ಪುತ್ತೂರು: ನವರಾತ್ರಿ ಉತ್ಸವದ ಅಂಗವಾಗಿ ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.2ರಂದು ವಿಶೇಷವಾಗಿ ‘ಚಂಡಿಕಾಯಾಗ’ ನಡೆಯಲಿದೆ.
ಬೆಳಿಗ್ಗೆ ಮಹಾಗಣಪತಿ ಹೋಮದ ಬಳಿಕ ಚಂಡಿಕಾಯಾಗ ಪ್ರಾರಂಭಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಪದ್ಮನಾಭರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಬನ್ನೂರು ಸ್ಫೂರ್ತಿ ಯುವ ಸಂಸ್ಥೆಯ ವತಿಯಿಂದ ಭಜನೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಸೆ.4ರಂದು ಸಂಜೆ ಆಯುಧ ಪೂಜೆ ಹಾಗೂ ರಾತ್ರಿ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.