೆಯೂ ಯೋಜನೆಯ ಕಾರ್ಯಕ್ರಮಗಳು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ, ದಕ್ಷಿಣ ಕನ್ನಡ ಜಿಲ್ಲೆ-2 ಮತ್ತು 10 ಒಕ್ಕೂಟಗಳ ನೂತನ ಮತ್ತು ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು. ನೂತನ ಒಕ್ಕೂಟಗಳ ದಾಖಲಾತಿ ಮತ್ತು ನೂತನ ಸ್ವಸಹಾಯ ಸಂಘದ ದಾಖಲಾತಿ ಹಸ್ತಾಂತರವನ್ನು ಪ್ರಾದೇಶಿಕ ನಿರ್ದೇಶಕರು ನೆರವೇರಿಸಿದರು.
ಪದಗ್ರಹಣ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬನ್ನೂರು ವಲಯದ ಬನ್ನೂರು ಒಕ್ಕೂಟದ ನೂತನ ಅಧ್ಯಕ್ಷ ನವೀನ್ ಕುಮಾರ್ ಮತ್ತು ಪದಾಧಿಕಾರಿಗಳು, ಪಡ್ನೂರು ಒಕ್ಕೂಟದ ನೂತನ ಅಧ್ಯಕ್ಷ ತಿಮ್ಮಪ್ಪ ಮತ್ತು ಪದಾಧಿಕಾರಿಗಳು, ಬನ್ನೂರು ಪಡ್ನೂರು ಒಕ್ಕೂಟದ ನೂತನ ಅಧ್ಯಕ್ಷೆ ನಳಿನಾಕ್ಷಿ ಹೆಚ್ ನಾಯ್ಕ ಮತ್ತು ಪದಾಧಿಕಾರಿಗಳು, ಚಿಕ್ಕಮುಡ್ನೂರು ಒಕ್ಕೂಟದ ನೂತನ ಅಧ್ಯಕ್ಷ ಪ್ರಕಾಶ್ ಮತ್ತು ಪದಾಧಿಕಾರಿಗಳು, ಶ್ರೀ ದುರ್ಗಾ ಒಕ್ಕೂಟ ಕುಂಟ್ಯಾನದ ನೂತನ ಅಧ್ಯಕ್ಷ ಚಂದ್ರಶೇಖರ ಮತ್ತು ಪದಾಧಿಕಾರಿಗಳು, ಕೋಡಿಂಬಾಡಿ ಒಕ್ಕೂಟದ ನೂತನ ಅಧ್ಯಕ್ಷೆ ಶಾರದ ಮತ್ತು ಪದಾಧಿಕಾರಿಗಳು, ಬೆಳ್ಳಿಪ್ಪಾಡಿ ’ಬಿ’ ಒಕ್ಕೂಟದ ನೂತನ ಅಧ್ಯಕ್ಷ ಮನೋಹರ ಗೌಡ ಮತ್ತು ಪದಾಧಿಕಾರಿಗಳು, ಬೆಳ್ಳಿಪ್ಪಾಡಿ ಶಾಂತಿನಗರ ಒಕ್ಕೂಟದ ನೂತನ ಅಧ್ಯಕ್ಷ ಪುರುಷೋತ್ತಮ ನಾಯ್ಕ ಮತ್ತು ಪದಾಧಿಕಾರಿಗಳಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಿದರು.
ಬನ್ನೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸತೀಶ್ ಕೆ ಮತ್ತು ಪದಾಧಿಕಾರಿಗಳು, ಪಡ್ನೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮೋಹನ್ದಾಸ್ ರೈ ಮತ್ತು ಪದಾಧಿಕಾರಿಗಳು, ಬನ್ನೂರು ಪಡ್ನೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮಹಾಬಲ ಪೂಜಾರಿ ಮತ್ತು ಪದಾಧಿಕಾರಿಗಳು, ಚಿಕ್ಕಮುಡ್ನೂರು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಭಂಡಾರ್ಕರ್ ಮತ್ತು ಪದಾಧಿಕಾರಿಗಳು, ಶ್ರೀದುರ್ಗಾ ಒಕ್ಕೂಟ ಕುಂಟ್ಯಾನದ ನಿಕಟ ಪೂರ್ವ ಅಧ್ಯಕ್ಷ ರತ್ನಾಕರ ಪ್ರಭು ಮತ್ತು ಪದಾಧಿಕಾರಿಗಳು, ಕೋಡಿಂಬಾಡಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಗೌಡ ಮತ್ತು ಪದಾಧಿಕಾರಿಗಳು, ಬೆಳ್ಳಿಪ್ಪಾಡಿ ’ಬಿ’ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಗೌಡ ಮತ್ತು ಪದಾಧಿಕಾರಿಗಳು, ಬೆಳ್ಳಿಪ್ಪಾಡಿ ಶಾಂತಿನಗರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಮಾಧವ ನಾಯ್ಕ ಮತ್ತು ಪದಾಧಿಕಾರಿಗಳು ಜವಾಬ್ದಾರಿ ಹಸ್ತಾಂತರಿಸಿದರು. ಕೋಡಿಂಬಾಡಿ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಗೌಡ ಮತ್ತು ಶ್ರೀ ದುರ್ಗಾ ಒಕ್ಕೂಟ ಕುಂಟ್ಯಾನದ ಅಧ್ಯಕ್ಷರಾದ ರತ್ನಾಕರ ಪ್ರಭು ಅನಿಸಿಕೆ ವ್ಯಕ್ತಪಡಿಸಿದರು. ಮೇಲ್ವಿಚಾರಕಿ ಪುಪ್ಪಲತಾ ವಲಯದ ಸಾಧನಾ ವರದಿ ವಾಚಿಸಿದರು. ನಿಕಟಪೂರ್ವ ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೇವಾಪ್ರತಿನಿಧಿ ವೀಣಾ ಮತ್ತು ಸುನೀತಾ ಪ್ರಾರ್ಥಿಸಿದರು. ತಾಲೂಕಿನ ಯೋಜನಾಧಿಕಾರಿ ಆನಂದ ಕೆ. ಸ್ವಾಗತಿಸಿದರು. ಬೆಳ್ಳಿಪ್ಪಾಡಿ ’ಬಿ’ ಒಕ್ಕೂಟದ ಸದಸ್ಯ ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಶ್ರೀ ದುರ್ಗಾ ಒಕ್ಕೂಟ ಕುಂಟ್ಯಾನದ ಸದಸ್ಯ ಗಿರೀಶ್ ವಂದಿಸಿದರು.