ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 30ರಂದು ಶ್ರೀ ಲಲಿತ ಪಂಚಮಿ ಮಹೋತ್ಸವ ಶ್ರೀ ಚಂಡಿಕಾ ಯಾಗ ನಡೆಯಲಿದೆ.
ಬೆಳಗ್ಗೆ ಗಣಪತಿ ಹವನ ನಡೆದು ಚಂಡಿಕಾಯಾಗ ಆರಂಭಗೊಳ್ಳಲಿದೆ. ಬಳಿಕ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ದ. ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷರಾದ ರವೀಂದ್ರ ಎಸ್ ಕಂಬಳಿ ಹಾಗೂ ಪುತ್ತೂರು ಎ.ಪಿ. ಎಂ. ಸಿ.ಯ ಅಧ್ಯಕ್ಷರಾದ ರಾಧಾಕೃಷ್ಣ ರೈ ಬೂಡಿಯಾರು ರವರು ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಅರ್ಥದಾರಿ, ಸಾಹಿತಿಗಳಾದ ಡಾ.ಕೆ.ರಮಾನಾಂದ ಬನಾರಿ ಹಾಗೂ ಸೇರಾಜೆ ಸೀತಾರಾಮ ಭಟ್, ಯೋಗಗುರು ಕೆ.ಆನಂದ ಶೆಟ್ಟಿ ಅಳಿಕೆ, ಖ್ಯಾತ ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಯಕ್ಷಗಾನ ಭಾಗವತರಾದ ಶೇಖರ ಶೆಟ್ಟಿ ಬಾಯಾರುರವರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಬಳಿಕ ಚಂಡಿಕಾಯಾಗದ ಪೂರ್ಣಾಹೂತಿ, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨.೩೦ರಿಂದ ಯಕ್ಷಪ್ರತಿಭೆ ಮಂಗಳೂರು ಇವರಿಂದ ಬೇಡರಕಣ್ಣಪ್ಪ ಯಕ್ಷಗಾನ ಬಯಲಾಟ ನಡೆಯಲಿದೆ. ಅದೇರೀತಿ ಕ್ಷೇತ್ರದಲ್ಲಿ ಅ.೪ರಂದು ಬೆಳಗ್ಗೆ ಸಾಮೂಹಿಕ ವಾಹನ ಪೂಜೆ, ಅ.೫ರಂದು ಶ್ರೀ ಶಾರದಾಮಹೋತ್ಸವ, ಸಾಮೂಹಿಕ ವಿದ್ಯಾರಂಭ ನಡೆಯಲಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.