ಅಧ್ಯಕ್ಷರಾಗಿ ರಕ್ಷಿತ್ ರೈ, ಉಪಾಧ್ಯಕ್ಷರಾಗಿ ಸಿಂಚನ,ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಆಯ್ಕೆ
ನಿಡ್ಪಳ್ಳಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇದರ 2022-23 ನೇ ಸಾಲಿನ ಕಾಲೇಜಿನ ವಿಧ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಅಂತಿಮ ಬಿಕಾಂ ನ ರಕ್ಷಿತ್ ರೈ ಎ, ಉಪಾಧ್ಯಕ್ಷರಾಗಿ ಅಂತಿಮ ಬಿ.ಬಿ.ಎ ಯ ಸಿಂಚನ ಹಾಗೂ ಕಾರ್ಯದರ್ಶಿಯಾಗಿ ಅಂತಿಮ ಬಿ.ಎ ಯ ಹರೀಶ್ಚಂದ್ರ ಇವರು ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಅಂತಿಮ ಬಿ.ಕಾಂ ನ ಸಾರ್ಥಕ್ ಟಿ, ಜತೆ ಕಾರ್ಯದರ್ಶಿಯಾಗಿ ಅಂತಿಮ ಬಿಎಸ್ಸಿ ಯ ದಿವ್ಯ ಎಂ, ಕ್ರೀಡಾ ಕಾರ್ಯದರ್ಶಿಯಾಗಿ ಅಂತಿಮ ಬಿ.ಎ ಯ ದೀಕ್ಷಿತ್ ರೈ , ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎಸ್.ಡಬ್ಲ್ಯೂ ನ ದಿಶಾ ರೈ ಇವರು ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಾರಣ್ಣ, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಡಾ.ಮುರಳಿ ಕೆ, ಕ್ರೀಡಾ ಸಂಘದ ಸಂಚಾಲಕರಾದ ಡಾ. ಪೊಡಿಯ, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಕಾಂತೇಶ್ ಹಾಗೂ ಕಾಲೇಜಿನ ಎಲ್ಲಾ ಭೋಧಕರು ಮತ್ತು ಭೋಧಕೇತರ ವರ್ಗದವರು ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.