ವಿದ್ಯಾಭಾರತಿ ಕರ್ನಾಟಕ ಕ್ಷೇತ್ರಿಯ ಮಟ್ಟದ ಜ್ಞಾನ-ವಿಜ್ಞಾನ ಮೇಳಕ್ಕೆ ವಿವೇಕಾನಂದ ಆ.ಮಾ. ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನಮೇಳವು ಹುಣಸೂರಿನ ಶಾಸ್ತ್ರೀ ಪಬ್ಲಿಕ್ ಸ್ಕೂಲ್ ನಲ್ಲಿ ಸೆ. 30 ಹಾಗೂ 1 ಅಕ್ಟೋಬರ್ 2022ರಂದು ನಡೆಯಿತು. ಈ ಸ್ಪರ್ಧೆಗಳಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಗಣಿತ ಮಾದರಿ ತಯಾರಿಯಲ್ಲಿ 7ನೇ ತರಗತಿಯ ಶಮನ್(ನಿತ್ಯಾನಂದ.ಕೆ ಮತ್ತು ಶ್ರೀಮತಿ ಸಂಧ್ಯಾ.ಕೆ ಇವರ ಪುತ್ರ) ಪ್ರಥಮ ಸ್ಥಾನ ಹಾಗೂ 7ನೇ ತರಗತಿಯ ಪ್ರೀತಿ.ಪಿ.ಪ್ರಭು(ಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಹೈದರಾಬಾದಿನಲ್ಲಿ ನಡೆಯುವ ಕ್ಷೇತ್ರಿಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ 7ನೇತರಗತಿಯ ನಿರೀಕ್ಷಿತ್ ಹೆಗ್ಡೆ (ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ಇವರ ಪುತ್ರ), 8ನೇ ತರಗತಿಯ ಶ್ರೇಯಸ್ ವರಂಬಳ್ಳಿತ್ತಾಯ(ಎಂ.ಶ್ರೀನಿವಾಸ ವರಂಬಳ್ಳಿತ್ತಾಯ ಮತ್ತು ಸಂಧ್ಯಾ ವರಂಬಳ್ಳಿತ್ತಾಯ ಇವರ ಪುತ್ರ) ಮತ್ತು 6ನೇ ತರಗತಿಯ ಶುಶಾಂತ್.ಎ( ದಾಮೋದರ ಮತ್ತು ಸುನೀತಾ ಇವರ ಪುತ್ರ) ಅವರ ತಂಡ ಪ್ರಾಂತ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ.

ಕಿಶೋರ ವರ್ಗದ ಇನ್ನೋವೇಟಿವ್ ಮಾಡೆಲ್ ಸ್ಪರ್ಧೆಯಲ್ಲಿ 10ನೇ ತರಗತಿಯ ಪೃಥ್ವಿರಾಜ್ ಪ್ರಭು(ಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರ) ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಧನುಷ್ ರಾಮ್ (ದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ.ಡಿ.ಪ್ರಸನ್ನ ಇವರ ಪುತ್ರ), 10ನೇ ತರಗತಿಯ ಅಭಿರಾಮ್(ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ಇವರ ಪುತ್ರ) ಹಾಗೂ 9ನೇ ತರಗತಿಯ ಅಜಯ ರಾಮ್(ಕೇಶವ ಮೂರ್ತಿ ಮತ್ತು ಗೀತಾಲಕ್ಷ್ಮೀ ಇವರ ಪುತ್ರ) ತಂಡ, ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ 10ನೇ ತರಗತಿಯ ಅರ್ಚನಾ ಕಿಣಿ(ಹರೀಶ್ ಕಿಣಿ ಮತ್ತು ವಿನಯ ಕಿಣಿ ಇವರ ಪುತ್ರಿ), ಅಟಲ್ ಟಿಂಕರಿಂಗ್ ಮಾದರಿ ತಯಾರಿಯಲ್ಲಿ 10ನೇ ತರಗತಿಯ ಯುಕ್ತಶ್ರೀ (ಪಿ.ಹೇಮಚಂದ್ರ ಮತ್ತು ಹೈಮಿತಾ ಇವರ ಪುತ್ರಿ) ಹಾಗೂ ನೇಹ.ಜಿ.ಹೆಗ್ಡೆ (ಗಣೇಶ್.ಎಂ.ಹೆಗ್ಡೆ ಮತ್ತು ಪ್ರತಿಭಾ.ಜಿ.ಹೆಗ್ಡೆ ಇವರ ಪುತ್ರಿ) ತಂಡ, 8ನೇ ತರಗತಿಯ ಚಿನ್ಮಯಿ.ಎಲ್(ಎಲ್.ಕೃಷ್ಣ ಪ್ರಸಾದ್ ಮತ್ತು ಅಮೃತಾ.ಕೆ.ಪ್ರಸಾದ್ ಇವರ ಪುತ್ರಿ) ಹಾಗೂ ದಿಹರ್ಷ(ಎಸ್.ಶಿವಕುಮಾರ್ ಮತ್ತು ಎಸ್.ಪೊನ್ನಿ ಇವರ ಪುತ್ರಿ) ಪ್ರಾಂತೀಯ ಮಟ್ಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here