ನಿಡ್ಪಳ್ಳಿ: ಬಡಗನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಸಂತೋಷ್ ಆಳ್ವರವರ ಅಧ್ಯಕ್ಷತೆಯಲ್ಲಿ ಸೆ.20 ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ ಸಂಘದಲ್ಲಿ ಒಟ್ಟು 64,94,003.85 ವ್ಯವಹಾರ ಆಗಿರುತ್ತದೆ. ವರದಿ ಸಾಲಿನಲ್ಲಿ ಸಂಘವು ಹಾಲು ಉತ್ಪಾದಕರಿಂದ 1,65,972.4 ಲೀಟರ್ ಹಾಲನ್ನು ಖರೀದಿಸಿ 5,243.5 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿ ರೂ. 2,31,154 ಬಂದಿರುತ್ತದೆ. ಉಳಿಕೆಯಾದ 1,60,728.9 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಿ ರೂ. 51,59,874 ಬಂದಿರುತ್ತದೆ. ಹಾಲು ಮಾರಾಟದಿಂದ ರೂ. 4,43,716.78 ಲಾಭ ಬಂದಿರುತ್ತದೆ. ಪಶು ಆಹಾರ ಮತ್ತು ಲವಣ ಮಿಶ್ರಣದಲ್ಲಿ 12,00,845 ರೂಗಳ ವ್ಯವಹಾರ ಮಾಡಿ ರೂ.31,854 ಲಾಭ ಬಂದಿರುತ್ತದೆ. ಇತರ ಮೂಲಗಳಿಂದ ರೂ.59,954.36 ಲಾಭ ಬಂದಿದ್ದು ಒಟ್ಟು ರೂ.5,35,525.19 ಲಾಭವಾಗಿರುತ್ತದೆ. ಆಡಳಿತಾತ್ಮಕ ಖರ್ಚು ರೂ.3,27,602.41 ಆಗಿದ್ದು ಈ ಸಾಲಿನ ಒಟ್ಟು ನಿವ್ವಳ ಲಾಭ 2,07,922.78 ಆಗಿರುತ್ತದೆ.ಸದಸ್ಯರಿಗೆ ಶೆ.13 ಡೆವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 59 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಲಾಯಿತು. ಪಶು ವೈದ್ಯಾಧಿಕಾರಿ ಡಾ.ಅನುದೀಪ್ ಮಾಹಿತಿ ನೀಡಿದರು.
ಸಭೆಯ ನಿರ್ಣಯಗಳು- ಬರುವ ನವೆಂಬರ್ ತಿಂಗಳ ಕೊನೆಯಲ್ಲಿ ಕೃಷಿ ಅಧ್ಯಯನ ಪ್ರವಾಸ ಕೈಗೊಳ್ಳುವುದು.ಪ್ರತಿ ಲೀಟರ್ ಹಾಲಿನ ದರ ರೈತರಿಗೆ ರೂ.40 ಮಾಡಲು ಒಕ್ಕೂಟಕ್ಕೆ ಬರೆಯುವುದು. ಒಕ್ಕೂಟದ ವತಿಯಿಂದ ಪುತ್ತೂರಿಗೆ ಒಂದು ಹೆಚ್ಚುವರಿ ಪಶು ವೈದ್ಯರನ್ನು ನೇಮಿಸಲು ಒಕ್ಕೂಟಕ್ಕೆ ಬರೆಯುವುದು. ಸಂಘದ ವಠಾರದಲ್ಲಿ ಶೌಚಾಲಯ ನಿರ್ಮಿಸುವುದು ಇವು ಇಂದಿನ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು.
ಸಭೆಯಲ್ಲಿ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರುಗಳಾದ ರಾಮಕೃಷ್ಣ ಭಟ್ ಸಿ.ಹೆಚ್, ನಾರಾಯಣ ರೈ ಕುದ್ಕಾಡಿ ಕಟ್ಟೆ, ಸಂಜೀವ ರೈ.ಎಂ, ಸುಬ್ಬಯ್ಯ ರೈ ಪಿ, ನವೀನ ಶೆಟ್ಟಿ, ಉದಯಕುಮಾರ್, ಬಳ್ಳು ಮುಗೇರ, ರತಿ ರೈ, ಸಂಜೀವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆ ಸುಜಾತ ಪ್ರಾರ್ಥಿಸಿ, ಕಾರ್ಯದರ್ಶಿ ಮೋಹನ. ಎಂ ಸ್ವಾಗತಿಸಿ ವರದಿ ವಾಚಿಸಿ ವಂದಿಸಿದರು. ಸಂಘದ ಸದಸ್ಯರು ಪಾಲ್ಗೊಂಡರು.