ಪುತ್ತೂರು: ವಿದ್ಯಾ ಭಾರತಿ ಅಖಿಲ್ ಭಾರತೀಯ ಶಿಕ್ಷಣ ಪ್ರತಿಷ್ಠಾನ ಮತ್ತು ಗೀತಾ ಆವಾಸಿಯ ವಿದ್ಯಾಲಯ ಕುರುಕ್ಷೇತ್ರ ಹರಿಯಾಣ ಇಲ್ಲಿ ನವೆಂಬರ್ 19ರಿಂದ 23ರ ವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಪಡೆದುಕೊಂಡಿದ್ದು 14ರ ವಯೋಮಾನದ ಬಾಲಕಿಯ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಕೃತಿ ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ ದಂಪತಿ ಪುತ್ರಿ) 4 X 100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ, 600ಮೀ ನಲ್ಲಿ ದ್ವಿತೀಯ, 400 ಮೀಟರ್ ನಲ್ಲಿ ತೃತೀಯ ಸ್ಥಾನ, 8ನೇ ತರಗತಿ ಯ ಡಿಂಪಲ್ ಶೆಟ್ಟಿ, (ಮೇರ್ಲ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) 4 X 100 ಮೀಟರ್ ರಿಲೇ ಪ್ರಥಮ, ಶ್ರೀ ವರ್ಣ ಪಿ ಡಿ (ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ ಪಿ ದಂಪತಿ ಪುತ್ರಿ)4 X100 ರಿಲೇ ಸ್ಪರ್ಧೆಯಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತೀಯ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ 10ನೇ ತರಗತಿ (ಬಪ್ಪಲಿಗೆ ಕಮಲಾಕ್ಷ ಮತ್ತು ಜಯಲತಾ ದಂಪತಿ ಪುತ್ರಿ) 100 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ, 4 X100 ಮೀಟರ್ ರಿಲೇ ದ್ವಿತೀಯ, 4 X4 00ಮೀ ರಿಲೇ ತೃತೀಯ,
ಬಿ ಲಿಖಿತ ರೈ 10ನೇ ತರಗತಿ ( ಚನಿಲ ಬಿ ಜಗನ್ನಾಥ ರೈ ಮತ್ತು ಗೀತಾ ಜೆ ರೈ ದಂಪತಿ ಪುತ್ರಿ) 4 X100ಮೀ ರಿಲೆಯಲ್ಲಿ ದ್ವಿತೀಯ, 4 X400ಮೀ ರಿಲೇ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ಕೃಪಾಲ್.ಪಿ.ಕೆ, ಅನ್ನೀಕ ಎಂ, ಚರಣ್ ಕುಮಾರ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.