50,000 ವರೆಗಿನ ರಿಯಾಯಿತಿ…! ಮೆಗಾ ವಿನಿಮಯ ಮೇಳದಲ್ಲಿ ರೆನಾಲ್ಟ್‌ ಸಂಸ್ಥೆ ಕೊಡುಗೆ

0

ಪುತ್ತೂರು : ಕಾರು ಪ್ರಿಯರ ಮನಗೆದ್ದು ,ಅದ್ಬುತ ರೀತಿಯಲ್ಲಿ ಬುಕ್ಕಿಂಗ್ ಒದಗಿ ಬರಲಿ ಜೊತೆಗೆ ಊಹಿಸಲು ಅಸಾಧ್ಯವಾಗದ ರೀತಿಯಲ್ಲಿ ಕಾರುಗಳು ಮಾರಾಟ ನಡೆಯಲಿ ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಲ್ಯಾಬ್ ಇನ್ ಸ್ಟ್ರಕ್ಟರ್ ಸತೀಶ್ ಕೋಂಗೊಟು ಮಾತನಾಡಿದರು.

ಡಿ.9 ರಂದು ರೆನಾಲ್ಟ್ ಇಂಡಿಯಾ ಇದರ ಮಾರಾಟ,ಸೇವಾ ಸಂಸ್ಥೆ ಮಂಗಳೂರು ಕೂಳೂರು ಬಳಿ ಕಾರ್ಯಚರಿಸುತ್ತಿರುವ’ ಎನಾಕ್ ರೆನಾಲ್ಟ್ ಇದರ ಸಹಸಂಸ್ಥೆ , ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ಇಲ್ಲಿ ಕಾರ್ಯಾಚರಿಸುತ್ತಿರುವ ರೆನಾಲ್ಟ್‌ ಪುತ್ತೂರು ವತಿಯಿಂದ ಕಾರು ಪ್ರಿಯರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಮೆಗಾ ಎಕ್ಸ್ಚೇಂಜ್ ಮೇಳದ ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ , ಶುಭ ಹಾರೈಸಿದರು.

ಈ ಶುಭ ವೇಳೆ ಗಾಯತ್ರಿ ಜ್ಯುವೆಲರ್ಸ್ನ ಸುಶಾಂತ್ ಆಚಾರ್ಯ ಹಾಗೂ ಜಗದೀಶ್ ಆಚಾರ್ಯ , ಸಂಕೀರ್ಣ ಮಾಲಕ ವಾಸುದೇವ ಆಚಾರ್ಯ , ಟೀಂ ಲೀಡರ್ ಕು.ಪವಿತ್ರ ,ಸೇಲ್ಸ್ ಕನ್ಸಲ್ಟಂಟ್ ವಿಶಾಲ್ ,ರಾಕೇಶ್ ,ಸುನೀಲ್ , ಹಾಗೂ ನಮೃತಾ ಸಹಿತ ಸಂಸ್ಥೆಯ ಗ್ರಾಹಕರು ಉಪಸ್ಥಿತರಿದ್ದರು.

ಸೇಲ್ಸ್ ಕನ್ಸಲ್ಟಂಟ್ ವಿಶಾಲ್ ಮಾತನಾಡಿ , ಕಾರು ಪ್ರಿಯರಿಗಾಗಿ ಎರಡು ದಿನಗಳ ಬೃಹತ್ ಎಕ್ಚ್ಸೇಂಜ್ ಹಾಗೂ ಲೋನ್ ಮೇಳವನ್ನೂ ಅಯೋಜಿಸಿದ್ದು ,ಕಾರು ಖರೀದಿ ಮೇಲೆ ರೂಪಾಯಿ ಐವತ್ತು ಸಾವಿರ ರಿಯಾಯಿತಿ ಜೊತೆ , ಸಾಲ ಸೌಲಭ್ಯ ವ್ಯವಸ್ಥೆಯನ್ನೂ ರೆನಾಲ್ಟ್‌ ಕಲ್ಪಿಸಿದೆ.
ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ,ಸುಲಭ ,ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ಖರೀದಿ ಮಾಡಬಹುದು. ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯ ಅವಕಾಶವಿದ್ದು ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಕೋರಿದರು.

50,000 ರಿಯಾಯಿತಿ…!
ಕಾರು ಪ್ರಿಯರಿಗಾಗಿ ರೆನಾಲ್ಟ್‌ ,ವರ್ಷಾಂತ್ಯದ ಕೊಡುಗೆಯಾಗಿ 50 ಸಾವಿರವರೆಗಿನ ರಿಯಾಯಿತಿ ಹಾಗೂ ವಿನಿಮಯ ಕೊಡುಗೆ ಮತ್ತು ಲಾಯಲ್ಟಿ ಸಿಗಲಿದ್ದು , ನೂರಾರಷ್ಟೂ ಸಾಲ ಸೌಲಭ್ಯ ಹಾಗೂ ಹಳೇ ಕಾರಿನ ವಿನಮಯಕ್ಕೂ ಅವಕಾಶ ಒದಗಿಸಿಕೊಟ್ಟಿದ್ದು , ಡಿ.10 ಸಂಜೆ ಮೇಳ ತೆರೆ ಕಾಣಲಿದೆ.
ಇನ್ನೂ ಹೆಚ್ಚು ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9606455070 ಕರೆ ಮಾಡಬಹುದು.

LEAVE A REPLY

Please enter your comment!
Please enter your name here