ಪುತ್ತೂರು : ಭಾರತೀಯ ಗಡಿ ರಕ್ಷಣಾ ದಳದ ಯೋಧ, ಬೆಂಗಳೂರು ಯಲಹಂಕದ ಬಿಎಸ್ಎಫ್ ಇನ್ಸ್ಪೆಕ್ಟರ್ ಪುಟ್ಟಣ್ಣ ಗೌಡ ಕುಕ್ಕುತ್ತಡಿರವರು ಸೆ.೩೦ರಂದು ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದಾರೆ.
ಬಲ್ನಾಡು ಉಜ್ರುಪಾದೆ ಕುಕ್ಕುತ್ತಡಿ ದಿ.ಅಂತಪ್ಪ ಗೌಡ ಮತ್ತು ದಿ.ಪಾರ್ವತಿ ದಂಪತಿ ಪುತ್ರರಾದ ಇವರು 1984ರಲ್ಲಿ ಬಿಎಸ್ಎಫ್ ಕಾನ್ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿ ಮೇಘಾಲಯ, ಪಂಜಾಬ್, ಪಶ್ಚಿಮಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ದೆಹಲಿ, ಜಮ್ಮುಕಾಶ್ಮೀರ ಹಾಗೂ ಕರ್ನಾಟಕದಲ್ಲಿ ಒಟ್ಟು ೩೮ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಯಲಹಂಕದಲ್ಲಿ ಬಿಎಸ್ಎಫ್ ಕಾನ್ಸ್ಟೇಬಲ್ ಅಗಿ ಕರ್ತವ್ಯಕ್ಕೆ ಸೇರಿದ್ದ ಇವರು ಭಡ್ತಿ ಹೊಂದಿ ಬಿಎಸ್ಎಫ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಕರ್ತವ್ಯದ ಸಮಯದಲ್ಲಿ D.G.(Director General Commondation Role) ಮತ್ತು PMMS(Police Medal for Meritorious Service) ಗೌರವ ಪುರಸ್ಕೃತರಾಗಿರುವ ಇವರು ಪತ್ನಿ, ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.