ಪುತ್ತೂರು : ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಮಿತಿಯ ಸಹಕಾರದೊಂದಿಗೆ ಪುತ್ತೂರು ತಾಲೂಕಿನ ಶಿಕ್ಷಕರಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷಾ (NMMS)ಮಾಹಿತಿ ಕಾರ್ಯಾಗಾರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ಕೊಂಬೆಟ್ಟಿನಲ್ಲಿ ನಡೆಯಿತು.
ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಕಾರ್ಯಾಗಾರ ಉದ್ಘಾಟಿಸಿ ತರಬೇತಿಯಲ್ಲಿ ಸಿಗುವ ಮಾಹಿತಿ ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಈ ಸೌಲಭ್ಯ ವನ್ನು ಪ್ರತಿಯೊಂದು ಶಾಲೆಯ ಮಕ್ಕಳು ಪಡೆಯುವಂತಾಗಲಿ ಎಂದರು.
ಪುತ್ತೂರು ತಾಲೂಕು ಎಸ್ಸೆಸ್ಸೆಲ್ಸಿ ನೋಡೆಲ್ ಅಧಿಕಾರಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ,ಕ್ಷೇತ್ರ ಸಮನ್ವಯಾಧಿಕಾರಿಯಾದ ನವೀನ್ ವೇಗಸ್ ,ಉಪಪ್ರಾಂಶುಪಾಲ ವಸಂತ ಮೂಲ್ಯ ,ಎನ್ .ಎಮ್.ಎಮ್.ಎಸ್ ನೋಡೆಲ್ ಅಧಿಕಾರಿಅಮೃತಕಲಾ ,ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ ನಿಲಯದ ಅಧ್ಯಕ್ಷ ರಮೇಶ್ ಪ್ರಭು ಸಂಪ್ಯ ,ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಭಟ್ ,ಸಂದೀಪ್ ,ರವೀಂದ್ರ ಶಾಸ್ತ್ರಿ ವೇದಿಕಯಲ್ಲಿ ಉಪಸ್ಥಿತರಿದ್ದರು .
ಕಾರ್ಯಾಗಾರ ದಲ್ಲಿ ಪುತ್ತೂರು ತಾಲೂಕಿನ ಸರಕಾರಿ ,ಅನುದಾನಿತ ಅನುದಾನರಹಿತ ಪ್ರೌಢಶಾಲಾ ಶಿಕ್ಷಕರು ಮತ್ತು ಸ ಉ ಹಿ ಪ್ರಾ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು ..ಶಿಕ್ಷಕಿ ಪ್ರತಿಮಾ ಪ್ರಾರ್ಥಿಸಿದರು .ಹರಿಪ್ರಸಾದ್ ಸ್ವಾಗತಿಸಿ ,ನವೀನ್ ವೇಗಸ್ ವಂದಿಸಿದರು .ಅಮೃತಕಲಾ ಕಾರ್ಯಕ್ರಮ ನಿರೂಪಿಸಿದರು .