ಕುರಿಯ: ನ.20ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಪರ್ಪುಂಜದಿಂದ ಬೂಡಿಯರ್ ವರೆಗಿನ ಮಾರ್ಗದ ಬದಿಯಲ್ಲಿ ಬೆಳೆದು ನಿಂತ ಹುಲ್ಲು ಹಾಗೂ ಕಳೆಗಳ ತೆಗೆಯಲಾಯಿತು. ಕಾರ್ಯಕ್ರಮಕ್ಕೆ ಸಂಘದ ಗೌರವಾಧ್ಯಕ್ಷರಾದ ಬೂಡಿಯರ್ ರಾಧಾಕೃಷ್ಣ ರೈಯವರು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು, ಕುರಿಯ ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು. ಡಿಂಬ್ರಿಗುತ್ತು ನೊಣಲು ಜೈರಾಜ್ ಭಂಡಾರಿಯವರ ಮನೆಯಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮದ್ಯಾಹ್ನ ಸಂಘದ ಅಧ್ಯಕ್ಷರಾದ ಬೂಡಿಯರ್ ಗಣೇಶ್ ರೈ ಯವರ ಮನೆಯಲ್ಲಿ ಊಟದ ವ್ಯವಸ್ಥೆ ಮತ್ತು ಕುಕ್ಕುಂಜೋಡ್ ಮಹಾಬಲ ರೈ ಯವರು ತಂಪಾದ ಪಾನೀಯ ನೀಡಿದರು. ಕಾರ್ಯಕ್ರಮದಲ್ಲಿ ದಾರಿಯಲ್ಲಿದ್ದ ಕಸ ಕಡ್ಡಿ ನಿವಾರಣೆ ಮಾಡಿದ ಕಾರ್ಯ ಸಾರ್ವಜನಿಕರ ಪ್ರಸಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಗಣೇಶ್ ರೈ ಬೂಡಿಯಾರ್, ಕಾರ್ಯಧ್ಯಕ್ಷ ಶಿವರಾಮ ಆಳ್ವ ಬಳ್ಳಮಾಜಲು ಗುತ್ತು, ಗೌರವ ಸಲಹೆಗಾರರಾದ ಸುರೇಂದ್ರ ರೈ ಬಳ್ಳಮಾಜಲು, ಸತೀಶ್ ರೈ ಡಿಂಬ್ರಿಗುತ್ತು, ಸಂಚಾಲಕ ವಿಜಯಹರಿ ರೈ ಬಳ್ಳಮಜಲು, ಉಪಾಧ್ಯಕ್ಷ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿ ಜಯರಾಮ್ ರೈ ಅಡ್ಡೆತ್ತಿಮಾರು, ಜತೆ ಕಾರ್ಯದರ್ಶಿ ಯಮುನಾ ನಾರಾಯಣ ಮತ್ತು ಕಾರ್ಯಕಾರಿ ಸದಸ್ಯರಾದ ಜಯಪ್ರಕಾಶ್ ಬಳ್ಳಮಾಜಲ್, ಜಗನ್ನಾಥ ಅಡ್ಡೆತ್ತಿಮಾರ್, ಸನತ್ ರೈ ಎಳ್ನಾಡ್ ಗುತ್ತು, ಚಂದ್ರಹಾಸ ರೈ ಡಿಂಬ್ರಿ, ಆನಂದ ರೈ ಡಿಂಬ್ರಿ, ಚಿದಾನಂದ ಬೂಡಿಯರ್ ಶ್ರೀಕೃಷ್ಣ ಬೋಳಂತಿಮರ್,ಸನತ್ ಕಿನ್ನಿಮಜಲ್, ಪುರಂದರ ಶಿಬರಾಡಿ, ವಿನೋದ್ ಶಿಬರಾಡಿ, ಸುರೇಶ್ ಕಿನ್ನಿಮಜಲ್, ನಿತಿನ್ ಕಿನ್ನಿಮಜಲ್, ಶೇಖರ್ ಕಿನ್ನಿಮಜಲ್,ರಂಜಿತ್ ಬೂಡಿಯರ್,ಪ್ರದೀಪ್ ಗಡಾಜೆ,ಮನೋಜ್ ಗಡಾಜೆ,ಸುಂದರ ಬೊಳಂತಿಮಾರ್, ಸೀತಾರಾಮ ಶೆಟ್ಟಿ ಪೋನೋನಿ, ವಿನಯ ಕುಮಾರ್ ರೈ ಬಳ್ಳಮಾಜಲು, ಜಗದೀಶ್ ಅಡ್ಡೆತ್ತಿಮಾರ್,ನಾರಾಯಣ ರೈ ಬಳ್ಳಮಾಜಲು, ನಾರಾಯಣ ಕುರಿಯ, ಸಂಕಪ್ಪ ಓಟೆತ್ತಿಮಾರ್ ,ನಾಗೇಶ್ ರಾವ್ ಕೊಡ್ಲಾರ್, ದಿವಾಕರ್ ಶೆಟ್ಟಿ ಬಳ್ಳಮಜಲು, ಶಿವರಾಮ ಶಿಬರಾಡಿ,ಭಾಸ್ಕರ ಬೈರ, ರಾಮಣ್ಣ ಪಡ್ಪು, ಹೇಮಂತ್ ಬೂಡಿಯರ್, ಸೂಪಿ ಕುರಿಯ, ಅಭಿಲಾಷ್ ಡಿಂಬ್ರಿ, ಚಿದಾನಂದ ಹೊಸಮಾರು, ನವೀನ್ ಪಡ್ಪು ಉಪಸ್ಥಿತರಿದ್ದರು.