ಪುತ್ತೂರು:ಮದುಮಗಳ ಶೃಂಗಾರ, ಮೆಹಂದಿ ಹಾಗೂ ಇನ್ನಿತರ ಮಹಿಳೆಯರ ಬ್ಯೂಟಿಷಿಯನ್ ಸೇವೆಗಳ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹಾಗೂ ಹವಾನಿಯಂತ್ರಿತ ಸೌಲಭ್ಯಗಳನ್ನು ಹೊಂದಿರುವ ದೀಪಾ ಬ್ಯೂಟಿಪಾರ್ಲರ್ ಅ.5ರಂದು ದರ್ಬೆ ಬೈಪಾಸ್ ಬಳಿಯ ಆರಾಧ್ಯ ಆರ್ಕೇಡ್ನಲ್ಲಿ ಶುಭಾರಂಭಗೊಂಡಿತು.
ಮಳಿಗೆಯನ್ನು ನಗರಸಭಾ ಸದಸ್ಯೆ ದೀಕ್ಷಾ ಪೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಮನೆಯ ವಾತಾವರಣದ ಹೊರತಾಗಿ ಸ್ವ ಉದ್ಯೋಗಗಳನ್ನು ಪ್ರಾರಂಭಿಸಿ ಇಂದು ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ನೂತನ ಸಂಸ್ಥೆ ದೀಪಾ ಬ್ಯೂಟಿಪಾರ್ಲರ್ ಮಹಿಳೆಯರ ಆಕರ್ಷಣೀಯ ಕೇಂದ್ರವಾಗಿ ಬೆಳೆಯಲಿ. ಮಹಿಳೆಯರು ಪ್ರೋತ್ಸಾಹ ನೀಡಿ, ಉನ್ನತವಾಗಿ ಬೆಳೆಯಲಿ. ಇನ್ನಷ್ಟು ಸಂಸ್ಥೆಗಳು ತೆರೆಯುವಂತಾಗಲಿ ಎಂದು ಹಾರೈಸಿದರು.
ನಮ್ಮಲ್ಲಿ ಫೇಶಿಯಲ್, ಬ್ಲೀಚ್, ಕ್ಲೀನ್ ಅಪ್, ಕಲರಿಂಗ್, ಮೆನಿಕ್ಯೂರ್, ಪೆಡಿಕ್ಯೂರ್, ಹೇರ್-ಕಟ್ಟಿಂಗ್-ಸ್ಟ್ರೇಟ್ನಿಂಗ್-ಕಲರಿಂಗ್, ವಧುವಿನ ಶೃಂಗಾರ, ಮದರಂಗಿ ಸೇರಿದಂತೆ ಎಲ್ಲಾ ರೀತಿಯ ಬ್ಯೂಟಿಷಿಯನ್ ಸೇವೆಗಳು ಲಭ್ಯವಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ತರದ ಶೃಂಗಾರ ಆಭರಣಗಳು ಬಾಡಿಗೆಗೆ ದೊರೆಯುತ್ತದೆ. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಮ್ಹಾಲಕಿ ದೀಪಾರವರು ತಿಳಿಸಿದ್ದಾರೆ.