ಆಲಂಕಾರಿನ ಕೊಂಡಾಡಿಕೊಪ್ಪದಲ್ಲಿ ಮೊಸಳೆ ಪತ್ತೆ

0

ಆಲಂಕಾರು: ಆಲಂಕಾರು ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ರಸ್ತೆಯಲ್ಲಿ ನ.4ರಂದು ಮೊಸಳೆಯೊಂದು  ಪತ್ತೆಯಾಗಿದೆ. ಶಾಲೆಯ ಹತ್ತಿರದಲ್ಲಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಸ್ಥಳೀಯರಾದ ಶೀನಪ್ಪ ಕುಂಬಾರ ಹಾಗು ಕಿರಣ್ ಕೊಂಡಾಡಿಯವರು ವೀಕ್ಷಣೆ ಮಾಡಿದ್ದು ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಾಲಚಂದ್ರ ಗೌಡ ಹಾಗು ರವಿಕುಮಾರ್ ರವರು ತಕ್ಷಣ ಸ್ಥಳಕ್ಕೆ ಅಗಮಿಸಿ, ಸ್ಥಳಿಯರೊಂದಿಗೆ, ಶೌರ್ಯ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಕುಮಾರಧಾರ ನದಿಗೆ ಬಿಡಲಾಯಿತು‌.

LEAVE A REPLY

Please enter your comment!
Please enter your name here