ಮೊಟ್ಟೆತ್ತಡ್ಕ ನಿವಾಸಿ, ವಿ.ಆರ್ ಅಸೋಸಿಯೇಟ್ಸ್ ಮಾಲಕ ವಲೇರಿಯನ್ ಮೊಂತೇರೊ ನಿಧನ

0

ಪುತ್ತೂರು: ಏಳ್ಮುಡಿ ಕೆ.ವಿ ಶೆಣೈ ಪೆಟ್ರೋಲ್ ಪಂಪಿನ ಬಳಿ ವ್ಯವಹರಿಸುತ್ತಿದ್ದ ವಿ.ಆರ್ ಅಸೋಸಿಯೇಟ್ಸ್, ಇಂಟರ್ ನ್ಯಾಷನಲ್ ಹಾಲಿಡೇಸ್ ಟೂರ್ಸ್ ಮತ್ತು ಟ್ರಾವೆಲ್ಸ್ ಹಾಗೂ ವಾಹನಗಳ ವಾಯುಮಾಲಿನ್ಯ ಪರೀಕ್ಷಾ ಕೇಂದ್ರ, ಇನ್ಸೂರೆನ್ಸ್ ಪಾಯಿಂಟ್ ಮಾಲಕ, ಮೊಟ್ಟೆತ್ತಡ್ಕ ನಿವಾಸಿ ವಲೇರಿಯನ್ ಮೊಂತೇರೊ(60ವ.) ರವರು ದ.18 ರಂದು ಅಪರಾಹ್ನ ನಿಧನ ಹೊಂದಿದ್ದಾರೆ.


ಮೃತರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಡಯಾಲಿಸಿಸ್ ಗೆ ಒಳಗಾಗಿದ್ದರು. ಎಂದಿನಂತೆ ದ.17 ರಂದು ಮನೆಯ ಸಾಕು ನಾಯಿಯನ್ನು ಬೆಳಗ್ಗಿನ ವಿಹಾರಕ್ಕೆ ಕರೆದುಕೊಂಡು ಹೋಗಿ ಸಂಜೆಯಿಂದ ರಾತ್ರಿ ತನಕ ಮಾಯಿದೆ ದೇವುಸ್ ಚರ್ಚ್ ನಲ್ಲಿ ನಡೆಯುತ್ತಿರುವ ಧಾರ್ಮಿಕ(ರಿಟ್ರೀಟ್) ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

ಮರುದಿನ ಬೆಳಿಗ್ಗೆ ವೀಕ್ನೆಸ್ ಆಗ್ತಿದೆ ಹೇಳಿದ್ದಕ್ಕೆ ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ದಾರಿ ಮಧ್ಯೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.

ಮೃತ ವಲೇರಿಯನ್ ಮೊಂತೇರೊರವರು ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್ ನ ಮಾಜಿ ಅಧ್ಯಕ್ಷರಾಗಿ, ಮೊಟ್ಟೆತಡ್ಕ ವಾಳೆಯ ಗುರಿಕಾರರಾಗಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ತಾಯಿ ಆಲಿಸ್ ಪಾಯಿಸ್, ಪತ್ನಿ ಐರಿನ್ ಡಿ’ಸೋಜಾ, ಪುತ್ರರಾದ ವಿಶಾಲ್, ವಿನೀತ್, ಪುತ್ರಿ ಗಾಯಕಿ ವಿಲ್ಮಾ, ಸಹೋದರ ರೊನಾಲ್ಡ್ ಮೊಂತೇರೊರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here