ನೆಲ್ಯಾಡಿ: ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಕಾನೂನು ಮಾಹಿತಿ ಶಿಬಿರ, ಕೊಣಾಲು ಗ್ರಾಮದ ನಿವೃತ್ತ ಯೋಧರಿಗೆ ಸನ್ಮಾನ ಸೆ.21ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಉಷಾ ಅಂಚನ್, ಕಾರ್ಯದರ್ಶಿ ಲೈನಾ ಜೋಬಿನ್ ತಿಳಿಸಿದ್ದಾರೆ.
ಸಾಮಾನ್ಯ ಸಭೆ:
ಬೆಳಿಗ್ಗೆ ೧೦ಕ್ಕೆ ಸಂಘದ ೨೦೨೧-೨೨ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಸಭೆಗೆ ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ಭಟ್, ಪಶುವೈದ್ಯಾಧಿಕಾರಿ ಡಾ.ಸಚಿನ್, ಮೇಲ್ವಿಚಾರಕಿ ಯಮುನಾರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾನೂನು ಮಾಹಿತಿ ಶಿಬಿರ, ಸನ್ಮಾನ:
ಬೆಳಿಗ್ಗೆ ೧೧.೩೦ಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾದ ಉಪ್ಪಿನಂಗಡಿ ಠಾಣೆಯ ಪಿಎಸ್ಐ ರಾಜೇಶ್ ಕೆ.ವಿ.ಯವರು ಮಹಿಳೆ ಮತ್ತು ಪೊಲೀಸ್ ವ್ಯವಸ್ಥೆ ಹಾಗೂ ನೋಟರಿ, ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿ ಅವರು ಮಹಿಳೆ ಮತ್ತು ಕಾನೂನು ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ. ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಸತೀಶ್ ಭಟ್, ಶ್ರುತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕೊಣಾಲು ಗ್ರಾಮದ ನಿವೃತ್ತ ಯೋಧರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Home ಗ್ರಾಮವಾರು ಸುದ್ದಿ ಸೆ.21: ಕೊಣಾಲು ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ, ಕಾನೂನು ಮಾಹಿತಿ ಶಿಬಿರ,...