ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ

0

ಹುಡುಗಿಯರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು ಚಾಂಪಿಯನ್
ಹುಡುಗರ ವಿಭಾಗದಲ್ಲಿ ರನ್ನರ್ಸ್, ಈರ್ವರಿಗೆ ವೈಯಕ್ತಿಕ ಚಾಂಪಿಯನ್‌ಶಿಪ್

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಸುಳ್ಯಪದವು ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜು ಇದರ ಸಹಯೋಗದಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಹುಡುಗ-ಹುಡುಗಿಯರ ಅಥ್ಲೆಟಿಕ್ ಸ್ಪರ್ಧಾಕೂಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹುಡುಗಿಯರ ವಿಭಾಗವು ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಹುಡುಗಿಯರ ವಿಭಾಗ:
ಹುಡುಗಿಯರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಡಿಂಪಲ್ ಎಸ್.ಬಂಗೇರರವರು 100ಮೀ ಓಟ, 200ಮೀ ಓಟ, ಲಾಂಗ್‌ಜಂಪ್, 4*100ಮೀ ರಿಲೇಯಲ್ಲಿ 3 ಚಿನ್ನ ಹಾಗೂ 1 ಕಂಚಿನ ಪದಕ, ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯರವರು ತ್ರಿಪಲ್ ಜಂಪ್, 4*100 ರಿಲೇಯಲ್ಲಿ 2 ಚಿನ್ನದ ಪದಕ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾರವರು ಹ್ಯಾಮರ್ ತ್ರೋ, ಶಾಟ್‌ಫುಟ್‌ನಲ್ಲಿ 1 ಚಿನ್ನ ಹಾಗೂ 1 ಕಂಚಿನ ಪದಕ, ದ್ವಿತೀಯ ವಿಜ್ಞಾನ ವಿಭಾಗದ ಚೈತ್ರಿಕಾ ಎಂ.ರವರು 100ಮೀ ಓಟ, 4*100ಮೀ ರಿಲೇಯಲ್ಲಿ 2 ಚಿನ್ನದ ಪದಕ, ಪ್ರಥಮ ವಿಜ್ಞಾನ ವಿಭಾಗದ ಅನಘ ಕೆ.ಎನ್‌ರವರು 100ಮೀ, 200ಮೀ, 400ಮೀ, 4*100ಮೀ ರಿಲೇಯಲ್ಲಿ 1 ಚಿನ್ನ ಹಾಗೂ 3 ಬೆಳ್ಳಿ ಪದಕ, ಪ್ರಥಮ ವಿಜ್ಞಾನ ವಿಭಾಗದ ಕೆ.ಎಸ್  ಶ್ರೀವರ್ಧನರವರು 3ಕೀ ನಡಿಗೆ, 4*100ಮೀ ರಿಲೇಯಲ್ಲಿ 2 ಚಿನ್ನ, ಪ್ರಥಮ ವಾಣಿಜ್ಯ ವಿಭಾಗದ ಪ್ರಥ್ವಿರವರು ಹ್ಯಾಮರ್ ತ್ರೋ ಹಾಗೂ ಡಿಸ್ಕಸ್ ತ್ರೋನಲ್ಲಿ 2 ಬೆಳ್ಳಿ ಪದಕ, ಪ್ರಥಮ ವಿಜ್ಞಾನ ವಿಭಾಗದ ದೃಶ್ಯರವರು ಡಿಸ್ಕಸ್ ತ್ರೋ ಹಾಗೂ ಜಾವೆಲಿನ್ ತ್ರೋನಲ್ಲಿ 1 ಬೆಳ್ಳಿ ಹಾಗೂ 1 ಕಂಚು, ದ್ವಿತೀಯ ವಿಜ್ಞಾನ ವಿಭಾಗದ ಚೈತ್ರ ಶೆಟ್ಟಿರವರು 1500ಮೀ, 3000ಮೀ, 4*400ಮೀ ರಿಲೇಯಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ, ಪ್ರಥಮ ಕಲಾ ವಿಭಾಗದ ಕೃತಿಕಾರವರು 3ಕೀ. ನಡಿಗೆಯಲ್ಲಿ 1 ಬೆಳ್ಳಿ, ಪ್ರಥಮ ವಾಣಿಜ್ಯ ವಿಭಾಗದ ಅಮೃತಾ ಕೆರವರು 4*400ಮೀ ರಿಲೇಯಲ್ಲಿ 1 ಚಿನ್ನ, ಪ್ರಥಮ ವಿಜ್ಞಾನ ವಿಭಾಗದ ನೀತಿ ರೈಯವರು ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ.
ಹುಡುಗರ ವಿಭಾಗ:
ಹುಡುಗರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತನ್ ಸಿ.ರವರು 100ಮೀ, 200ಮೀ, 400ಮೀ, 4*100ಮೀ ರಿಲೇಯಲ್ಲಿ 3 ಬೆಳ್ಳಿ ಹಾಗೂ 1 ಕಂಚಿನ ಪದಕ, ಪ್ರಥಮ ವಿಜ್ಞಾನ ವಿಭಾಗದ ಸುಹಾಸ್ ಎ.ರವರು 800ಮೀ, 4*100ಮೀ ರಿಲೇಯಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕ, ದ್ವಿತೀಯ ಕಲಾ ವಿಭಾಗದ ರಂಜಿತ್ ಕುಮಾರ್ ಎಂ.ರವರು ಹ್ಯಾಮರ್ ತ್ರೋನಲ್ಲಿ ಚಿನ್ನ, ಪ್ರಥಮ ವಾಣಿಜ್ಯ ವಿಭಾಗದ ಕೆ.ಆರ್ ಯಶ್ವಿನ್‌ರವರು 100ಮೀ, 4*100ಮೀ ರಿಲೇಯಲ್ಲಿ 2 ಬೆಳ್ಳಿ, ದ್ವಿತೀಯ ವಾಣಿಜ್ಯ ವಿಭಾಗದ ಹಿತಿನ್ ಕೆ.ಎಸ್‌ರವರು ಶಾಟ್‌ಪುಟ್‌ನಲ್ಲಿ 1 ಕಂಚು, ಪ್ರಥಮ ಕಲಾ ವಿಭಾಗದ ಎಂ.ಮುಝಮಿಲ್‌ರವರು ಲಾಂಗ್‌ಜಂಪ್‌ನಲ್ಲಿ ಕಂಚು, ದ್ವಿತೀಯ ವಿಜ್ಞಾನ ವಿಭಾಗದ ಚತುರ್ ಎಸ್.ನಾಕ್‌ರವರು 800ಮೀ.ನಲ್ಲಿ ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ಪುಷ್ಪರಾಜ್‌ರವರು 5ಕೀ ನಡಿಗೆ, 4*400ಮೀ ರಿಲೇಯಲ್ಲಿ 1 ಬೆಳ್ಳಿ, 1 ಕಂಚು, ಪ್ರಥಮ ವಾಣಿಜ್ಯ ವಿಭಾಗದ ರ‍್ಶ್ ಶೆಟ್ಟಿರವರು ತ್ರಿಪಲ್ ಜಂಪ್, 4*100ಮೀ ರಿಲೇಯಲ್ಲಿ 1 ಬೆಳ್ಳಿ ಹಾಗೂ 1 ಕಂಚು, ದ್ವಿತೀಯ ವಾಣಿಜ್ಯ ವಿಭಾಗದ ಶ್ರೀ ಹರಿಕೃಷ್ಣ ಪಿ.ರವರು ಜಾವೆಲಿನ್ ತ್ರೋನಲ್ಲಿ ಕಂಚು, ಪ್ರಥಮ ವಿಜ್ಞಾನ ವಿಭಾಗದ ಶ್ರವಣ್ ಕೆ.ಪಿರವರು 5000ಮೀ, 3000ಮೀ, 1500ಮೀ, 4*400ಮೀ ರಿಲೇಯಲ್ಲಿ 4 ಬೆಳ್ಳಿ, ಪ್ರಥಮ ವಾಣಿಜ್ಯ ವಿಭಾಗದ ಲತಿನ್ ಭಂಡಾರಿರವರು ಶಾಟ್‌ಫುಟ್, ಡಿಸ್ಕಸ್ ತ್ರೋನಲ್ಲಿ 1 ಚಿನ್ನ ಹಾಗೂ 1 ಕಂಚು, ದ್ವಿತೀಯ ವಾಣಿಜ್ಯ ವಿಭಾಗದ ವ್ಯಾರನ್ ಲೂವಿಸ್‌ರವರು ಹ್ಯಾಮರ್ ತ್ರೋನಲ್ಲಿ ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ಆದಿತ್ಯ ಡಿ.ಡಿರವರು 4*400ಮೀ ರಿಲೇಯಲ್ಲಿ ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ‍್ದೇಶಕರುಗಳಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ತರಬೇತಿಯನ್ನು ನೀಡಿರುತ್ತಾರೆ. ಕ್ರೀಡಾಪಟುಗಳ ಸಾಧನೆಗೆ ಕಾಲೇಜು ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಕ್ಯಾಂಪಸ್ ರ‍್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಅಭಿನಂದಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

