ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ. 1ರಿಂದ 7ರ ತನಕ ಜರಗಲಿರುವ ಶ್ರೀ ದತ್ತ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ
ತುಳು ನಾಟಕ ಸ್ಪರ್ಧೆ ನಡೆಯಲಿದೆ.
ಪ್ರಥಮ ಬಹುಮಾನ 30,000 ರೂಪಾಯಿ ಹಾಗೂ ಶಾಶ್ವತ ಫಲಕ
ದ್ವಿತೀಯ ಬಹುಮಾನ 20,000 ರೂಪಾಯಿ ಹಾಗೂ ಶಾಶ್ವತ ಫಲಕ
ತೃತೀಯ ಬಹುಮಾನ 10,000 ರೂಪಾಯಿ ಹಾಗೂ ಶಾಶ್ವತ ಫಲಕ ಲಭಿಸಲಿದೆ.
ಅತ್ಯುತ್ತಮ ನಟ, ನಟಿ, ಪೋಷಕ ಪಾತ್ರ, ಸಂಗೀತ ನಿರ್ದೇಶಕ, ರಂಗ ನಿರ್ಮಾಣ, ನಿರ್ದೇಶಕ, ಉತ್ತಮ ಕೃತಿಗೆ, ವೇಷ ಭೂಷಣಕ್ಕೆ ಬಹುಮಾನ ಇದೆ.
ಆಸಕ್ತ ತಂಡಗಳು ತಮ್ಮ ನಾಟಕ ಹಾಗೂ ತಂಡಗಳ ಪೂರ್ಣ ವಿವರದೊಂದಿಗೆ ಪ್ರವೇಶ ಅಪೇಕ್ಷಾ ಪತ್ರ ವನ್ನು ಅ.31ರ ಮುಂಚಿತವಾಗಿ ಕಳುಹಿಸಬಹುದಾಗಿದೆ. 9ರಿಂದ 10 ನಾಟಕಗಳನ್ನು ಆಯ್ಕೆಮಾಡಿ, ಪ್ರದರ್ಶನದ ದಿನ – ಸಮಯ ನಿಗದಿ ಮಾಡಲಾಗುವುದು.
ಸ್ಪರ್ದೆಯಲ್ಲಿ ಭಾಗವಹಿಸುವ ತಂಡಗಳು ನೈತಿಕ ಮೌಲ್ಯಯುಕ್ತ, ಸಂದೇಶ ಭರಿತ ಯಾವುದೇ ಕಥಾವಸ್ತುವನ್ನು ಆಧರಿಸಿದ ಕೃತಿಯಾಗಿರಬೇಕು. ಸಾಮಾಜಿಕ, ಪೌರಾಣಿಕ, ಜಾನಪದ, ಚಾರಿತ್ರಿಕ, ಕಾಲ್ಪನಿಕ ಯಾವುದೇ ಸ್ವರೂಪದಲ್ಲಿರಬಹುದು.
ಪ್ರದರ್ಶನದ ಅವಧಿ ಕನಿಷ್ಠ 1.30 – ಗರಿಷ್ಠ 2.00 ಗಂಟೆಯಾಗಿರುತ್ತದೆ. ಪೂರ್ವಮುದ್ರಿತ ಸಂಭಾಷಣೆ ಹಾಗೂ ಸಂಗೀತ ಬಳಸಬಹುದಾಗಿದೆ.
ಪ್ರವೇಶ ದೃಢೀಕರಣ ಶುಲ್ಕ ಎರಡುಸಾವಿರ ರೂಪಾಯಿಯಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9448123061, 9480760799 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಒಡಿಯೂರು ನಾಟಕೋತ್ಸವ ಸಮಿತಿ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.