ಪುತ್ತೂರು: ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘಕ್ಕೆ ನೂರು ವರುಷ ತುಂಬಿರುವ ಸವಿನೆನಪಿಗಾಗಿ ಶತಮಾನೋತ್ಸವದ ಶತಕಾರ್ಯಕ್ರಮದ ಭಾಗವಾಗಿ ಪುತ್ತೂರು ತಾಲೂಕಿನ ಬನ್ನೂರು ನಂದಿಲದ ಸಂತೋಷ್ ಕುಮಾರ್ ವಾಗ್ಲೆರವರ ಮನೆಯಲ್ಲಿ ನಡೆದ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಬಳಿಕ ನಿವೃತ್ತ ಶಿಕ್ಷಕರುಗಳಿಗ ಸನ್ಮಾನ ಕಾರ್ಯಕ್ರಮ ನಡೆಯಿತು. ಸದಾಶಿವ ವಾಗ್ಲೆ ನೆಹರುನಗರ, ಶಾರದ ಸದಾಶಿವ ವಾಗ್ಲೆ, ಮಾಧವಿ ಜನಾರ್ಧನ ನಾಯಕ್ ಸೋಮಮೂಲೆ, ಕಮಲಾಕ್ಷಿ ದೇವಣ್ಣ ನಾಯಕ್ ಕರ್ಕುಂಜರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ. ಬಾಲಕೃಷ್ಣ ನಾಯಕ್ ತೆಂಕಿಲ ಸಾಧಕರನ್ನು ಸನ್ಮಾನಿಸಿ ಶುಭಹಾರೈಸಿ ಸಂಘದ ನೂರು ವರುಷದ ಸಾಧನೆಯನ್ನು ತಿಳಿಸಿದರು. ಎಸ್‌ಡಿಎಂಸಿ ಲಾ ಕಾಲೇಜಿನ ಪ್ರೊಫೆಸರ್ ಡಾ.ಸಂತೋಷ್ ಪ್ರಭು ಆಜೇರು, ಸಂಘದ ಹಿರಿಯ ನಿರ್ದೇಶಕರಾದ ವಿಷ್ಣು ಪ್ರಭು, ಶಂಕರ ನಾಯಕ್ ಆಜೇರು, ನಾರಾಯಣ ನಾಯಕ್ ಅನು ಡಿಜಿಟಲ್ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಸಂತೋಷ್ ಕುಮಾರ್ ಸ್ವಾಗತಿಸಿ ಶಂಕರ ನಾಯಕ್ ಆಜೇರು ವಂದಿಸಿದರು. ಸನ್ಮಾನ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Home ಚಿತ್ರ ವರದಿ ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