ಸುದಾನ ಶಾಲೆಯಲ್ಲಿ ಸಾಧಕರ ದಿನದ ಸಂಭ್ರಮ

0

ಶಿಕ್ಷಕರು ಕಾಲ ಕಾಲಕ್ಕೆ ಆಪ್‌ಡೇಟ್ ಆಗಬೇಕು-ಅಶ್ವಿನ್ ಎಲ್.ಶೆಟ್ಟಿ

ಪುತ್ತೂರು: ಶಿಕ್ಷಕರ ವೃತ್ತಿ ಎಂಬುದು ಬಹಳ ಡೇಂಜರಸ್. ಯಾಕೆಂದರೆ ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ವಿಫಲರಾದರೆ ಅಸಂಖ್ಯಾತ ಮಕ್ಕಳು ತಮ್ಮ ಜೀವನವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ಬಿಡುತ್ತದೆ. ಶಿಕ್ಷಕರು ಕಾಲ ಕಾಲಕ್ಕೆ ಅಪ್‌ಡೇಟ್ ಆಗಬೇಕಾಗಿದೆ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿರವರು ಹೇಳಿದರು.


ದ.17 ರಂದು ನೆಹರುನಗರ ಸುದಾನ ವಸತಿಯುತ ಶಾಲೆಯ `ಇರುವುದೊಂದೇ ಭೂಮಿ ಉಳಿಸೋಣ ಬನ್ನಿ’ ಎಂಬ ಪರಿಕಲ್ಪನೆಯೊಂದಿಗೆ ಸಾಧಕರ ದಿನದ ವಾರ್ಷಿಕೋತ್ಸವದಲ್ಲಿ ನಡೆದ ವಿಶೇಷ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಶಿಕ್ಷಕರು ಬೇರೆ ಬೇರೆ ವಿಷಯಗಳಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸುವವರಾಗಬೇಕು. ಮಕ್ಕಳಲ್ಲಿ ಓದುವ ಅಭ್ಯಾಸ ಬರಬೇಕಾದರೆ ಹೆತ್ತವರು ಕೂಡ ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದ ಅವರು ಭವಿಷ್ಯದಲ್ಲಿ ಮಕ್ಕಳನ್ನು ಅವರ ಕಾಲ ಮೇಲೆ ನಿಂತುಕೊಳ್ಳುವಲ್ಲಿ ಮಾಡಿದಾಗ ಹೆತ್ತವರ ಹಾಗೂ ಶಿಕ್ಷಕರ ಶ್ರಮ ಸಾರ್ಥಕವೆನಿಸುತ್ತದೆ. ಪ್ರತಿಯೋರ್ವರೂ ಹೊಸತನಗಳ ಅನ್ವೇಷಣೆಯತ್ತ ಮನಸ್ಸು