ಪುತ್ತೂರು: ವಿಶ್ವಕರ್ಮ ಸಮಾಜ ಸೇವಾ ಸಂಘ ಉಪ್ಪಿನಂಗಡಿ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಸಂಘ ಉಪ್ಪಿನಂಗಡಿ ಇವರ ಸಹಯೋಗದೊಂದಿಗೆ ೨೭ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಉಪ್ಪಿನಂಗಡಿ ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ಪುರೋಹಿತ್ ವಿ.ಪ್ರಕಾಶ್ ಆಚಾರ್ಯ ವೇಣೂರುರವರ ಆಚಾರ್ಯತ್ವದಲ್ಲಿ ಸೆ.17ರಂದು ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ವಿಶ್ವಕರ್ಮ ಪೂಜೆ ನಡೆಯಿತು. ಬಳಿಕ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಪುಳಿತ್ತಡಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಸಂಘದ ಹಿರಿಯ ಸದಸ್ಯ ರವೀಂದ್ರ ಆಚಾರ್ಯ ಶಿಲ್ಪರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರಾಗ್ರಹ ಮತ್ತು ಸುಧಾರಣಾ ಸೇವೆ ಇಲಾಖೆಯ ಸಹಾಯಕ ಜೈಲರ್ ಪಿ. ಪುಟ್ಟಣ್ಣ ಆಚಾರ್ಯರವರು ಶುಭಹಾರೈಸಿದರು.
ಗ್ರಾ.ಪಂ.ಸದಸ್ಯೆಯಾಗಿ, ಅಧ್ಯಕ್ಷೆಯಾಗಿ, ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಕಡಬ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷೆ ಸರೋಜಿನಿ ಎಸ್. ಆಚಾರ್ಯರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾ ಬಾಂಧವರಿಗೆ ಮತ್ತು ಮಕ್ಕಳಿಗೆ ನಡೆಸಿದ ವವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ದ್ವಿತೀಯ ಪಿಯುಸಿ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿಶ್ವಕರ್ಮ ಸಮಾಜ ಬಾಂಧವರ ಮಕ್ಕಳಿಗೆ ಹಾಗೂ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ವತಿಯಿಂದ ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಶಾಸಕ ಸಂಜೀವ ಮಠಂದೂರು ಆಗಮಿಸಿ ಶುಭ ಹಾರೈಕೆಸಿದರು. ಸಂಘದ ಕಾರ್ಯದರ್ಶಿ ಮಹೇಶ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ಮಹಿಳಾ ಸಂಘದ ಸದಸ್ಯೆ ಉಷಾಹರೀಶ ವಂದಿಸಿದರು. ಯಶೋಧರ ಆಚಾರ್ಯ ಪೆರಿಯಡ್ಕ ಮತ್ತು ಹರೀಶ ಆಚಾರ್ಯ ಬಾರ್ಯ ನಿರೂಪಿಸಿದರು. ಮಧ್ಯಾಹ್ನ ಮಹಾಮಂಗಳಾರತಿಯಾದ ನಂತರ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ವಿಶ್ವಕರ್ಮ ಸಮಾಜದ ಬಂಧುಗಳಿಂದ ಹಾಗೂ ಭಗಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ-ಗಾನ-ವೈಭವ, ಭರತನಾಟ್ಯ, ನೃತ್ಯರೂಪಕ, ಕುಸಾಲ್ದ ಗಸಿ ಎಂಬ ಹಾಸ್ಯ ಕಾರ್ಯಕ್ರಮ ಹಾಗೂ ಕಾಳಿಕಾಂಬಾ ಮಹಿಳಾ ಸಂಘದ ಸದಸ್ಯರಿಂದ ನವಶಕ್ತಿ ವೈಭವ ಎಂಬ ನೃತ್ಯರೂಪಕ ನಡೆಯಿತು.