ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಮಹಾಸಭೆ ಹಾಗೂ ಸಾಮೂಹಿಕ ದುರ್ಗಾಪೂಜೆ ಸೆ.18ರಂದು ಕಲ್ಲಾರೆ ಗುರುರಾಘವೇಂದ್ರ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ದುರ್ಗಾಪೂಜೆ ನಡೆಯಿತು. ರಾಜೇಶ್ ಮತ್ತು ಅಶ್ವಿನಿ ದಂಪತಿ ನೇತೃತ್ವ ವಹಿಸಿದ್ದರು. ಪುರೋಹಿತ ಶ್ರೀಧರ ಭಟ್ ಪೌರೋಹಿತ್ಯ ವಹಿಸಿದ್ದರು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಸಮಿತಿಯ ವಾರ್ಷಿಕ ಮಹಾಸಭೆ ನಡೆಯಿತು. ಸಮಿತಿ ಅಧ್ಯಕ್ಷ ಪಿ.ಕೆ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾವತಿ ರಾಜೀವ ವರದಿ ವಾಚಿಸಿದರು. ಕೋಶಾಧಿಕಾರಿ ಬಿ.ಎಮ್.ಶ್ರಿಧರ್ ಲೆಕ್ಕಪತ್ರ ಮಂಡಿಸಿದರು. 8 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಜಿಲ್ಲಾ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಇಬ್ಬರು ಪ್ರತಿಭೆಗಳನ್ನು ಗೌರವಿಸಲಾಯಿತು. ಸಮಿತಿ ವತಿಯಿಂದ ವಿದ್ಯಾನಿಧಿ ಸಹಾಯಾರ್ಥವಾಗಿ ನಡೆಸಲಾದ ಲಕ್ಕಿಡಿಪ್ ಡ್ರಾ. ನಡೆಸಲಾಯಿತು.
ಪದಾಧಿಕಾರಿಗಳ ಆಯ್ಕೆ : ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿರವರನ್ನು ಆಯ್ಕೆ ಮಾಡಲಾಯಿತು.
ಮಲ್ಲಿಕಾ ಗೋಪಾಲ್ ಸ್ವಾಗತಿಸಿದರು. ಪುರುಷೋತ್ತಮ ಕೇಪುಳು ಪ್ರಾಸ್ತಾವಿಕ ಮಾತನಾಡಿದರು. ವರ್ಷಿಣಿ, ದಿಶಾ ಪ್ರಾರ್ಥಿಸಿದರು. ಸಂತೋಷ್ ಮುರ ವಂದಿಸಿದರು. ಸುವರ್ಣ ಚಂದ್ರಿಕ ಕಾರ್ಯಕ್ರಮ ನಿರೂಪಿಸಿದರು.