ನ.11ಕ್ಕೆ ಬೆಂಗಳೂರಿನಲ್ಲಿ ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ ಪುತ್ತೂರಿನಲ್ಲಿ ಮೃತ್ತಿಕೆ ಸಂಗ್ರಹ ಅಭಿಯಾನದ ರಥಕ್ಕೆ ತಾಲೂಕು ಆಡಳಿತದಿಂದ ಸ್ವಾಗತ

0

ರಾಷ್ಟ್ರಕ್ಕಾಗಿ ಬದುಕಿದವರ, ನಾಡಿಗಾಗಿ ಕೊಡುಗೆ ಕೊಟ್ಟವರನ್ನು ಸ್ಮರಿಸಬೇಕು – ಸಂಜೀವ ಮಠಂದೂರು
ಕೆಂಪೇಗೌಡರ ದೂರ ದೃಷ್ಟಿಯ ಶಿಸ್ತನ್ನು ಈಗಲೂ ಕಾಣಬಹುದು – ಗಿರೀಶ್‌ನಂದನ್
ದೇಶ, ವಿಶ್ವಕ್ಕೆ ಮಹತ್ವ ಸಾರುವ ಕಾರ್ಯ – ಕೇಶವಪ್ರಸಾದ್ ಮುಳಿಯ
ಬೆಂಗಳೂರಿನ ಪರಿವರ್ತನೆಯ ಕೀರ್ತಿ ಕೆಂಪೇಗೌಡರದ್ದು – ವಿಶ್ವನಾಥ ಗೌಡ ಕೆ

ಪುತ್ತೂರು: ಸಿಲಿಕಾನ್ ಸಿಟಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ನಿಟ್ಟಿನಲ್ಲಿ ರಾಜ್ಯವ್ಯಾಪಿ ಮೃತ್ತಿಕೆ ಸಂಗ್ರಹ ಅಭಿಯಾನ ನ.4ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತಿಕೆ ಅರ್ಪಣೆ ಮಾಡುವ ಮೂಲಕ ತಾಲೂಕು ಆಡಳಿತದಿಂದ ಗೌರವ ಸ್ವಾಗತ ನೀಡಲಾಯಿತು.

ಬೆಳಿಗ್ಗೆ ಪುತ್ತೂರು ಗಾಂಧಿ ಕಟ್ಟೆಯಿಂದ ಮೆರವಣಿಗೆ ಮೂಲಕ ಮೃತ್ತಿಕೆ ಅಭಿಯಾನದ ರಥವನ್ನು ದೇವಸ್ಥಾನದ ವಠಾರಕ್ಕೆ ಬರ ಮಾಡಿಕೊಳ್ಳಲಾಯಿತು. ದೇವಸ್ಥಾನದ ರಾಜಗೋಪುರದ ಬಳಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮೃತ್ತಿಕೆಯನ್ನು ರಥಕ್ಕೆ ಸಮರ್ಪಣೆ ಮಾಡಲಾಯಿತು. ಬಳಿಕ ದೇವಳದ ನಟರಾಜ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ರಾಷ್ಟ್ರಕ್ಕಾಗಿ ಬದುಕಿದವರ, ನಾಡಿಗಾಗಿ ಕೊಡುಗೆ ಕೊಟ್ಟವರನ್ನು ಸ್ಮರಿಸಬೇಕು :
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಗತ್ತಿನ 30 ನಗರದಲ್ಲಿ ಬೆಂಗಳೂರು ಕೂಡಾ ಒಂದು. ಅದಕ್ಕೆ ಮೂಲ ಕಾರಣ ನಾಡಪ್ರಭು ಕೆಂಪೇಗೌಡ. 500 ವರ್ಷಗಳ ಹಿಂದೆ ದೂರ ದೃಷ್ಟಿ ಇಟ್ಟು ಮಾಡಿದ ಕಾರ್ಯ ಇವತ್ತು ಜಗತ್ತಿಗೆ ಅತಿ ದೊಡ್ಡ ಕೊಡುಗೆಯಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರನ್ನು ಇವತ್ತು ಸಮಾಜ ನೆನಪಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರ 108 ಅಡಿಯ ಪ್ರತಿಮೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿದ್ದು ಅಲ್ಲಿನ ಸುಮಾರು 25 ಎಕ್ರೆ ಜಮೀನಿನಲ್ಲಿ ಥೀಮ್ ಪಾರ್ಕ್ ಮಾಡಲಾಗಿದೆ. ನ.11ರಂದು ದೇಶದ ಪ್ರಧಾನಿ ನರೇಂದ್ರ ಮೋದಿವಯರು ಅದನ್ನು ಉದ್ಘಾಟಿಸಲಿದ್ದಾರೆ. ಇದೊಂದು ಭಾವನಾತ್ಮಕ ಮತ್ತು ಪಾವಿತ್ರ್ಯತೆಯ ಕಾರ್ಯಕ್ರಮ ಆಗಬೇಕೆಂದು ರಾಷ್ಟ್ರಕ್ಕಾಗಿ ಬದುಕಿದವರನ್ನು ಮತ್ತು ನಾಡಿಗಾಗಿ ಕೊಡುಗೆ ಕೊಟ್ಟವರನ್ನು ನಮ್ಮ ಸರಕಾರ ಸ್ಮರಿಸುತ್ತಿದೆ. ಗುಜರಾತ್‌ನಲ್ಲಿ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ಅನಾವರಣಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರಿನಲ್ಲಿ ಸ್ಥಾಪನೆ ಆಗಲಿದೆ. ಅದೇ ರೀತಿ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ವೀರ ಪುರಷರಾದ ಕೋಟಿ ಚೆನ್ನಯರ ನಾಮಕರಣ ಮಾಡಲಾಗಿದ್ದು, ಮುಂದೆ ಪುತ್ತೂರು ನಗರ ಪ್ರದೇಶದಲ್ಲಿ ಕೆಂಪೇಗೌಡ ಪಾರ್ಕ್ ಮಾಡುವ ಉದ್ದೇಶ ನಗರಸಭೆ ಮುಂದಿದೆ ಎಂದರು.

