ಸೆ.26ರಿಂದ ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

0

ಭಕ್ತಿಗೀತೆ, ಸಾಂಸ್ಕೃತಿಕ ವೈಭವ, ಭರತನಾಟ್ಯ, ಹರಿಕಥೆ, ಶಾಸ್ತ್ರೀಯ ಸಂಗೀತ, ಹವ್ಯಕ ಯಕ್ಷಗಾನ ತಾಳಮದ್ದಳೆ ವಿಶೇಷ

ಪುತ್ತೂರು:ಡಾ|ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ ಸೆ.26ರಿಂದ ಅ.4ರ ತನಕ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರುಗಲಿದೆ. ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹಿಂದೂಸ್ತಾನಿ, ಕರ್ನಾಟಕ ಶೈಲಿಯ ಭಕ್ತಿಗೀತೆ, ಸಾಂಸ್ಕೃತಿಕ ವೈಭವ, ಭರತನಾಟ್ಯ, ಹರಿಕಥೆ, ಶಾಸೀಯ ಸಂಗೀತ, ಹವ್ಯಕ ಯಕ್ಷಗಾನ ತಾಳಮದ್ದಳೆ, ಸಂಸ್ಮರಣೆ ಕಾರ್ಯಕ್ರಮಗಳು ಜರುಗಲಿವೆ.

ಸೆ.26ಕ್ಕೆ ಸಂಜೆ ನಗರಸಭೆ ಪೌರಾಯುಕ್ತ ಮಧು ಎಸ್ ನರಿಯೂರು ಪುತ್ತೂರು ದಸರಾ ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ.ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ರಾಗ ಸಂಗಮ ಸಂಗೀತ ಸಭಾದ ರಾಧಿಕಾ ನಾಯಕ್ ಅವರಿಂದ ಹಿಂದೂಸ್ತಾನಿ ಮತ್ತು ಪವಿತ್ರಾ ರೂಪೇಶ್ ಅವರಿಂದ ಕರ್ನಾಟಕ ಶೈಲಿಯ ಭಕ್ತಿಗೀತೆಗಳು ಜರುಗಲಿದೆ.

ಸೆ.27ಕ್ಕೆ ನೆಹರುನಗರದ ರಾಘವೇಂದ್ರ ಎಚ್.ಎಮ್.ಅವರು ರಂಗಚಟುವಟಿಕೆ ಕುರಿತು ಉಪನ್ಯಾಸ ನೀಡಲಿದ್ದಾರೆ.ಬಳಿಕ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.ಸೆ.28ರಂದು ಪ್ರೊ|ವೇದವ್ಯಾಸ ರಾಮಕುಂಜ ಅವರಿಂದ ‘ನಮ್ಮ ಸಾಂಸ್ಕೃತಿಕ ಪರಂಪರೆ’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.ಬಳಿಕ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ನಾಟ್ಯರಂಗ ಶಾಸೀಯ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.ಸೆ.29ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ‘ಯುವಶಕ್ತಿ ಹೊಸ ಭರವಸೆಯ ಕಡೆಗೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.ಬಳಿಕ ಕಾಸರಗೋಡು ಸುಧಾಕರ ಕೋಟೆ ಕುಂಜತ್ತಾಯ ಅವರಿಂದ ಹರಿಕಥಾ ಸತ್ಸಂಗ (ಗಜ ಗೌರಿವೃತ) ಕಾರ್ಯಕ್ರಮ ನಡೆಯಲಿದೆ. ಸೆ.30ಕ್ಕೆ ಪದ್ಮಾ ಕೆ.ಆರ್ ಆಚಾರ್ಯ ಅವರಿಂದ ‘ಕಲೆ- ಜೀವನಕಲೆ’ ಕುರಿತು ಉಪನ್ಯಾಸ, ಬಳಿಕ ಕು.ತನ್ಮಯಿ ಉಪ್ಪಂಗಳ ಅವರಿಂದ ಕರ್ನಾಟಕ ಶಾಸೀಯ ಸಂಗೀತ ಕಾರ್ಯಕ್ರಮ ಜರುಗಲಿದೆ. ಅ.1ಕ್ಕೆ ‘ಮನಸ್ಸು ಮತ್ತು ಮಾನಸಿಕ ಆರೋಗ್ಯದ ಪ್ರಾಮುಖ್ಯ’ ಕುರಿತು ಬೊಳುವಾರು ಆಕಾಶ್ ಕೋಚಿಂಗ್ ಸೆಂಟರ್‌ನ ನಾಗಶ್ರೀ ಐತಾಳ್ ಅವರು ಉಪನ್ಯಾಸ ನೀಡಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಭಾರತೀ ನೃತ್ಯಾಲಯದ ವಿದ್ವಾನ್ ನಂದಕಿಶೋರ್ ಬಿ.ಆರ್.ಅವರ ನಿರ್ದೇಶನದಲ್ಲಿ ಶಾಸೀಯ ಭರತನಾಟ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.ಅ.2ಕ್ಕೆ ಬೆಳಿಗ್ಗೆ ಗಂಟೆ 9.30ರಿಂದ ರಸಿಕರತ್ನ ವಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನ ಕುಮಾರ್ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಹವ್ಯಕ ಯಕ್ಷಗಾನ ತಾಳಮದ್ದಳೆ ಮತ್ತು ಸಂಸ್ಮರಣೆ ನಡೆಯಲಿದೆ. ಮಧ್ಯಾಹ್ನ ಯಕ್ಷರಂಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಪುತ್ತೂರು ಸಿಟಿ ಆಸ್ಪತ್ರೆಯ ಡಾ.ಎ.ಪಿ.ಭಟ್ ಅವರಿಂದ ‘ವೈದ್ಯೋನಾರಾಯಣೋ ಹರಿಃ’ ಕುರಿತು ಉಪನ್ಯಾಸ,ಅ.3ಕ್ಕೆ ಸಂಜೆ ‘ರಕ್ಷಣಾ ಕಾರ್ಯಾಚರಣೆಯ ರೋಚಕ ಅನುಭವಗಳು’ ಕುರಿತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಎಸ್ ಅವರು ಉಪನ್ಯಾಸ ನೀಡಲಿದ್ದಾರೆ.ಬಳಿಕ ವಿವೇಕಾನಂದ ಪಿ.ಯು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಅ.4ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಪುತ್ತೂರು ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ಗೌರವ ಸಲಹೆಗಾರ ಎನ್.ಸುಬ್ರಹ್ಮಣ್ಯಂ, ಕಾರ್ಯದರ್ಶಿ ಎಂ.ಟಿ ಜಯರಾಮ್ ಭಟ್, ಕೋಶಾಽಕಾರಿ ರಮೇಶ್ ಬಾಬು ಪಿ ಮತ್ತು ಉಪಾಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಮಡಿವಾಳಕಟ್ಟೆ ರುದ್ರಭೂಮಿ ನಿರ್ವಾಹಕ ಸತೀಶ್ ಪಿ.ಬಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಪುತ್ತೂರು ಇದರ ವತಿಯಿಂದ ‘ಲೀಲಾಮೂರ್ತಿ ಶ್ರೀಕೃಷ್ಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here