ಪುತ್ತೂರು: ಪುತ್ತೂರು ಪಿಎಲ್‌ಡಿ ಬ್ಯಾಂಕ್ ಇದರ ನೂತನ ಕಟ್ಟಡ “ರೈತ ಸೌಧ” ಇದರ ಉದ್ಘಾಟನೆಯು ಸೆ. ೨೪ ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಜರಗಿತು.
ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ಸಂಘದ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಸ್.ಗೌಡ ಇಚ್ಲಂಪಾಡಿರವರು ಮಾತನಾಡಿ ಸಹಕಾರ ರಂಗದ ಪಿತಾಮಹಾ ಮೊಳಹಳ್ಳಿ ಶಿವರಾಯರವರಿಂದ ಸ್ಥಾಪನೆಗೊಂಡ ಪಿಎಲ್‌ಡಿ ಬ್ಯಾಂಕ್‌ಇಂದು ಬಹಳಷ್ಟು ಸಾಧನೆ ಮಾಡಿದೆ. ನೂತನ ಕಟ್ಟಡ ಇದೀಗ ಅತ್ಯಂತ ಸುಸಜ್ಜಿತವಾಗಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಬ್ಯಾಂಕ್‌ನ ಹಿಂದಿನ ಅಧ್ಯಕ್ಷರಾಗಿದ್ದ ರಂಗನಾಥ ರೈ ಗುತ್ತು, ಮನೋಹರ್ ರೈರವರುಗಳು ಹೊಸ ಕಟ್ಟಡಕ್ಕಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ರೂ. ೫ ಲಕ್ಷ ಕಂಪೌಂಡ್ ನಿರ್ಮಿಣಕ್ಕೆ ಅನುದಾನವನ್ನು ನೀಡಿದ್ದಾರೆ. ಹಾಲಿ ಸುಮಾರು ೭೫೦೦ ಮಂದಿ ಸದಸ್ಯರನ್ನು ಬ್ಯಾಂಕ್ ಹೊಂದಿದೆ ಎಂದು ಭಾಸ್ಕರ್ ಗೌಡರವರು ತಿಳಿಸಿದ್ದಾರೆ. ಬ್ಯಾಂಕ್‌ನ ಕೋಶಾಧಿಕಾರಿ ನಾರಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೆಶಕರಾದ ರಾಜಶೇಖರ್ ಜೈನ್, ಎ.ಬಿ.ಮನೋಹರ್ ರೈ, ನಾರಾಯಣ ಕನ್ಯಾನ, ಯುವರಾಜ ಪೆರಿಯತ್ತೋಡಿ, ಪ್ರವೀಣ್ ರೈ ಪಂಜೊಟ್ಟು, , ದೇವಯ್ಯ ಗೌಡ, ಉಮೇಶ್ ನಾಕ್, ದರ್ಣಪ್ಪ ಮೂಲ್ಯ, ಮೀನಾಕ್ಷಿ, ಸೋಮಪ್ಪ ನಾಯ್ಕ, ಶೀನ ನಾಯ್ಕ ಹಾಗೂ ವ್ಯವಸ್ಥಾಪಕ ಶೇಖರ್ ಎಂ ರವರುಗಳು ಉಪಸ್ಥಿತರಿದ್ದರು.
೨.೨೦ ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ
ಒಟ್ಟು ರೂ. ೨.೨೦ ಕೋಟಿ ವೆಚ್ಚದಲ್ಲಿ ರೈತ ಸೌಧ ನಿರ್ಮಿಣಗೊಂಡಿದ್ದು, ಕೆಳಭಾಗದಲ್ಲಿ ಪಾರ್ಕಿಂಗ್ ಸೌಲಭ್ಯ ಇದ್ದು, ಆನಂತರ ಮೇಲ್ಭಾಗದಲ್ಲಿ ೫ ವಾಣಿಜ್ಯ ವ್ಯವಹಾರದ ಕೊಠಡಿ, ೧ ನೇ ಅಂತಸ್ತಿನಲ್ಲಿ ಬ್ಯಾಂಕ್‌ನ ಕಚೇರಿ, ೨ ನೇ ಅಂತಸ್ತಿನಲ್ಲಿ ೪ ವಾಣಿಜ್ಯ ಕೊಠಡಿ. ಆನಂತರದ ಅಂತಸ್ತಿನಲ್ಲಿ ಸಭಾಂಗಣ, ಅತಿಥಿ ಗೃಹ ನಿರ್ಮಿಣ ಮಾಡಲಾಗಿದೆ. ಬ್ಯಾಂಕ್‌ಗೆ ರೂ ೮ ಲಕ್ಷ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡಕ್ಕೆ ಲಿಫ್ಟ್ ಹಾಗೂ ಸಿಸಿ ಕ್ಯಾಮರಾ ಸಹಿತ ಮೂಲ ಸೌಕರ್ಯ ಕಲ್ಪಿಸಲಾಗಿದೆ – ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