ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ, ಸನ್ಮಾನ: ರೂ. 184 ಕೋಟಿ ವ್ಯವಹಾರ, ರೂ.43,02,516 ನಿವ್ವಳ ಲಾಭ, ಶೇ.10.05 ಡಿವಿಡೆಂಡ್

0
  • ಸಂಘದ ಅಭಿವೃದ್ಧಿಯಲ್ಲಿ ಸದಸ್ಯರುಗಳ ಪಾತ್ರ ಮಹತ್ತರವಾದದ್ದು : ವಸಂತ ಕುಮಾರ್ ರೈ ದುಗ್ಗಳ




ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ೨೦೨೧-೨೨ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಸಂತ ಕುಮಾರೆ ರೈ ದುಗ್ಗಳರವರ ಅಧ್ಯಕ್ಷತೆಯಲ್ಲಿ ಸೆ.೨೦ ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ.ರವರು ಸಂಘದ ೨೦೨೧-೨೨ ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದಲ್ಲಿ ವರ್ಷಾಂರಂಭಕ್ಕೆ ೩೧೨೭ ಅ ತರಗತಿ ಸದಸ್ಯರು ಇದ್ದರು, ವರದಿ ವರ್ಷದಲ್ಲಿ ಒಟ್ಟು ೧೦೦ ಜನರನ್ನು ಸೇರ್ಪಡೆಗೊಳಿಸಿದ್ದು ೨೫ ಮಂದಿ ಸದಸ್ಯರ ಸದಸ್ಯತ್ವವನ್ನು ಅವರ ಕೇಳಿಕೆಯಂತೆ ರದ್ದುಗೊಳಿಸಲಾಗಿದ್ದು ಸಂಘದಲ್ಲಿ ಕೊನೆಗೆ ಒಟ್ಟು ೩೨೦೨ ಮಂದಿ ಅ ತರಗತಿ ಸದಸ್ಯರು ಇದ್ದಾರೆ.ಈ ಪೈಕಿ ೯೮೪ ಸದಸ್ಯರು ಅಪೂರ್ಣ ಪಾಲುಗಳನ್ನು ಹೊಂದಿದ್ದು ಒಟ್ಟು೨೨೧೯ ಮಂದಿ ಪೂರ್ಣ ಪಾಲು ಹೊಂದಿದ ಸದಸ್ಯರು ಇದ್ದಾರೆ ಎಂದು ತಿಳಿಸಿದರು. ಪಾಲು ಬಂಡವಾಳದಲ್ಲಿ ವರ್ಷದ ಕೊನೆಗೆ ರೂ.೧,೮೭,೩೪,೫೫೦ ಪಾಲು ಬಂಡವಾಳ ಇರುತ್ತದೆ ಠೇವಣಿಯಲ್ಲಿ ಹಿಂದಿನ ವರ್ಷಕ್ಕಿಂತ ೧ ಕೋಟಿ ೬೩ ಲಕ್ಷ ಹೆಚ್ಚುವರಿಯಾಗಿದೆ ಎಂದು ತಿಳಿಸಿದರು. ಸಂಘವು ವರದಿ ವರ್ಷದಲ್ಲಿ ಒಟ್ಟು ರೂ.೧೮೪ ಕೋಟಿ ವ್ಯವಹಾರ ನಡೆಸಿದ್ದು ರೂ.೪೩,೦೨,೫೧೬ ನಿವ್ವಳ ಲಾಭ ಪಡೆದುಕೊಂಡಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು.

ಹಿರಿಯ ಸದಸ್ಯರುಗಳಿಗೆ, ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ ಮಾತನಾಡಿ, ಸಂಘವು ಹಿಂದಿನ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದ್ದು ಠೇವಣಿ ಮತ್ತು ಪಾಲು ಬಂಡವಾಳದಲ್ಲೂ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು. ಈ ವರ್ಷ ಸಂಘವು ರೂ.೪೩,೦೨,೫೧೬ ನಿವ್ವಳ ಲಾಭ ಗಳಿಸಿದ್ದು ಇದರಲ್ಲಿ ಸದಸ್ಯರಿಗೆ ಶೇ.೧೦.೦೫ ಡಿವಿಡೆಂಡ್ ಕೊಡುವುದು ಎಂದು ತಿಳಿಸಿದರು. ಸಂಘದ ಅಭಿವೃದ್ಧಿಯಲ್ಲಿ ಸದಸ್ಯರುಗಳ ಪಾತ್ರ ಮಹತ್ತರವಾದ್ದು ಆಗಿದೆ ಎಂದು ಹೇಳಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಆಡಳಿತ ಮಂಡಳಿಗೆ, ಸರ್ವ ಸದಸ್ಯರುಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ, ಡಿಸಿಸಿ ಬ್ಯಾಂಕ್ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.


