ಪುತ್ತೂರು ದರ್ಬೆಯಲ್ಲಿ ಅಕ್ಕಪಕ್ಕದ ಎರಡು ಬಸ್ ನಿಲ್ದಾಣ ಏಕಕಾಲದಲ್ಲಿ ಉದ್ಘಾಟನೆ

0

ಪುತ್ತೂರು ನಗರಸಭೆ ವ್ಯಾಪ್ತಿಯಲಿ 25 ಬಸ್ ನಿಲ್ದಾಣದ ಗುರಿ – ಸಂಜೀವ ಮಠಂದೂರು

ಸ್ಮಾರ್ಟ್ ಸಿಟಿ ಮಾಡುವಲ್ಲಿ ನಗರಸಭೆ ಕಾರ್ಯಪ್ರವೃತವಾಗಿದೆ – ಕೆ.ಜೀವಂಧರ್ ಜೈನ್

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 25 ಬಸ್ ನಿಲ್ದಾಣ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಸಂಜೀವ ಶೆಟ್ಟಿ ಜವುಳಿ ಮಳಿಗೆ ಮತ್ತು ಪೊಪ್ಯುಲರ್ ಸ್ಟೀಟ್ಸ್ ಪ್ರಾಯೋಜಕತ್ವದಲ್ಲಿ ಅವರ ಜಾಹಿರಾತು ಅಳವಡಿಸಿದ ದರ್ಬೆ ವೃತ್ತದ ಸಮೀಪ ಅಕ್ಕಪಕ್ಕದಲ್ಲಿರುವ ಎರಡು ನೂತನ ಬಸ್‌ನಿಲ್ದಾಣವನ್ನು ನ.2ರಂದು ಅವರು ಉದ್ಘಾಟಿಸಿ ಮಾತನಾಡಿದರು.

ಮಾದರಿ ನಗರಸಭೆ ಆಗಬೇಕಾದರೆ ಅಲ್ಲಿ ಏನೇನು ಬೇಕೋ ಅದು ಇರಬೇಕು. ಸಾರ್ವಜನಿಕರಿಗೂ ಒಂದಷ್ಟು ಮೂಲಭೂತ ಸೌಕರ್ಯ ಸಿಗಬೇಕು. ಈ ನಿಟ್ಟಿನಲ್ಲಿ ಹತ್ತಾರು ಕಾರ್ಯಕ್ರಮದಲ್ಲಿ ಒಂದು ಸ್ಮಾರ್ಟ್ ಬಸ್‌ನಿಲ್ದಾಣವೂ ಆಗಿದೆ. ನಗರಸಭೆಯಲ್ಲಿ ಒಂದೇ ರೀತಿಯ ಬಸ್‌ನಿಲ್ದಾಣವಾಗಿದ್ದರೂ ಅಲ್ಲಿ ವೈವಿಧ್ಯತೆ ಇದೆ. ಪ್ರಯಾಣಿಕ ತಮ್ಮ ಸಮಯ ವ್ಯರ್ಥ ಮಾಡದಂತೆ ಪ್ರಯಾಣಿಕರು ಕೂತುಕೊಳ್ಳಲು ಆಸನ ಸಹಿತ ಮೊಬೈಲ್ ಚಾರ್ಜ್‌ಗೆ ವಿದ್ಯುತ್ ಸಂಪರ್ಕ, ಧ್ವನಿವರ್ಧಕ, ಕುಡಿಯುವ ನೀರಿನ ಸೌಲಭ್ಯ ನೀಡಲಾಗಿದೆ. ಇದರ ಜೊತೆಗೆ ವ್ಯಾಪಾರ ಮಳಿಗೆ ಉದ್ಯಮಗಳ ಪ್ರಚಾರ ಜಾಹಿರಾತು ಅಳವಡಿಸಲಾಗಿದೆ. ದರ್ಬೆಯ ಬಸ್‌ನಿಲ್ದಾಣದಲ್ಲಿ ಪುತ್ತೂರಿನ ಪ್ರಸಿದ್ಧಿ ಜವುಳಿ ಮಳಿಗೆ ಮತ್ತು ಪೊಪ್ಯುಲ್ ಸ್ಟೀಟ್ಸ್‌ನ ಜಾಹಿರಾತು ಅಳವಡಿಸಲಾಗಿದೆ. ಎಲ್ಲಾ ಕಡೆ ಎಲ್ಲಾ ವ್ಯಾಪಾರಿ ಉದ್ಯಮಿಗಳ ಸಹಕಾರದಿಂದ ಒಂದೇ ರೀತಿಯ ಮೋಡೆಲ್ ಬಸ್‌ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.

ಸ್ಮಾರ್ಟ್ ಸಿಟಿ ಮಾಡುವಲ್ಲಿ ನಗರಸಭೆ ಕಾರ್ಯಪ್ರವೃತವಾಗಿದೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ 11 ಬಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆಗೊಂಡಿದೆ. ಪುತ್ತೂರು ಭಾಗದ ಕೇಂದ್ರ ಸ್ಥಾನ ದಬೆಯಲ್ಲಿ ಬಹಳಷ್ಟು ವಾಹನ ದಟ್ಟನೆ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪರಿಹರಿಸುವ ಕುರಿತು ಬೇಡಿಕೆ ಬಂದಂತೆ ಇವತ್ತು ಬಸ್‌ತಂಗುದಾಣ ನಿರ್ಮಾಣ ಮಾಡಲಾಗಿದೆ.

ಬಸ್ ತಂಗುದಾಣಕ್ಕೆ ಆದ್ಯತೆ ಕೊಟ್ಟಂತೆ ರಸ್ತೆಗೂ ಹೆಚ್ಚು ಒತ್ತು ನೀಡಲಾಗಿದೆ. ದರ್ಬೆಯಿಂದ ಅಶ್ವಿನಿ ಹೊಟೇಲ್ ತನಕ ಮರು ಡಾಮರೀಕರಣ ಮುಂದಿನ ವಾರ ಕಾಮಗಾರಿ ಆರಂಭಗೊಳ್ಳಲಿದೆ. ರಸ್ತೆ ವಿಭಜಕಗಳಲ್ಲಿ ದಾರಿ ದೀಪ ಅಳವಡಿಸುವ ಕೆಲಸವೂ ಆಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಕೌಶಲ್ ಜಾಹಿರಾತು ಸಂಸ್ಥೆಯ ಮಾದವ ಮಾವೆ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಳೀಯ ಸದಸ್ಯೆ ಶಶಿಕಲಾ ಸಿ.ಎಸ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಬಸ್‌ನಿಲ್ದಾಣ ಪ್ರಾಯೋಜಕರಾದ ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಶಿವಾನಂದ ಅವರ ಪುತ್ರ ಕಾರ್ತಿಕ್ ಹಾಗು ಪೊಪ್ಯುಲರ್ ಸ್ವೀಟ್ಸ್ ಸಂಸ್ಥೆಯ ನಾಗೇಂದ್ರ ಕಾಮತ್ ಮತ್ತು ನರೇಂದ್ರ ಕಾಮತ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಯೂಸುಪ್, ಗೌರಿ ಬನ್ನೂರು, ದೀಕ್ಷಾ ಪೈ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್, ಜಯಶ್ರೀ ಎಸ್ ಶೆಟ್ಟಿ, ಜ್ಯೋತಿ ಆರ್ ನಾಯಕ್, ಸ್ವರ್ಣಲತಾ ಹೆಗ್ಡೆ, ಮೀನಾಕ್ಷಿ ಮಂಜುನಾಥ್, ಹರಿಪ್ರಸಾದ್ ಯಾದವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here