ಮಾಡಬೇಕು ಜೊತೆಗೆ ಭವಿಷ್ಯದ ಹೆಜ್ಜೆಯನ್ನಿಡುವಾಗ ನಮ್ಮ ನಿರ್ಧಾರಗಳು ಧನಾತ್ಮಕವಾಗಿರಲಿ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ಪ್ರಾಂಶುಪಾಲ ಹಾಗೂ ಆಂಗ್ಲ ಭಾಷಾ ಪ್ರಾಧ್ಯಾಪಕ ಮತ್ತು ಸುದಾನ ಶಾಲೆಯ ಶೈಕ್ಷಣಿಕ ಸಲಹೆಗಾರರಾಗಿರುವ ಡಾ.ಮಾಧವ ಎಚ್.ಭಟ್‌ರವರು ಮಾತನಾಡಿ, ಸುದಾನ ಶಾಲೆಯು ಪ್ರಸ್ತುತ ವರ್ಷ ಭೂಮಿಯ ಉಳಿಸುವಿಕೆ ಬಗ್ಗೆ ಉತ್ತಮ ಧ್ಯೇಯವಾಕ್ಯವನ್ನು ಹೊಂದಿದೆ. ಮಾನವ ಜೀವಿಸುವಲ್ಲಿ ಭೂಮಿಯ ಫಲವತ್ತತೆ ಹಾಗೂ ಪರಿಸರದ ಸಂರಕ್ಷಣೆ ಬಹಳ ಮುಖ್ಯವೆನಿಸುತ್ತದೆ. ಮನುಷ್ಯನ ಸ್ವಭಾವ ಯಾವ ತೆರನಾಗಿರುತ್ತದೆ ಎಂಬುದಾಗಿ ಪರಿಸರ ಹಾಗೂ ಭೂಮಿ ಹೊಂದಿರುತ್ತದೆ. ಸ್ಪರ್ಧಾತ್ಮಕತೆಯು ಮಾನವ ಇತಿಹಾಸ ಹೇಳುವುದಿಲ್ಲ. ನಮ್ಮಲ್ಲಿ ಪರಸ್ಪರ ಸಮನ್ವಯ ಮತ್ತು ಸಹಕಾರವಿದ್ದಾಗ ಸ್ಪರ್ಧೆಯು ಕೂಡ ಆರೋಗ್ಯಕರವಾಗಿರುತ್ತದೆ. ಹೆತ್ತವರು ಯಾವ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾರೆ ಅಲ್ಲಿಗೆ ಅರಸಿಕೊಂಡು ಹೋಗುವುದು ಸ್ವಾಭಾವಿಕ ಎಂದ ಅವರು ನಾವು ಶಿಕ್ಷಣವನ್ನು ಪಡೆದು ದೂರದ ದೇಶಗಳಿಗೆ ಹೋಗಿ ಅಲ್ಲಿ ನಮ್ಮ ಜ್ಞಾನ ಸಂಪನ್ಮೂಲವನ್ನು ಧಾರೆ ಎರೆಯುವ ಬದಲು ಯಾಕೆ ನಮ್ಮ ದೇಶಕ್ಕೆ, ಸಮುದಾಯಕ್ಕೆ ಧಾರೆ ಎರೆಯಬಾರದು. ಮುಂದಿನ 30 ವರ್ಷದಲ್ಲಿ ಭಾರತ ದೇಶವು ಪ್ರಪಂಚದಾದ್ಯಂತ ದೊಡ್ಡ ಕಾರ್ಯ ಶಕ್ತಿಯಾಗಿ ಹೊರ ಹೊಮ್ಮುತ್ತದೆ ಎಂದು ಅವರು ಹೇಳಿದರು.

ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ಉಪಾಧ್ಯಕ್ಷ ರಾಘವೇಂದ್ರ ನಾಯಕ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ  ಮಾಮಚ್ಚನ್ ಎಂರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 2020-21  ಹಾಗೂ 2021-22 ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗಾರಾಜು ಶಾಲಾ ವರದಿ ವಾಚಿಸಿದರು. ಶಿಕ್ಷಕಿಯರಾದ ಲತಾ, ಸವಿತಾ, ಶಾರದಾ, ಶ್ಯಾಮಲಾ ಬಂಗೇರ, ಯೋಗಿತಾ ಪ್ರದೀಪ್‌ರವರು ಎಸೆಸ್ಸೆಲ್ಸಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಹೆಸರನ್ನು ಮತ್ತು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ವಿಜೇತರ ಹೆಸರನ್ನು ಓದಿದರು. ಶಿಕ್ಷಕಿಯರಾದ ಲವೀನಾ ರೋಸ್‌ಲಿನ್ ಹನ್ಸ್ ಸ್ವಾಗತಿಸಿ, ಗಾಯತ್ರಿ ಕೆ ವಂದಿಸಿದರು. ಶಿಕ್ಷಕಿಯರಾದ ಕವಿತಾ ಆಡೂರು ಹಾಗೂ ವಿನುತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವ..
ಕಳೆದ ಸಾಲಿನಲ್ಲಿ ಉತ್ತಮ ಸಾಧನೆಗೈದು ನಿರ್ಗಮಿಸಿದ ಹಿರಿಯ ವಿದ್ಯಾರ್ಥಿಗಳಾದ ಅನನ್ಯ ಎಸ್.ನಾಯಕ್(ರಾಜ್ಯ ಮಟ್ಟದ ಮೈಕ್ರೋಫೇರ್, ಇನ್‌ಸ್ಪಾಯೆರ್ ಅವಾರ್ಡ್), ಶ್ರೇಯಸ್ ಎ.ಸಿ(ರಾಷ್ಟ್ರ ಮಟ್ಟದ ಕ್ರಿಕೆಟ್), ಆದಿತ್ಯ ರಾಮ್ ಕೆ, ಜಯಂತ್ ಸುಧನ್ವ ರೈ, ಅಮಿತ್ ವಿ.ಕೆ, ತನ್ವಿತಾ ಎಂ.ಶೆಟ್ಟಿ, ಪ್ರಥನ ಡಿ.ಆಚಾರ್ಯ, ನೀತಾ ರೈ, ವಿಸ್ಮಯ ಎನ್, ವಿನೀತಾ, ಸೌಮಿತ್ರ ಟಿ.ಎನ್, ಮ್ವಿತಾ ಎಂ.ರೈ, ಕೃಪಾ ರೈ, ನಿಶಿತಾ ಜಿ.ಶೆಟ್ಟಿ, ಜಿ.ದೇವದರ್ಶನ್, ಸುಮಿತ್ ಬನಾರಿ, ಅಕ್ಷಯ ಪಾರ್ವತಿ ಸರೋಳಿ, ಮೇಧ ಭಟ್ ಕೋಟೆ, ಲಿಶೆಲ್ ವಿಲ್ಸಿಯಾ ಲೋಬೊ, ಮನೋಹರ್ ಪಿ.ಪಿ, ಶ್ರಾವ್ಯ ಎಚ್, ಹಾರ್ದಿಕ್ ಆರ್.ನಾಕ್, ರಿಶಿತಾ ಕೆ, ಆಶಿಕಾ ಪಿ.ಎಂ(ರಾಜ್ಯ ಪುರಸ್ಕಾರ್ ಅವಾರ್ಡ್)ರವರುಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ವಚ್ಛತೆಗೆ ಆದ್ಯತೆ..
ಶಾಲೆಯಲ್ಲಿ ನಡೆದ ಮೂರು ದಿನಗಳ ವಾರ್ಷಿಕೋತ್ಸವ ಜಾತ್ರೆಯಲ್ಲಿ ಶಾಲಾ ಕ್ರೀಡಾಂಗಣದಲ್ಲಿ ಚುರುಮುರಿ, ಕಬ್ಬು ಜ್ಯೂಸ್, ಮಸಾಲೆ ಪುರಿ, ಐಸ್‌ಕ್ರೀಂ ಮುಂತಾದ ಸುಮಾರು 30ಕ್ಕೂ ಮಿಕ್ಕಿ ತಿಂಡಿ ತಿನಸುಗಳ ಸ್ಟಾಲ್‌ಗಳು ಗಮನ ಸೆಳೆದವು. ಮಾತ್ರವಲ್ಲದೆ ಪರಿಸರ ಸ್ವಚ್ಛತೆಯಾಗಿಟ್ಟುಕೊಳ್ಳಲು ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿತ್ತು. ಇದರ ಜೊತೆಗೆ ಒಂದೆಡೆ ಹಸಿ ಕಸ ಹಾಗೂ ಒಣ ಕಸದ ಬುಟ್ಟಿಯೂ ಗಮನ ಸೆಳೆಯಿತು. ವಿದ್ಯಾರ್ಥಿಗಳು ಹಾಗೂ ಹೆತ್ತವರು ಈ ಮೂರು ದಿನಗಳ ಸಂಭ್ರಮವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here