ಕೆಂಪೇಗೌಡರ ದೂರ ದೃಷ್ಟಿಯ ಶಿಸ್ತನ್ನು ಈಗಲೂ ಕಾಣಬಹುದು:
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಮಾತನಾಡಿ ದೂರದೃಷ್ಟಿಯಿಟ್ಟು ನಗರ ನಿರ್ಮಾಣ ಮಾಡಿದ ಕೆಂಪೇಗೌಡರ ಶಿಸ್ತ ಹೇಗಿತ್ತು ಎಂಬುದನ್ನು ಈಗಲೂ ನಾವು ಕಾಣಬಹುದು. ಅಂತಹ ವ್ಯಕ್ತಿಗಳ ಪ್ರತಿಮೆ ನಿರ್ಮಾಣ ಮಾಡುವುದು ಉತ್ತಮ ಕಾರ್ಯ ಈ ನಿಟ್ಟಿನಲ್ಲಿ ಬೇರೆ ಬೇರೆ ಊರುಗಳಿಂದ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಯುತ್ತಿದೆ ಎಂದರು.

ದೇಶ, ವಿಶ್ವಕ್ಕೆ ಮಹತ್ವ ಸಾರುವ ಕಾರ್ಯ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ನಾಡಿನ ಒಳಿತಿಗಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಪುಣ್ಯದ ಕೆಲಸ. ಅವರ ಸ್ಮರಣೆ ಪ್ರತಿಮೆ ಮೂಲಕ ಸಾಕಾರಗೊಳ್ಳುತ್ತಿದೆ. ವಿಮಾಣ ನಿಲ್ದಾಣದಲ್ಲಿ ಇಂತಹ ಪ್ರತಿಮೆ, ಥೀಮ್ ಪಾರ್ಕ್ ಬಹಳ ಅಗತ್ಯವಾಗಿ ಬೇಕಾಗಿತ್ತು. ಅದನ್ನು ಈಡೇರುತ್ತಿದೆ ಎಂದು ಹೇಳಿದರು.

ಬೆಂಗಳೂರಿನ ಪರಿವರ್ತನೆಯ ಕೀರ್ತಿ ಕೆಂಪೇಗೌಡರದ್ದು:
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಮಾತನಾಡಿ 15ನೇ ಶತಮಾನದ ಸುವರ್ಣಯುಗದಲ್ಲಿ ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಆಡಳಿತವನ್ನು ನೋಡಿದ ಕೆಂಪೇಗೌಡರು ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲೂ ಅದೇ ಕಲ್ಪಣೆಯನ್ನು ತಂದರು. ಅವರ ದೂರದೃಷ್ಟಿಯಿಂದ ಇವತ್ತು ಬೆಂಗಳೂರು ರಾಷ್ಟ್ರಪ್ರಸಿದ್ದಿಯಾಗಿದೆ. ಅವರೊಬ್ಬ ದ್ರುವತಾರೆ, ದ್ರುವ ನಕ್ಷತ್ರ. ಬೆಂಗಳೂರಿನ ಪರಿವರ್ತನೆಯ ಕೀರ್ತಿ ಕೆಂಪೇಗೌಡರದ್ದು ಎಂದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ತಹಸೀಲ್ದಾರ್ ನಿಸರ್ಗಪ್ರಿಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಸುರೇಶ್ ಆಳ್ವ, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಲಕ ಯು.ಪಿ.ರಾಮಕೃಷ್ಣ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್ ಶೇಖರ್ ನಾರಾವಿ, ರವೀಂದ್ರ ರೈ ಬಳ್ಳಮಜಲು, ರಾಮದಾಸ್ ಗೌಡ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ, ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ನಗರಸಭೆ ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಗೌರಿ, ಲೀಲಾವತಿ, ರಮಣಿ ಗಾಣಿಗ, ಯುವರಾಜ್ ಪೆರಿಯತ್ತೋಡಿ, ಸುರೇಶ್ ಗೌಡ, ಲಿಂಗಪ್ಪ ಗೌಡ, ರಾಧಾಕೃಷ್ಣ ನಂದಿಲ, ಕಿಶೋರ್ ಬೇರಿಕೆ, ಮಹಿಳಾ ಗೌಡ ಸೇವಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪ್ರಧಾನ ಕಾರ್ಯದಶಿ ವಾರಿಜಾ, ರವಿ ಮುಂಗ್ಲಿಮನೆ, ಕುರಿಯ ಶ್ರೀಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ವಿಶ್ವಹಿಂದು ಪರಿಷತ್ ರಾಜ್ಯ ಉಪಾಧ್ಯಕ್ಷ ಯು.ಪೂವಪ್ಪ, ಜಿನ್ನಪ್ಪ ಗೌಡ ಮಳವೇಲು, ಗಣೇಶ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಪ್ರಕಾಶ್ ಪೈ ಸಹಿತ ಶ್ರೀ ಮಹಾಲಿಂಗೇಶ್ವರ ಐಟಿಐ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here