2022-23 ನೇ ಸಾಲಿಗೆ ಕೈಗೊಳ್ಳಲಿರುವ ಕಾರ್ಯಚಟುವಟಿಕೆಗಳು
ಸಂಘದ ಕಾರ್ಯಕ್ಷೇತ್ರದಲ್ಲಿ ಹೊಸದಾಗಿ ೧೫೦ ಅರ್ಹರನ್ನು ಸಂಘದ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವುದು, ಹೆಚ್ಚು ಪಾಲು ಬಂಡವಾಳ ಸಂಗ್ರಹ ಮಾಡುವುದು, ೨.೫ ಕೋಟಿ ಹೆಚ್ಚುವರಿ ಠೇವಣಾತಿ ಸಂಗ್ರಹ ಗುರಿ ಹಾಕಿಕೊಳ್ಳುವುದು, ಸಾಲ ನೀಡಿಕೆಯಲ್ಲಿ ಹೆಚ್ಚಳ ಮಾಡುವುದು, ಸ್ವಸಹಾಯ ಗುಂಪುಗಳಿಗೆ ಹೆಚ್ಚುವರಿ ಸಾಲ ನೀಡಲು ಉದ್ದೇಶಿಸಲಾಗಿದೆ. ವ್ಯಾಪಾರ ವಹಿವಾಟುನಲ್ಲಿ ಲಾಭಾಂಶ ಹೆಚ್ಚಿಸಲು ಉದ್ದೇಶಿಸಲಾಗಿದೆ. ಗ್ರಾಹಕರಿಗೆ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯ, ಪೆರ್ಲಂಪಾಡಿ ಕೇಂದ್ರ ಕಚೇರಿಯ ಕಟ್ಟಡದ ಮೇಲ್ಬಾಗದಲ್ಲಿ ಸಭಾಂಗಣ ನಿರ್ಮಿಸುವುದು, ಕೇಂದ್ರ ಕಚೇರಿಯ ಮುಂಭಾಗದಲ್ಲಿ ಆವರಣ ಗೋಡೆ ವಿಸ್ತರಣೆ, ಏಕರೂಪದ ತಂತ್ರಾಂಶ ಅಳವಡಿಸುವುದು ಇತ್ಯಾದಿ ಕಾರ್ಯಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷ ವಸಂತ ಕುಮಾರ್ ರೈರವರು ತಿಳಿಸಿದರು.