25 ಮಂದಿ ಜಿಲ್ಲಾ ಮಟ್ಟಕ್ಕೆ…
ಹುಡುಗರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಮಹೇಶ್ ಬಿ.ರವರು 5000ಮೀ, 3000ಮೀ, 1500ಮೀ, 4*400ಮೀ ರಿಲೇಯಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಹಾಗೂ ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ಜಿ.ರವರು 5000ಮೀ ಓಟ, 3000ಮೀ ಓಟ, 1500ಮೀ ಓಟ, 4*400ಮೀ ರಿಲೇಯಲ್ಲಿ 4 ಚಿನ್ನದ ಪದಕಗಳೊಂದಿಗೆ ಸ್ಪರ್ಧಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗಳಿಸಿಕೊಂಡರು. ಅಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಾಲೇಜಿನ ಹುಡುಗರ ಹಾಗೂ ಹುಡುಗಿಯರ ತಂಡದ 32 ಕ್ರೀಡಾಪಟು ವಿದ್ರ‍್ಥಿಗಳಲ್ಲಿ 25 ಮಂದಿ ಕ್ರೀಡಾಪಟುಗಳು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹುಡುಗರ ವಿಭಾಗ `ಟೈ’
ಹುಡುಗರ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ತಂಡವು ತಲಾ 69 ಅಂಕಗಳನ್ನು ಕಲೆ ಹಾಕಿ `ಟೈ’ ಆಗಿತ್ತು. ಆದರೆ ಇತ್ತಂಡ ಕಾಲೇಜುಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ್ದರಿಂದ `ಚಿನ್ನ’ದ ಪದಕದ ಆಧಾರದ ಮೇಲೆ ಫಿಲೋಮಿನಾ ಕಾಲೇಜು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

LEAVE A REPLY

Please enter your comment!
Please enter your name here