ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈಯವರಿಗೆ ತಾಲೂಕು ಬಂಟರ ಸಂಘದಿಂದ ಸನ್ಮಾನ

0

ಪುತ್ತೂರು: ಸಾಮಾಜಿಕ ಸೇವೆಗಾಗಿ ದ.ಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಿರುವ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರಿಗೆ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಸನ್ಮಾನ ಸಮಾರಂಭ ನ. 3 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಜಯರಾಮ ರೈ ಜನಮಾನಸದಲ್ಲಿ ಹೆಸರು ಪಡೆದಿದ್ದಾರೆ- ಶಶಿಕುಮಾರ್ ರೈಬಾಲ್ಯೊಟ್ಟು: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಜಯರಾಮ ರೈ ಮಿತ್ರಂಪಾಡಿರವರು ಸಮಾಜ ಸೇವೆಯ ಮೂಲಕ ಜನಮಾನಸದಲ್ಲಿ ಹೆಸರನ್ನು ಪಡೆದಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಬಂಟ ಸಮಾಜಕ್ಕೆ ತುಂಬಾ ಸಂತೋಷ ಆಗಿದೆ ಎಂದು ಹೇಳಿದರು.
ಪ್ರಶಸ್ತಿಗಳು ಒಲಿದು ಬರಲಿ- ಸವಣೂರು ಸೀತಾರಾಮ ರೈ: ಜಯರಾಮ ರೈ ಮಿತ್ರಂಪಾಡಿರವರನ್ನು ಸನ್ಮಾನಿಸಿದ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಜಯರಾಮ ರೈಯವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಇನ್ನೂ ವಿಸ್ತಾರವಾಗಲಿ, ಅವರಿಗೆ ಮುಂದಿನ ಜೀವನದಲ್ಲಿ ಮತ್ತಷ್ಟು ಪ್ರಶಸ್ತಿಗಳು ಒಲಿದು ಬರಲಿ ಎಂದು ಹಾರೈಸಿದರು.
ಬಂಟ ಸಮಾಜಕ್ಕೆ ಹೆಮ್ಮೆಯ ವಿಚಾರ- ಕಾವು ಹೇಮನಾಥ ಶೆಟ್ಟಿ : ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಮಿತ್ರಂಪಾಡಿ ಜಯರಾಮ ರೈರವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಬಂಟ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಶುಭಹಾರೈಸಿದರು.
ಸನ್ಮಾನ ಖುಷಿ ನೀಡಿದೆ- ಮಿತ್ರಂಪಾಡಿ ಜಯರಾಮ ರೈ: ಸನ್ಮಾನ ಸ್ವೀಕರಿಸಿದ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ ಬಂಟರ ಸಂಘ ನೀಡಿರುವ ಸನ್ಮಾನ ಖುಷಿ ನೀಡಿದೆ. ಸಮಾಜ ಸೇವೆಯನ್ನು ಗುರುತಿಸಿ, ಸರಕಾರ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಯರಾಮ ರೈ ಮಿತ್ರಂಪಾಡಿರವರ ಹುಟ್ಟು ಹಬ್ಬದ ಸಲುವಾಗಿ ಬಂಟರ ಸಂಘದ ವತಿಯಿಂದ ಕೇಕ್ ಕತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ| ಪಿ. ಬಿ. ರೈ ಪ್ರತಿಷ್ಠಾನ ಕೆಯ್ಯೂರು ನೂಜಿ ತರವಾಡು ಮನೆ ಇದರ ವತಿಯಿಂದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ ರವರುಗಳು ಮಿತ್ರಂಪಾಡಿ ಜಯರಾಮ ರೈ ರವರನ್ನು ಸನ್ಮಾನಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ, ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳು, ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ತಾಲೂಕು ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು.

LEAVE A REPLY

Please enter your comment!
Please enter your name here