ಸದಸ್ಯರಿಂದ ಬಂದ ಸಲಹೆ ಸೂಚನೆಗಳು:
ಸಾಲ ಮನ್ನಾದಲ್ಲಿ ಸಂಘದ ೫೮೨ ಮಂದಿಗೆ ಸಾಲ ಮನ್ನಾ ಆಗಿದ್ದು ೨೩ ಮಂದಿಗೆ ಬಾಕಿ ಇದೆ ಈ ಬಗ್ಗೆ ಸದಸ್ಯರು ಆಡಳಿತ ಮಂಡಳಿಯ ಗಮನಕ್ಕೆ ತಂದು ಸರಕಾರಕ್ಕೆ ಈ ಬಗ್ಗೆ ಬರೆದುಕೊಂಡು ಒತ್ತಾಯಿಸಿಬೇಕು ಎಂದು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ೨೩ ಮಂದಿಯ ಹೆಸರು ಗ್ರೀನ್ ಲಿಸ್ಟ್‌ನಲ್ಲಿದೆ. ನಾವು ಮತ್ತೊಮ್ಮೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ತಿಳಿಸಿದರು. ಮಣಿಕ್ಕರದಲ್ಲಿ ದಾನಿಯೋರ್ವರು ಸಂಘಕ್ಕೆ ನೀಡಿದ ಜಾಗ ಹಲವು ವರ್ಷಗಳಿಂದ ಖಾಲಿ ಇದ್ದು ಇದರಲ್ಲಿ ಕೂಡಲೇ ಸಂಘದ ವತಿಯಿಂದ ಕಟ್ಟಡ ನಿರ್ಮಿಸಿ ಸಂಘಕ್ಕೆ ಆದಾಯ ಬರುವಂತೆ ಮಾಡಬೇಕು ಎಂದು ಗಫೂರ್ ಸಾಹೇಬ್‌ರವರು ಮನವಿ ಮಾಡಿಕೊಂಡರು. ಪ್ರಮೋದ್ ಕೆ.ಎಸ್.ರವರು ಕೆಲವೊಂದು ಬೇಡಿಕೆಗಳ ಮನವಿಯನ್ನು ಸಂಘಕ್ಕೆ ಸಲ್ಲಿಸಿದರು. ಬಾಬು ರಾಜೇಂದ್ರ, ಕುಂಟಿಕಾನ ಲಕ್ಷ್ಮಣ ಗೌಡ, ಶ್ಯಾಮ್ ಸುಂದರ ರೈ, ಮುರಳೀಧರ ಗೌಡ ಕೆಮ್ಮಾರ, ಭಾಸ್ಕರ ರೈ ಕಂಟ್ರಮಜಲು, ಗಿರಿಧರ ಗೌಡ, ಬೆಳಿಯಪ್ಪ ಗೌಡ ಕತ್ಲೆಡ್ಕ ಸೇರಿದಂತೆ ಹಲವು ಮಂದಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಡಿಸಿಸಿ ಬ್ಯಾಂಕ್ ಪ್ರತಿನಿಧಿ, ವಲಯ ಮೇಲ್ವಿಚಾರಕರಾದ ಶರತ್ ಡಿ.ಯವರು ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ವಿವಿಧ ಸವಲತ್ತು, ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಕೆ.ಬಿ, ನಿರ್ದೇಶಕರುಗಳಾದ ಗಂಗಾಧರ ಗೌಡ ಕೆ, ವೆಂಕಟ್ರಮಣ ಕೆ.ಎಸ್, ತೀರ್ಥಾನಂದ ದುಗ್ಗಳ, ಸತೀಶ್ ಪಾಂಬಾರು, ಅಣ್ಣಪ್ಪ ನಾಯ್ಕ ಬಿ, ಶಿವರಾಮ, ನಾಗವೇಣಿ ಕೆ.ಕೆ, ಗುರುವಪ್ಪ ಎಂ, ವಿಶಾಲಾಕ್ಷಿ , ವೃತ್ತಿಪರ ನಿರ್ದೇಶಕ ತಿಮ್ಮಪ್ಪಯ್ಯ ಎಂ. ರೈತ ಮಿತ್ರಕೂಟದ ಅಧ್ಯಕ್ಷ ದಿವಾಕರ ರೈ ಕೆರೆಮೂಲೆ, ನವೋದಯ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು ಉಪಸ್ಥಿತರಿದ್ದರು. ನಿರ್ದೇಶಕ ಗುರುವಪ್ಪ ಎಂ ಪ್ರಾರ್ಥಿಸಿ, ನಿರ್ದೇಶಕಿ ವಿಶಾಲಾಕ್ಷಿ ಸ್ವಾಗತಿಸಿದರು. ನಿರ್ದೇಶಕ ಸತೀಶ್ ಪಾಂಬಾರು ವಂದಿಸಿದರು. ಸಂಘದ ಸಹ ಕಾರ್ಯನಿರ್ವಹಣಾಧಿಕಾರಿ ಗಿರಿಜಾಕೆ, ಲೆಕ್ಕಿಗರಾದ ಬಾಲಗಂಗಾಧರ ಕೆ, ಹಿರಿಯ ಗುಮಾಸ್ತ ಸುಬ್ಬಯ್ಯ ಕೆ, ಶಾಖಾ ವ್ಯವಸ್ಥಾಪನ ಜಯರಾಮ ಕೆ, ಗುಮಾಸ್ತರಾದ ಭರತ್‌ರಾಜ್ ಮತ್ತು ಪುನೀತ್ ಡಿ.ವಿ, ಮಾರಾಟ ಸಹಾಯಕರಾದ ಹುಕ್ರಪ್ಪ ಗೌಡ ಮತ್ತು ಉಮೇಶ್ ಬಿ ಹಾಗೂ ಸಹಾಯಕ ದಯಾನಂದ ಸಹಕರಿಸಿದ್ದರು.

