ಪುತ್ತೂರು: ಮಹಿಳೆಯೊಬ್ಬರು ಮಗನ ಮನೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಪಡುವನ್ನೂರು ಗ್ರಾಮದ ಅರ್ತ್ಯಡ್ಕದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪಡುವನ್ನೂರು ಗ್ರಾಮದ ಕರ್ಪುಡಿಕಾನ ಶೀನ ಪೂಜಾರಿ ಅವರ ಪತ್ನಿ ಚೆನ್ನಮ್ಮ(82ವ)ರವರು ಆತ್ಮಹತ್ಯೆ ಮಾಡಿಕೊಂಡವರು.ಅವರು ಅ.27ರಂದು ಬೆಳಿಗ್ಗೆ ತನ್ನ ಮಗ ಯೋಗೀಶ ಎಂಬವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.ಮೃತರ ಇನ್ನೋರ್ವ ಪುತ್ರ ರಾಧಾಕೃಷ್ಣ ಎಂಬವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.