ಪುತ್ತೂರು:ಸವಣೂರಿನಲ್ಲಿ ಸೆ.28ರಂದು ಬೇಕರಿಗೆ ಹಾನಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸವಣೂರು ಗ್ರಾ.ಪಂ.ಕಟ್ಟಡದಲ್ಲಿರುವ ನನ್ನ ಮಾಲಕತ್ವದ ಪದ್ಮಶ್ರೀ ಬೇಕರಿ ಮತ್ತು ಕೋಲ್ಡ್ ಹೌಸ್ಗೆ ಸೆ.28ರಂದು ಬೆಳಿಗ್ಗೆ 11.50 ಗಂಟೆಗೆ ಆರೋಪಿಗಳಾದ ಪೂವಣಿ ಗೌಡ, ಪ್ರಸಾದ್, ಬಾಲಕೃಷ್ಣ ಗೌಡ ಹಾಗೂ ಭರತ್ ಎಂಬವರು ಅಟೋ ರಿಕ್ಷಾದಲ್ಲಿ ಬಂದು, ಅವರ ಪೈಕಿ ಪ್ರಸಾದ್ ಎಂಬಾತ ಕೈಯಲ್ಲಿದ್ದ ತಲವಾರಿನಿಂದ ಅಂಗಡಿಯ ಗಾಜಿನ ಶೋಕೇಸ್ಗೆ ಹೊಡೆದು ಹಾನಿ ಮಾಡಿ, ನಿನ್ನನ್ನು ಮತ್ತು ನಿನ್ನ ತಂದೆಯನ್ನು ಈ ದಿನ ಸಂಜೆಯ ಒಳಗೆ ಕಡಿದು ಕೊಲ್ಲುತ್ತೇನೆ ಎಂದು ಬೆದರಿಕೆ ಒಡ್ಡಿದ್ದಲ್ಲದೇ, ಇದನ್ನು ಪ್ರಶ್ನಿಸಿದಾಗ ಬಾಲಕೃಷ್ಣರು ನಿನ್ನ ಅಂಗಡಿ ಹುಡಿಮಾಡುವುದಲ್ಲ, ಅಂಗಡಿಗೆ ಬೆಂಕಿ ಹಾಕುತ್ತೇವೆ ಎಂದು ಬೆದರಿಸಿದ್ದು, ಉಳಿದವರೂ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ಅವರು ಬಂದ ಅಟೋ ರಿಕ್ಷಾದಲ್ಲಿ ಹೋಗಿರುತ್ತಾರೆ. ಈ ಘಟನೆಯಿಂದ ಶೋಕೇಸ್ ಹುಡಿಯಾಗಿ ಸುಮಾರು 1.5 ಲಕ್ಷ ರೂ.ನಷ್ಟ ಉಂಟಾಗಿರುತ್ತದೆ ಎಂದು ಬೇಕರಿ ಮಾಲಕ, ಇಡ್ಯಾಡಿ ಗುಣಪಾಲ ಎಂಬವರ ಮಗ ಮೋಕ್ಷಿತ್ ಇ.(24 ವ.) ಇಡ್ಯಾಡಿ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಕಲಂ 427, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 2(o) KPDLP Actಯಂತೆ ಪ್ರಕರಣ ದಾಖಲಾಗಿದೆ.