ಪುತ್ತೂರು ರೇಂಜ್ ಸಮಸ್ತ ಮದ್ರಸ ಮೆನೇಜ್‌ಮೆಂಟ್ ಮಹಾಸಭೆ: ಅಧ್ಯಕ್ಷ : ರಫೀಕ್ ಕೊಡಜೆ, ಪ್ರ.ಕಾರ್ಯದರ್ಶಿ: ಹಮೀದ್ ಖಂದಕ್, ಕೋಶಾಧಿಕಾರಿ : ಅಬ್ದುಲ್ ಹಮೀದ್

0

ಪುತ್ತೂರು: ಪುತ್ತೂರು ರೇಂಜ್ ಸಮಸ್ತ ಮದ್ರಸ ಮೆನೇಜ್‌ಮೆಂಟ್ ಮಹಾಸಭೆ ಕಲ್ಲೆಗ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆಯಿತು. ಕಲ್ಲೇಗ ಜುಮಾ ಮಸೀದಿಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್‌ರವರು ದುವಾ ಹಾಗೂ ಉದ್ಘಾಟನೆ ನೆರವೇರಿಸಿದರು. ರಫೀಕ್ ಹಾಜಿ ಕೊಡಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಹಮೀದ್ ಖಂದಕ್ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.


೨೦೨೨-೨೫ನೇ ವರ್ಷದ ನೂತನ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ರಫೀಕ್ ಹಾಜಿ ಕೊಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಹಮೀದ್ ಖಂದಕ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಬಶೀರ್ ಹಾಜಿ ಕೋಡಿಯಾಡಿ, ಎಂ.ಎಸ್ ಹಮೀದ್, ಸಂಘಟನಾ ಕಾರ್ಯದರ್ಶಿಯಾಗಿ ನೌಷಾದ್ ಹಾಜಿ, ಕಾರ್ಯದರ್ಶಿಗಳಾಗಿ ಹಸೈನಾರ್ ಬನಾರಿ, ರಾಯಲ್ ಮೊಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಲವ್ಲಿ, ಪತ್ರಿಕಾ ಕಾರ್ಯದರ್ಶಿಗಳಾಗಿ ಶೇಖ್ ಝೈನುದ್ದೀನ್ ಮತ್ತು ಅಝೀಝ್ ಬಪ್ಪಳಿಗೆ ಆಯ್ಕೆಯಾದರು. ೨೫ ಮದ್ರಸಗಳ ಪ್ರತಿನಿಧಿಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ವೀಕ್ಷಕರಾಗಿ ತಾಜ್ ಮಹಮ್ಮದ್ ಸುಳ್ಯ ಮತ್ತು ಹಕೀಂ ಪರ್ತಿಪ್ಪಾಡಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಮುಫತ್ತಿಸ್ ಮುಹಮ್ಮದ್ ದಾರಿಮಿ, ಹನೀಫ್ ದಾರಿಮಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ೨೬ ಮದ್ರಸ ಹಾಗೂ ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here