 

ಹಿರಿಯ ಸದಸ್ಯರಿಗೆ, ಮಾಜಿ ಅಧ್ಯಕ್ಷರುಗಳಿಗೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
ಸಂಘದ ಹಿರಿಯ ಸದಸ್ಯರನ್ನು , ಮಾಜಿ ಅಧ್ಯಕ್ಷರುಗಳನ್ನು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಹಿರಿಯ ಸದಸ್ಯರುಗಳಾದ ಸುಂದರ ಗೌಡ ಪಾಂಬಾರು, ಸಂಜೀವ ರೈ ಕಲಾ, ನಾಗಪ್ಪ ಗೌಡ ಪಾಂಬಾರು ಚಾಳೆಪಡ್ಪು, ಬಾಬು ರಾಜೇಂದ್ರ ಕೊಂರ್ಬಡ್ಕ ಪೆರ್ಲಂಪಾಡಿ, ಈಶ್ವರ ನಾಯ್ಕ ಸಪ್ಪುಕಾನ, , ಶೇಷಪ್ಪ ಗೌಡ ಕೊಕ್ಕಿತಡ್ಕ ಪಾಂಬಾರು, ಚಿನ್ನಪ್ಪ ಗೌಡ ಕಲಾ, ಚನಿಯಪ್ಪ ನಾಯ್ಕ ಪುತ್ರೋಡಿಮೂಲೆ, ಶೀನಪ್ಪ ಗೌಡ ಪೆರ್ಲಂಪಾಡಿ, ಲಕ್ಷ್ಮೀ ಎನ್,ರೈ , ಶೀನಪ್ಪ ಗೌಡ ಚಾಮೆತ್ತಕುಮೇರ್, ಕೊರಗಪ್ಪ ಗೌಡ ಬಾಯಂಬಾಡಿ, ಗಂಗಾಧರ ಗೌಡ ಕೆಮ್ಮಾರ, ರಾಘವ ಗೌಡ ಒರ್ಕೊಂಬು, ಗಿರಿಜಾ ರೈ ನಳೀಲು, ಜತ್ತಪ್ಪ ಗೌಡ ಕಜೆಕುದ್ಕುಳಿ ಅಲ್ಲದೆ ಮಾಜಿ ಅಧ್ಯಕ್ಷರುಗಳಾದ ಸೀತಾರಾಮ ಭಂಡಾರಿ ಕೊಂರ್ಬಡ್ಕಬೀಡು ಮತ್ತು ೭೫ ನೇ ಹುಟ್ಟುಹಬ್ಬದ ಪ್ರಯುಕ್ತ ಲಕ್ಷ್ಮಣ ಗೌಡ ಕುಂಟಿಕಾನ ದಂಪತಿಯನ್ನು ಶಾಲು, ಸ್ಮರಣಿಕೆ, ಪೇಟಾ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಿರ್ದೇಶಕ ಕೆ.ಎಸ್.ವೆಂಕಟ್ರಮಣರವರು ಸನ್ಮಾನಿತರ ಪರಿಚಯವನ್ನು ಸಭೆಗೆ ಓದಿ ಹೇಳಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಭಿರಾಮ ಎಂ, ಮಾನಸ, ಆಪೇಕ್ಷಾ ರೈ, ವಿನುತಾ, ರುಚಿತಾರವರುಗಳಿಗೆ ೫ ಸಾವಿರ ನಗದು ಹಾಗೂ ಸ್ಮರಣಿಕೆ ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೃಷಾ, ಅನುಶ್ರೀ, ತನುಶ್ರೀ, ಶ್ರೀನಿಧಿ, ಕಿರಣ್, ಪವಿತ್ರ, ವಿಖ್ಯಾತ್, ಆಯಿಷತ್ ಇಸ್ರಾರವರುಗಳನ್ನು ಶಾಲು,ಸ್ಮರಣಿಕೆ ಮತ್ತು ತಲಾ ೧ ಸಾವಿರ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

“ ಸಂಘವು ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಠೇವಣಿ ಹಾಗು ಪಾಲು ಬಂಡವಾಳದಲ್ಲೂ ಹೆಚ್ಚಳವನ್ನು ಸಾಧಿಸಿದ್ದು ಈ ವರ್ಷ ಸದಸ್ಯರಿಗೆ ಕಳೆದ ವರ್ಷಕ್ಕಿಂತ ೧ ಶೇ ಹೆಚ್ಚುವರಿ ಶೇ. ೧೦.೦೫ ಡಿವಿಡೆಂಡ್ ನೀಡಲಾಗಿದೆ. ಸಂಘದ ಹಿರಿಯ ಸದಸ್ಯರಿಗೆ, ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತಾ, ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.”
ವಸಂತ ಕುಮಾರ್ ರೈ ದುಗ್ಗಳ, ಅಧ್ಯಕ್ಷರು ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘ
………
ಚಿತ್ರ: ೧ ಅಧ್ಯಕ್ಷರು ಮಾತನಾಡುತ್ತಿರುವುದು

LEAVE A REPLY

Please enter your comment!
Please enter your name here